ETV Bharat / state

ಕಾರಲ್ಲಿ ಗಾಂಜಾ ಸಾಗಿಸುತ್ತಿದ್ದ ನಾಲ್ವರ ಬಂಧನ;  ಎರಡು ಕೆಜಿ ಮಾದಕವಸ್ತು ವಶ! - ಚಾಮರಾಜನಗರ ಪೊಲೀಸರಿಂದ ಗಾಂಜಾ ಆರೋಪಿಗಳ ಬಂಧನ

ಕಾರಲ್ಲಿ ಮೈಸೂರಿಗೆ ಅಕ್ರಮವಾಗಿ ಗಾಂಜಾ ಸಾಗಿಸುತ್ತಿದ್ದ ನಾಲ್ವರು ಆರೋಪಿಗಳನ್ನು ಚಾಮರಾಜನಗರ ಹೊರವಲಯದ ದೊಡ್ಡರಾಯಪೇಟೆ ಗೇಟ್ ಬಳಿ ಪೊಲೀಸರು ಬಂಧಿಸಿದ್ದಾರೆ.

ganja transpoters arrested by chamrajnagar police
ಬಂಧನ
author img

By

Published : Sep 12, 2020, 6:46 PM IST

ಚಾಮರಾಜನಗರ: ಗಾಂಜಾ ಸಾಗಿಸುತ್ತಿದ್ದ ನಾಲ್ವರನ್ನು ಸಿಇಎನ್ ಪೊಲೀಸರು ಬಂಧಿಸಿರುವ ಘಟನೆ ಚಾಮರಾಜನಗರ ಹೊರವಲಯದ ದೊಡ್ಡರಾಯಪೇಟೆ ಗೇಟ್ ಬಳಿ ನಡೆದಿದೆ‌.

ನಾಲ್ವರ ಬಂಧನ
ನಗರದ ಗಾಳಿಪುರ ನಿವಾಸಿ ಸೈಯದ್ ರುಮಾನ್ ( 25), ಮೈಸೂರಿನ ಜಯನಗರ ನಿವಾಸಿ ವೆಂಕಟೇಗೌಡ(23), ಹನೂರು ತಾಲೂಕಿನ ಕುರಟ್ಟಿ ಹೊಸೂರಿನ ಗೋವಿಂದರಾಜು(23) ಗಾಳಿಪುರ ನಿವಾಸಿ ಮಹಮ್ಮದ್ ಅಲ್ತಾಫ್ (55) ಬಂಧಿತ ಆರೋಪಿಗಳು. ಬಂಧಿತರು ಹನೂರು ತಾಲೂಕಿನ ಓರ್ವನಿಂದ ಒಣ ಗಾಂಜಾವನ್ನು 1 ಲಕ್ಷ ರೂ.ಗೆ ಖರೀದಿಸಿ ಮೈಸೂರಿಗೆ ಸಾಗಿಸುತ್ತಿದ್ದರು ಎಂದು ತಿಳಿದು ಬಂದಿದೆ. ನಾಲ್ವರಲ್ಲಿ ಮೂವರು ಯುವಕರಾಗಿರುವುದು ಆತಂಕಕಾರಿಯಾಗಿದ್ದು, ಗಡಿ ಜಿಲ್ಲೆಯಲ್ಲಿ ಗಾಂಜಾ ಘಾಟು ಸಕ್ರಿಯವಾಗಿರುವುದು ಸಾಬೀತಾಗಿದೆ. ಬಂಧಿತ ಆರೋಪಿಗಳಿಗೆ ಕೊರೊನಾ ಟೆಸ್ಟ್ ಮಾಡಿಸಿ ನೆಗೆಟಿವ್ ಎಂದು ದೃಢವಾದ ಬಳಿಕ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.