ಚಾಮರಾಜನಗರ: ತಮಿಳುನಾಡಿನ ಮೆಟ್ಟೂರಿನಿಂದ ಕೊಳ್ಳೇಗಾಲಕ್ಕೆ ಬರುತ್ತಿದ್ದ ತಮಿಳುನಾಡಿನ ಸಾರಿಗೆ ಸಂಸ್ಥೆ ಬಸ್ ಟೈರ್ ಸ್ಫೋಟಗೊಂಡು ರಸ್ತೆ ಪಕ್ಕಕ್ಕೆ ಬಂದು ನಿಂತ ಘಟನೆ ಹನೂರು ತಾಲೂಕಿನ ಅಜ್ಜೀಪುರ ಸಮೀಪ ನಡೆದಿದೆ.
ಅದೃಷ್ಟವಶಾತ್ ಬಸ್ಸಿನ ಅಕ್ಕಪಕ್ಕ ಯಾವುದೇ ವಾಹನಗಳಾಗಲಿ ಏನೂ ಆಗಿಲ್ಲ. ಜೊತೆಗೆ ಬಸ್ ನಿಧಾನಗತಿಯಲ್ಲಿದ್ದರಿಂದ ದೊಡ್ಡ ಅನಾಹುತವೊಂದು ತಪ್ಪಿದೆ. ಬಸ್ನಲ್ಲಿ ಎಲ್ಲಾ ಆಸನಗಳು ಭರ್ತಿಯಾಗಿದ್ದು ಎಂಬ ಮಾಹಿತಿ ಗೊತ್ತಾಗಿದ್ದು, 20 ಮಂದಿ ಪ್ರಯಾಣಿಕರು ಸಣ್ಣಪುಟ್ಟ ಗಾಯಗೊಂಡು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಅಲ್ಲಿನ ಸಾರಿಗೆ ಡಿಪೋ ರಿಬಿಲ್ಟ್ ಟೈರನ್ನು ಬಳಸಿದ್ದೇ ಈ ಅವಘಡಕ್ಕೆ ಕಾರಣ ಎನ್ನಲಾಗಿದ್ದು ಸದ್ಯ ರಾಮಾಪುರ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಗಾಯಾಳುಗಳನ್ನು ಹನೂರು ಆಸ್ಪತ್ರೆಗೆ ರವಾನಿಸಲಾಗಿದೆ.
ಇದನ್ನೂ ಓದಿ:ನವದಂಪತಿ ಆತ್ಮಹತ್ಯೆ: ಒಟ್ಟಿಗೆ ಬದುಕಲು ಬಯಸಿದವರು, ಒಟ್ಟಿಗೆ ಕೊನೆಯುಸಿರೆಳೆದರು