ಚಾಮರಾಜನಗರ: ಜಿಪಂ ನೂತನ ಸಿಇಒ ಆಗಿ ಸತ್ಯಭಾಮ ಅವರನ್ನು ವರ್ಗಾವಣೆ ಮಾಡುವಂತೆ ಸರ್ಕಾರ ಆದೇಶ ಹೊರಡಿಸುವ ಮೂಲಕ ಗಡಿ ಜಿಲ್ಲೆಗೆ ಮತ್ತಷ್ಟು ಶಕ್ತಿ ಬಂದಿದ್ದು, ಪ್ರಮುಖ ಆಯಕಟ್ಟಿನ ಜಾಗದಲ್ಲಿ ಮಹಿಳಾ ಶಕ್ತಿ ಮೇಳೈಸಿದೆ.
ಜಿಲ್ಲಾಧಿಕಾರಿಯಾಗಿ ಬಿ.ಬಿ ಕಾವೇರಿ, ಎಸಿಯಾಗಿ ನಿಖಿತಾ ಚಿನ್ನಸ್ವಾಮಿ, ಎಎಸ್ಪಿಯಾಗಿ ಗೀತಾ ಪ್ರಸನ್ನ ಈಗ ಸಿ.ಸತ್ಯಭಾಮಾ ನೂತನ ಜಿಪಂ ಸಿಇಒ ಆಗುವ ಮೂಲಕ ಗಡಿ ಜಿಲ್ಲೆಯಲ್ಲಿ ಮಹಿಳಾ ಆಧಿಕಾರಿಗಳ ಪವರ್ನ ಖದರ್ ಹೆಚ್ಚಿದಂತಾಗಿದೆ.
ಜಿಲ್ಲೆಯಲ್ಲಿ ಬಾಲ್ಯ ವಿವಾಹ ಹೆಚ್ಚಿರುವ ಜೊತೆಗೆ ವಿದ್ಯಾರ್ಥಿನಿಯರು ಹಾಗೂ ಯುವತಿಯರು ಅರ್ಧಕ್ಕೆ ಶಿಕ್ಷಣ ಬಿಡುವುದನ್ನು ನಿಲ್ಲಿಸಲು ಮಹಿಳಾ ಅಧಿಕಾರಿಗಳು ಮುಂದಾಗಬೇಕಿದ್ದು, ಜಿಲ್ಲೆಯ ಮಹಿಳೆಯರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಈ ಪವರ್ಫುಲ್ ಮಹಿಳೆಯರು ಪ್ರೇರಣೆಯಾಗಿದ್ದಾರೆ.
ಒಟ್ಟಿನಲ್ಲಿ ದಕ್ಷತೆ, ಕಾರ್ಯಕ್ಷಮತೆಯಲ್ಲಿ ಯಾರಿಗೇನು ಕಮ್ಮಿ ಇಲ್ಲದ ಈ ಪವರ್ಫುಲ್ ಮಹಿಳೆಯರು ಜಿಲ್ಲೆಯ ಅಭಿವೃದ್ಧಿಗೆ ಮತ್ತಷ್ಟು ಶಕ್ತಿ ತುಂಬಬೇಕಿದೆ.