ETV Bharat / state

ಚಾಮರಾಜನಗರ ಭೂರಕ್ಷಕ ಗಣಪತಿಯ ಅದ್ಧೂರಿ ಶೋಭಾಯಾತ್ರೆ: 16 ತಾಸು ಮೆರವಣಿಗೆ ಬಳಿಕ ನಿಮಜ್ಜನ - chamarajanagara ganesha immersion

ಸೋಮವಾರದಂದು ಭೂರಕ್ಷಕ ಗಣಪತಿಯ ನಿಮಜ್ಜನ ಶೋಭಾಯಾತ್ರೆ ವಿಜೃಂಭಣೆಯಿಂದ ನಡೆಯಿತು.‌

ganesha immersion at chamarajanagara
ಚಾಮರಾಜನಗರ ಭೂರಕ್ಷಕ ಗಣಪತಿ ನಿಮಜ್ಜನ
author img

By

Published : Nov 2, 2021, 9:26 AM IST

ಚಾಮರಾಜನಗರ: ನಗರದ ರಥ ಬೀದಿಯಲ್ಲಿ ಶ್ರೀ ವಿದ್ಯಾ ಗಣಪತಿ ಮಂಡಳಿ ವತಿಯಿಂದ ಪ್ರತಿಷ್ಠಾಪನೆ ಮಾಡಿದ್ದ ಭೂರಕ್ಷಕ ಗಣಪತಿ ನಿಮಜ್ಜನ ಶೋಭಾಯಾತ್ರೆ ನಿನ್ನೆ ವಿಜೃಂಭಣೆಯಿಂದ ಜರುಗಿತು.‌

ಸೋಮವಾರ ಬೆಳಗ್ಗೆ 10.30ಕ್ಕೆ ಸಚಿವ ವಿ. ಸೋಮಣ್ಣ ಪೂಜೆ‌ ಸಲ್ಲಿಸಿದ ಬಳಿಕ ಆರಂಭವಾದ ಗಣಪತಿ ಮೆರವಣಿಗೆ ಜಾನಪದ ಕಲಾತಂಡಗಳೊಂದಿಗೆ ನಗರದಾದ್ಯಂತ ನಡೆಯಿತು.‌ ಬರೋಬ್ಬರಿ 16 ತಾಸು ನಡೆದ ಉತ್ಸವದ ಬಳಿಕ ಮಂಗಳವಾರ ಮುಂಜಾನೆ ದೊಡ್ಡರಸನ‌ ಕೊಳದಲ್ಲಿ ಕ್ರೇನ್ ಸಹಾಯದಿಂದ ಮೂರ್ತಿಯನ್ನು ನಿಮಜ್ಜನಗೊಳಿಸಲಾಯಿತು. ಸರ್ಕಲ್​ನ ಮಸೀದಿ ಮುಂಭಾಗ ಗಣಪತಿ ಮೆರವಣಿಗೆ ಹಾದು ಹೋಗುವಾಗ ಶಾಂತಿ-ಸುವ್ಯವಸ್ಥೆಯ ದೃಷ್ಟಿಯಿಂದ ಡಿಸಿ ಡಾ.ಎಂ.ಆರ್ ರವಿ, ಎಸ್ಪಿ ದಿವ್ಯಾ ಸಾರಾ ಥಾಮಸ್ ಸ್ಥಳದಲ್ಲಿ ಹಾಜರಿದ್ದರು.

ಇದನ್ನೂ ಓದಿ: ಸರ್ಕಾರಕ್ಕೆ ಸೆಡ್ಡು ಹೊಡೆದ ಗ್ರಾಮಸ್ಥರು: 2ಕಿ.ಮೀ. ರಸ್ತೆ ದುರಸ್ತಿಗೆ ಚಾಲನೆ ನೀಡಿದ ಹಾಲುಮತ ಗುರುಪೀಠದ ಶ್ರೀಗಳು

ಗಣಪತಿ ಮೆರವಣಿಗೆಯಲ್ಲಿ ಪೊಲೀಸರೇ ಹೆಚ್ಚಾಗಿ ಕಂಡುಬರುವುದರಿಂದ ಈ ವಿದ್ಯಾ ಗಣಪತಿಯನ್ನು ಪೊಲೀಸ್ ಗಣಪತಿ, ಹಿಂದೂ ಪರ ಸಂಘಟನೆಗಳು ಪ್ರತಿಷ್ಠಾಪಿಸುವುದರಿಂದ ಆರ್​​​ಎಸ್ಎಸ್ ಗಣಪತಿ ಎಂದು ಕರೆಯಲಾಗುತ್ತದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.