ಕೊಳ್ಳೇಗಾಲ: ಕೊರೊನೊ ವೈರಸ್ ಸೋಂಕಿನಿಂದ ತಪ್ಪಿಸಿಕೊಳ್ಳಲು ಆರೋಗ್ಯ ಇಲಾಖೆ ಹಲವಾರು ನೀತಿ ನಿಯಮಗಳನ್ನು ಪಾಲಿಸುವಂತೆ ಸಾರ್ವಜನಕರಿಗೆ ತಿಳಿಸುತ್ತಿದೆ. ಸೋಂಕಿನಿಂದ ರಕ್ಷಣೆ ಪಡೆಯಲು ಅಗತ್ಯವಿರುವ ಮಾಸ್ಕ್ ಮತ್ತು ಸ್ಯಾನಿಟೈಸರ್ಗಳನ್ನು ಬಳಸಿ ಎಂದು ಸರ್ಕಾರ ಜನರಿಗೆ ಜಾಗೃತಿ ಮೂಡಿಸುತ್ತಿದೆ.
ಇಂತಹ ಸಂದರ್ಭದಲ್ಲಿ ಮೆಡಿಕಲ್ಸ್ಗಳಲ್ಲಿ ಮಾಸ್ಕ್, ಸಾನಿಟೈಸರ್ ಕೊರತೆ ಹೆಚ್ಚಾಗಿದೆ. ಕೆಲವು ಕಡೆ ಅಧಿಕ ದರದಲ್ಲಿ ಮಾರಾಟ ಮಾಡಲಾಗುತ್ತಿದೆ ಎಂಬ ಆರೋಪವು ಇದೆ. ಇದರಿಂದ ಸಾಮಾನ್ಯ ಜನರಿಗೆ ಹಣದುಬ್ಬರ ಹೆಚ್ಚಾಗಿದ್ದು. ಖರೀದಿ ಮಾಡಲು ಕಷ್ಟವಾಗಿದೆ. ಇದ್ದರಿಂದ ಎಚ್ಚತ್ತ ತಾಲೂಕು ಆಡಳಿತ ಮಂಡಳಿ ತಹಶೀಲ್ದಾರ್ ಕೆ.ಕುನಾಲ್ ನೇತೃತ್ವದಲ್ಲಿ ಮೆಡಿಕಲ್ ಮಾಲೀಕರ ಜೊತೆ ಸಭೆ ನಡೆಸಿದೆ.
ಸಕಾಲದಲ್ಲಿ ಮೆಡಿಕಲ್ಗಳಲ್ಲಿ ಮಾಸ್ಕ್ ಮತ್ತು ಸಾನಿಟೈಸರ್ ಖರೀದಿಗೆ ಸಿಗಬೇಕು, ಅಧಿಕ ಬೆಲೆಗೆ ಮಾರಾಟ ಮಾಡದೇ ಖರೀದಿ ಬೆಲೆಗೆ ನೀಡಬೇಕು ಎಂದು ತಹಶೀಲ್ದಾರ್ ತಾಲೂಕಿನ ಮೆಡಿಕಲ್ ಮಾಲೀಕರ ಸಂಘಕ್ಕೆ ಸೂಚನೆ ನೀಡಿದ್ದಾರೆ. ಅಭಾವ ಹೆಚ್ಚಾದ್ದರಿಂದ ಎಲ್ಲ ಮೆಡಿಕಲ್ಗಳಲ್ಲಿ ಸಿಗುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಲಾಗಿದೆ.
ಬೆಂಗಳೂರು ಹಾಗೂ ಮೈಸೂರಿನಿಂದ ಮೆಡಿಸನ್ ಖರೀದಿ ಮಾಡಲು ಅವಕಾಶ ಮಾಡಿಕೊಡಲಾಗುತ್ತದೆ. ವಾಹನ ಮತ್ತು ಚಾಲಕನ ದಾಖಲಾತಿ ನೀಡಿದರೆ ತಾಲೂಕು ಆಡಳಿತ ಅವಕಾಶ ನೀಡುತ್ತದೆ ಎಂದಿದ್ದಾರೆ.