ETV Bharat / state

ರಾಷ್ಟ್ರದ ವಿವಿಧೆಡೆ ಸಕ್ರಿಯವಾಗಿರುವ ಪಾಕ್ ಏಜೆಂಟ್​ಗಳನ್ನು ಮಟ್ಟ ಹಾಕುತ್ತೇವೆ: ಕೇಂದ್ರ ಸಚಿವ ನಾರಾಯಣಸ್ವಾಮಿ - ಕೇಂದ್ರ ಸಚಿವ ನಾರಾಯಣಸ್ವಾಮಿ

ಪಿಎಸ್ಐ ನೇಮಕಾತಿಯಲ್ಲಿ ಅಕ್ರಮದ ವಾಸನೆ ಬಂದ ಕೂಡಲೇ ಗೃಹ ಸಚಿವರು ತನಿಖೆಗೆ ಆದೇಶಿಸಿದ್ದಾರೆ. ಕಾಂಗ್ರೆಸ್ ಬಳಿ ಯಾವುದಾದರೂ ದಾಖಲೆ ಇದ್ದರೆ ಬಿಡುಗಡೆ ಮಾಡಲಿ. ತಪ್ಪಿತಸ್ಥ ಮಂತ್ರಿಗಳಿದ್ದರೇ ಕೂಡಲೇ ರಾಜೀನಾಮೆ ಕೊಡುತ್ತಾರೆ ಎಂದು ಎ.ನಾರಾಯಣಸ್ವಾಮಿ ಹೇಳಿದರು.

union minister a narayanaswamy
ಕೇಂದ್ರ ಸಚಿವ ನಾರಾಯಣಸ್ವಾಮಿ
author img

By

Published : May 7, 2022, 3:54 PM IST

ಚಾಮರಾಜನಗರ: ಪಾಕಿಸ್ತಾನದಲ್ಲಿ ಸರ್ಕಾರ ಬದಲಾಗುತ್ತಿದ್ದಂತೆ ಐಎಸ್ಐ ಪ್ರೇರಿತ ಪಾಕ್ ಏಜೆಂಟ್​ಗಳು ಹೆಚ್ಚುತ್ತಿದ್ದು, ಅವರನ್ನು ಮಟ್ಟ ಹಾಕುತ್ತೇವೆ ಎಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ರಾಜ್ಯ ಸಚಿವ ಎ.ನಾರಾಯಣಸ್ವಾಮಿ ಹೇಳಿದರು.

ಕೇಂದ್ರ ಸಚಿವ ನಾರಾಯಣಸ್ವಾಮಿ

ಚಾಮರಾಜನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯವಷ್ಟೇ ಅಲ್ಲ ರಾಷ್ಟ್ರದ ವಿವಿಧೆಡೆ ಪಾಕ್ ಏಜೆಂಟ್​ಗಳು ಸಕ್ರಿಯವಾಗಿದ್ದಾರೆ. ಮಂಗಳೂರು, ಕೇರಳದಲ್ಲಿ ಹುಟ್ಟುವ ಈ ಏಜೆಂಟ್​ಗಳು ಎಲ್ಲ ಕಡೆ ವ್ಯಾಪಿಸುತ್ತಿದ್ದಾರೆ. ಆದ್ದರಿಂದಲೇ ಕಾಶ್ಮೀರಕ್ಕೆ ಇದ್ದ ವಿಶೇಷ ಸ್ಥಾನಮಾನ ತೆಗೆದುಹಾಕಿ ರಾಷ್ಟ್ರೀಯತೆ, ಸಾರ್ವಭೌಮತ್ವ ಮೂಡಿಸುವ ಕೆಲಸ ಮಾಡಿದೆವು ಎಂದರು.

ಈಗಾಗಲೇ ಕವಲಂದೆ ಪ್ರಕರಣಕ್ಕೆ ಸಂಬಂಧಿಸಿದ ವ್ಯಕ್ತಿಗಳನ್ನು ಬಂಧಿಸಲಾಗಿದೆ. ಯಾವುದೇ ಕಾರಣಕ್ಕೂ ಸಾರ್ವಭೌಮತ್ವಕ್ಕೆ ಧಕ್ಕೆ ತರುವ ವ್ಯಕ್ತಿಗಳನ್ನು ಸುಮ್ಮನೇ ಬಿಡಲ್ಲ. ಈ ಬಗ್ಗೆ ಸರ್ಕಾರ ಗಂಭೀರವಾಗಿ ತನಿಖೆ ನಡೆಸುತ್ತಿದ್ದು, ನಿರ್ಲಕ್ಷ್ಯ ವಹಿಸುವ ಪ್ರಶ್ನೆಯೇ ಇಲ್ಲ ಎಂದರು.

ಕಾಂಗ್ರೆಸ್​ನದ್ದು ಶೇ.95 ಕಮಿಷನ್ನಾ? : ರಾಜ್ಯದಲ್ಲಿ ಶೇ.40ರಷ್ಟು ಕಮಿಷನ್​ ಸರ್ಕಾರವನ್ನು ಅಮಿತ್ ಶಾ ಒಪ್ಪಿಕೊಂಡಿದ್ದಾರೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಅವರು ಪ್ರತಿಕ್ರಿಯಿಸಿ, ಅಮಿತ್ ಶಾ ಅವರ ಮಾನಸಿಕತೆಯನ್ನು ಸಿದ್ದರಾಮಯ್ಯ ತೀರ್ಮಾನ ಮಾಡುತ್ತಾರಾ?. ರಾಜೀವ್ ಗಾಂಧಿ ಪ್ರಧಾನಿಯಾಗಿದ್ದ ವೇಳೆ ಕೇಂದ್ರ ಸರ್ಕಾರ ಕೊಡುವ ಹಣದಲ್ಲಿ ಫಲಾನುಭವಿಗೆ ಸೇರುವುದು ಕೇವಲ ಶೇ.5ರಷ್ಟು ಎಂದು ಹೇಳಿದ್ದರು. ಆಗ ಬಹುತೇಕ ರಾಜ್ಯಗಳಲ್ಲಿ ಕಾಂಗ್ರೆಸ್​ ಇತ್ತು. ಹಾಗಾದರೆ ಕಾಂಗ್ರೆಸ್​ನವರದ್ದು 95ರಷ್ಟು ಕಮಿಷನ್​ ಸರ್ಕಾರವೇ?. ಇದನ್ನು ಅವರು ಒಪ್ಪಿಕೊಳ್ಳುತ್ತಾರಾ ಎಂದು ಪ್ರಶ್ನಿಸಿದರು.

ಇದೇ ವೇಳೆ, ಸಚಿವ ಅಶ್ವತ್ಥ​ ನಾರಾಯಣ ರಾಜ್ಯಮಟ್ಟದ ನಾಯಕರಾಗಿ ಬೆಳೆಯುತ್ತಿದ್ದಾರೆ. ಆದ್ದರಿಂದ ಅವರ ಸ್ವಜಾತಿಯವರೇ ಅವರನ್ನು ಟಾರ್ಗೆಟ್ ಮಾಡಿ ಹಣಿಯುವ ಪ್ರಯತ್ನ ನಡೆಸಿದ್ದಾರೆ ಎಂದು ಡಿ‌ಕೆ ಸಹೋದರರ ವಿರುದ್ಧ ಆಕ್ರೋಶ ಹೊರಹಾಕಿದರು‌.

ಇದನ್ನೂ ಓದಿ: ಗೃಹ ಸಚಿವ ಮತ್ತು ಅಶ್ವತ್ಥ್​ ನಾರಾಯಣ​ ಮೂಗಿನ ಕೆಳಗೆ ಎಲ್ಲ ನಡೆಯುತ್ತಿದೆ : ಡಿಕೆಶಿ ಆರೋಪ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.