ETV Bharat / state

ಮಾದಪ್ಪನ ಸನ್ನಿಧಿಯಲ್ಲಿ ಜೂಜಾಟ: 10 ಮಂದಿ ಅರೆಸ್ಟ್​​​ - ಚಾಮರಾಜನಗರ ಸುದ್ದಿ

ಕರ್ನಾಟಕದ ಪ್ರಮುಖ ತೀರ್ಥ ಕ್ಷೇತ್ರವಾದ ಮಲೆಮಹದೇಶ್ವರ ಬೆಟ್ಟದಲ್ಲಿ ಜೂಜಾಡುತ್ತಿದ್ದ 10 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

gambling
gambling
author img

By

Published : Mar 2, 2020, 7:31 AM IST

ಚಾಮರಾಜನಗರ: ಕರ್ನಾಟಕದ ಪ್ರಮುಖ ತೀರ್ಥ ಕ್ಷೇತ್ರವಾದ ಮಲೆಮಹದೇಶ್ವರ ಬೆಟ್ಟದಲ್ಲಿ ಜೂಜಾಡುತ್ತಿದ್ದ 10 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ಕ್ಷೇತ್ರದಲ್ಲಿನ ಸಾಲೂರು ಸ್ಮಾರಕ ಭವನದ ಸನಿಹದಲ್ಲೇ ಜೂಜಾಟದಲ್ಲಿ ತೊಡಗಿದ್ದ ಖಚಿತ ಮಾಹಿತಿ ಮೇರೆಗೆ ಮಲೆಮಹದೇಶ್ವರ ಬೆಟ್ಟ ಪೊಲೀಸರು ದಾಳಿ ನಡೆಸಿ ಜೂಜುಕೋರರನ್ನು ಬಂಧಿಸಿದ್ದಾರೆ. ಪಣಕಿಟ್ಟಿದ್ದ 39,400 ರೂ. ವಶಪಡಿಸಿಕೊಂಡಿದ್ದಾರೆ.

ಬಂಧಿತರೆಲ್ಲರೂ ಮಹದೇಶ್ವರ ಬೆಟ್ಟ ಹಾಗೂ ಬೆಟ್ಟದ ತಪ್ಪಲಿನ ಮೆದಗಣಾನೆ, ತೋಕೆರೆ, ಕಾಡಂಚಿನ ಗ್ರಾಮಸ್ಥರು ಎಂದು ತಿಳಿದುಬಂದಿದ್ದು, ಮಲೆಮಹದೇಶ್ವರ ಬೆಟ್ಟದಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.