ಚಾಮರಾಜನಗರ: ಮುಧೋಳ್ ಹಾಗೂ ಜೆರ್ಮನ್ ಶೆಫರ್ಡ್ ಎರಡು ಕೂಡ ಬೇಟೆ ನಾಯಿಗಳಾಗಿದ್ದರೂ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ಕಾಡು ಕಾವಲಿಗೆ ಜರ್ಮನ್ ಶೆಫರ್ಡ್ ತಳಿಯ ಶ್ವಾನವೇ ಸೂಕ್ತ ಎಂದು ಅರಣ್ಯ ಇಲಾಖೆ ಅಭಿಪ್ರಾಯವ್ಯಕ್ತ ಪಡಿಸಿದೆ.
ಕಾಡುಗಳ್ಳರ ಹಾವಳಿಯನ್ನು ತಡೆಯಲು ಈ ಹಿಂದೆ ಜರ್ಮನ್ ಶೆಫರ್ಡ್ ತಳಿಯ ರಾಣಾ ಎಂಬ ಶ್ವಾನವು ಹಲವಾರು ಅರಣ್ಯ ಅಪರಾಧಗಳ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿತ್ತು. ಇದೀಗ ಅದರ ಸ್ಥಾನವನ್ನು ತುಂಬಲು ದೇಸಿ ತಳಿಯಾದ ಮುಧೋಳ್ ನಾಯಿಗಳನ್ನು ಬಳಸಿಕೊಳ್ಳಲು ಅರಣ್ಯ ಇಲಾಖೆ ಮುಂದಾಗಗಿದ್ದು, ಮಾರ್ಗಿ ಮತ್ತು ರಾಕಿ ಎಂಬ ಮುಧೋಳ್ ತಳಿಯ ಶ್ವಾನಗಳಿಗೆ ಸಾಕಷ್ಟು ತರಬೇತಿ ನೀಡಿದ್ದರು, ಕಮಾಂಡಿಗ್ ಕೇಳುವಲ್ಲಿ ವಿಫಲವಾಗಿವೆ. ಅದಕ್ಕಾಗಿ ಜರ್ಮನ್ ಶೆಫರ್ಡ್ ತಳಿಯ ಶ್ವಾನವೆ ಸೂಕ್ತ ಎಂದು ಇಲಾಖೆ ನಿರ್ಧರಿಸಿದೆ.
ಈ ಕುರಿತು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕ ರಮೇಶ್ ಕುಮಾರ್ ಮಾತನಾಡಿ, ಮುಧೋಳ್ ಶ್ವಾನವೇನೂ ಅಲ್ಲಗಳೆಯವಷ್ಟು ನಿಶ್ಯಕ್ತಿ ನಾಯಿಗಳಲ್ಲ, ಆದರೆ ಅವುಗಳು ಬಂಡೀಪುರಕ್ಕೆ ಪಳಗುತ್ತಿಲ್ಲ, ಟ್ರೇನ್ ಆಗಿಲ್ಲವಾದ್ದರಿಂದ ಜರ್ಮನ್ ಶೆಫರ್ಡ್ ತಳಿಯ ಶ್ವಾನವನ್ನೇ ಕಾಡಿನ ಕಾವಲಿಗೆ ಸೂಕ್ತ ಎಂಬ ಅಭಿಪ್ರಾಯ ಬಂದಿದ್ದು ಕೆಲವೇ ತಿಂಗಳುಗಳಲ್ಲಿ ಜರ್ಮನ್ ಶೆಪರ್ಡ್ ತಳಿಯ ಶ್ವಾನವನ್ನೇ ರಾಣಾ ಸ್ಥಾನಕ್ಕೆ ನಿಯೋಜಿಸಲಾಗುತ್ತದೆ. ಬಂಡೀಪುರದಲ್ಲಿರುವ ಎರಡು ಮುಧೋಳ್ ಶ್ವಾನಗಳಲ್ಲಿ ಒಂದು ಆರೋಗ್ಯಕರವಾಗಿಲ್ಲ ಮತ್ತೊಂದು ತರಬೇತಿಗೆ ಹೊಂದಿಕೊಳ್ಳುತ್ತಿಲ್ಲ ಎಂದು ತಿಳಿಸಿದರು.
ಇದೀಗ ಮತ್ತೊಮ್ಮೆ ಜರ್ಮನ್ ಶಫರ್ಡ್ ತಳಿಯ ಶ್ವಾನ ಅರಣ್ಯ ಇಲಾಖೆಗೆ ಸೇವೆಸಲ್ಲಿಸಲು ನಿಯೋಜನೆಗೊಳ್ಳುತ್ತಿದೆ.
ಇದನ್ನೂ ಓದಿ: ಉದ್ಯೋಗ ನೀತಿ 2022-25ಕ್ಕೆ ಸಚಿವ ಸಂಪುಟ ಸಭೆ ಅನುಮೋದನೆ: ಹೆಚ್ಚುವರಿ ಹೂಡಿಕೆಗೆ ಸ್ಥಳೀಯರಿಗೆ ಹೆಚ್ಚುವರಿ ಉದ್ಯೋಗ