ETV Bharat / state

ಗಡಿ ಜಿಲ್ಲೆಯಲ್ಲಿ ಜಂಪಿಂಗ್ ಶೋ... ಕಮಲ - ಕೈ ನಡುವೆ ಪಕ್ಷಾಂತರ ಪರ್ವ

ಚಾಮರಾಜನಗರ ಜಿಲ್ಲೆಯಲ್ಲಿ ಪಕ್ಷಾಂತರ ಪರ್ವ ಜೋರಾಗಿದೆ. ಈ ಹಿಂದೆ ಕೆಲವೇ ಮತಗಳ ಅಂತರದಲ್ಲಿ ಪರಾಭವಗೊಂಡಿದ್ದ ಬಿಜೆಪಿ ನಾಯಕರೊಬ್ಬರು ಕಾಂಗ್ರೆಸ್​ ಸೇರಲು ಮುಂದಾಗಿದ್ದಾರೆ ಎನ್ನಲಾಗುತ್ತಿದೆ. ಮತ್ತೊಂದೆಡೆ ಕಾಂಗ್ರೆಸ್​​ನ ಇಬ್ಬರು ಮುಖಂಡರು ಕಮಲ ಮುಡಿಯಲು ಸಿದ್ಧತೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

author img

By

Published : Apr 2, 2019, 3:52 PM IST

ಸಾಂದರ್ಭಿಕ ಚಿತ್ರ

ಚಾಮರಾಜನಗರ: ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಒಂದು ಪಕ್ಷದಲ್ಲಿನ ಅತೃಪ್ತರು ಮತ್ತೊಂದು ಪಕ್ಷಕ್ಕೆ ಹಾರಲು ಸಿದ್ಧತೆ ನಡೆಸುತ್ತಿದ್ದಾರೆ ಎಂದು ಜಿಲ್ಲೆಯ ಕಾಂಗ್ರೆಸ್ ಮತ್ತು ಬಿಜೆಪಿಯ ಮೂಲಗಳು ತಿಳಿಸಿವೆ.

ಇತ್ತೀಚಿಗಷ್ಟೆ ಮಾಜಿ ಸಂಸದ ಕಾಗಲವಾಡಿ ಶಿವಣ್ಣ ಕಮಲ ತೊರೆದು ಕೈ ಹಿಡಿದಿದ್ದರು. ಬಳಿಕ, ಕಾಂಗ್ರೆಸ್​ ಮುಖಂಡ ಕೊಡಸೋಗೆ ಶಿವಬಸಪ್ಪ ಕೈ ಕೊಟ್ಟು ಕಮಲ ಮುಡಿದಿದ್ದರು.

ಈ ಹಿಂದೆ ನಂಜನಗೂಡಿನಲ್ಲಿ ವಿ.ಶ್ರೀನಿವಾಸ್ ಪ್ರಸಾದ್ ಅವರಿಂದ ಕೆಲವೇ ಮತಗಳ ಅಂತರದಲ್ಲಿ ಪರಾಭವಗೊಂಡಿದ್ದ ನಾಯಕರೊಬ್ಬರು ಮತ್ತು ಬಿಜೆಪಿಯ ಮಾಜಿ ಶಾಸಕರೊಬ್ಬರು ಕಾಂಗ್ರೆಸ್​ಗೆ ಬರಲು ಉತ್ಸುಕರಾಗಿದ್ದಾರೆ ಎಂದು ತಿಳಿದುಬಂದಿದೆ.

ಇನ್ನು, ಕೈ ಪಾಳೆಯದಿಂದ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್​ ತಪ್ಪಿಸಿಕೊಂಡಿದ್ದ ಇಬ್ಬರು ದಲಿತ ಮುಖಂಡರು ಕೈತೊರೆಯಲು ಸಿದ್ಧತೆ ನಡೆಸಿದ್ದು, ಪಕ್ಷದ ನಾಯಕರ ಮನವೊಲಿಕೆಗೆ ತಲೆ ಬಾಗುವರೋ ಇಲ್ಲಾ ಪಕ್ಷ ನಿಷ್ಠೆ ತೋರುವವರೋ ಎಂಬುದನ್ನು ಕಾಲವೇ ನಿರ್ಧರಿಸಬೇಕಿದೆ.

ಪ್ರಚಾರದಲ್ಲಿ ಸಂಸದ ಧ್ರುವ ಮುಂದೆ:

ಇನ್ನು, ಜಿಲ್ಲೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ನೇರ ಹಣಾಹಣೆಯಿದ್ದು ಪ್ರಚಾರದಲ್ಲಿ ಹಾಲಿ ಸಂಸದ ಧ್ರುವನಾರಾಯಣ ಮುಂದಿದ್ದಾರೆ. ಒಂದೆಡೆ 10 ವರ್ಷಗಳಲ್ಲಿ ತಾವು ಮಾಡಿದ ಅಭಿವೃದ್ಧಿ ಕಾರ್ಯಕ್ರಮಗಳನ್ನು ಜಿಲ್ಲೆಯ ಜನರಿಗೆ ತಲುಪಿಸುವ ಪ್ರಯತ್ನದಲ್ಲಿ ಧ್ರುವನಾರಾಯಣ ಸಾಗುತ್ತಿದ್ದಾರೆ. ಮತ್ತೊಂದೆಡೆ ಬಿಎಸ್​ಪಿ ಅಭ್ಯರ್ಥಿ ಡಾ.ಶಿವಕುಮಾರ್ ಕೂಡ ಕಾಲಿಗೆ ಚಕ್ರ ಕಟ್ಟಿಕೊಂಡು ಮತ ಬೇಟೆgಎ ಇಳಿದಿದ್ದಾರೆ.

ಒಟ್ಟಿನಲ್ಲಿ ಅಬ್ಬರದ ಪ್ರಚಾರದ ನಡುವೆ ಪಕ್ಷ ತೊರೆಯುವ ಮುಖಂಡರಾರು? ಪಕ್ಷಕ್ಕಾಗುವ ಅನುಕೂಲ ಹಾಗೂ ಅನಾನುಕೂಲ ಏನು ಅನ್ನೋದು ಚುನಾವಣಾ ಫಲಿತಾಂಶ ಬಂದ ಮೇಲೆಯೇ ತಿಳಿಯಲಿದೆ.

Intro:ಗಡಿಜಿಲ್ಲೆಯಲ್ಲಿ ಜಂಪಿಂಗ್ ಶೋ... ಕಮಲ- ಕೈ ನಡುವೆ ಪಕ್ಷಾಂತರ ಪರ್ವ !?

ಚಾಮರಾಜನಗರ: ಚುನಾವಣೆ ಸಮಯದಲ್ಲಿ ಒಂದು ಪಕ್ಷದಲ್ಲಿನ ಅತೃಪ್ತರು ಮತ್ತೊಂದು ಪಕ್ಷಕ್ಕೆ ಹಾರಲು ಸಿದ್ಧತೆ ನಡೆಸುತ್ತಿದ್ದಾರೆ ಎಂದು ಜಿಲ್ಲೆಯ ಕಾಂಗ್ರೆಸ್ ಮತ್ತು ಬಿಜೆಪಿಯ ಮೂಲಗಳು ತಿಳಿಸಿವೆ.

Body:ಇತ್ತೀಚೆಗಷ್ಟೆ ಮಾಜಿ ಸಂಸದ ಕಾಗಲವಾಡಿ ಶಿವಣ್ಣ ಕಮಲ ತೊರೆದು ಕೈ ಹಿಡಿದಿದ್ದರು. ಬಳಿಕ,  ಕಾಂಗ್ರೆಸ್ ಮುಖಂಡ ಕೊಡಸೋಗೆ ಶಿವಬಸಪ್ಪ ಕೈ ಕೊಟ್ಟು ಕಮಲ ಮುಡಿದಿದ್ದಾರೆ.

ಈ ಹಿಂದೆ ನಂಜನಗೂಡಿನಲ್ಲಿ ವಿ.ಶ್ರೀನಿವಾಸ್ ಪ್ರಸಾದ್ ರಿಂದ ಕೆಲವೇ ಮತಗಳ ಅಂತರದಲ್ಲಿ ಪರಾಭವಗೊಂಡಿದ್ದ ನಾಯಕರೊಬ್ಬರು ಮತ್ತು ಬಿಜೆಪಿಯ ಮಾಜಿ ಶಾಸಕರೊಬ್ಬರು ಕಾಂಗ್ರೆಸ್ ಗೆ ಬರಲು ಉತ್ಸುಕರಾಗಿದ್ದಾರೆ ಎಂದು ತಿಳಿದುಬಂದಿದೆ.

ಇನ್ನು,ಕೈ ಪಾಳೆಯದಿಂದ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್ ತಪ್ಪಿಸಿಕೊಂಡಿದ್ದ ಇಬ್ಬರು ದಲಿತ ಮುಖಂಡರು ಕೈ ತೊರೆಯಲು ಸಿದ್ಧತೆ ನಡೆಸಿದ್ದು ಪಕ್ಷದ ನಾಯಕರ ಮನವೊಲಿಕೆಗೆ ತಲೆ ಬಾಗುವರೋ ಇಲ್ಲಾ ಪಕ್ಷ ನಿಷ್ಠೆ ತೋರುವವರೋ ಕಾಲವೇ ನಿರ್ಧರಿಸಬೇಕಿದೆ.

ಪ್ರಚಾರದಲ್ಲಿ ಸಂಸದ ಧ್ರುವ ಮುಂದೆ: 

ಇನ್ನು, ಜಿಲ್ಲೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ನೇರ ಹಣಾಹಣಯಿದ್ದು ಪ್ರಚಾರದಲ್ಲಿ ಹಾಲಿ ಸಂಸದ ಧ್ರುವನಾರಾಯಣ ಮುಂದಿದ್ದಾರೆ.

೧೦ ವರ್ಷದಲ್ಲಿ ತಾವು ಮಾಡಿದ ಅಭಿವೃದ್ಧಿ ಕಾರ್ಯಕ್ರಮಗಳನ್ನು ಜಿಲ್ಲೆಯ ಜನರಿಗೆ ತಲುಪಿಸುವ ಪ್ರಯತ್ನದಲ್ಲಿ ಸಾಗಿದ್ದಾರೆ.

ಇನ್ನು, ಬಿಎಸ್ ಪಿ ಅಭ್ಯರ್ಥಿ ಡಾ.ಶಿವಕುಮಾರ್ ಕೂಡ ಕಾಲಿಗೆ ಚಕ್ರ ಕಟ್ಟಿಕೊಂಡು ಸುತ್ತುತ್ತಿದ್ದು ಯುವಕರ ಮೂಲಕ ಹಿರಿಯರ ಮತ ಸೆಳೆಯಲು ಯತ್ನಿಸುತ್ತಿದ್ದಾರೆ.

Conclusion:ಒಟ್ಟಿನಲ್ಲಿ ಅಬ್ಬರದ ಪ್ರಚಾರದ ನಡುವೆ ಪಕ್ಷ ತೊರೆಯುವವ ಮುಖಂಡರ್ಯಾರು ಪಕ್ಷಕ್ಕಾಗುವ ಪ್ಲಸ್- ಮೈನಸ್ ಚಿಂತೆ ಕಾರ್ಯಕರ್ತರದ್ದಾಗಿದೆ.

[[[[ ಸೂಕ್ತವಾದ ಪಕ್ಷದ ಚಿಹ್ನೆಗಳ ಫೈಲ್ ಫೋಟೋ ಬಳಸಿ]]]
ETV Bharat Logo

Copyright © 2024 Ushodaya Enterprises Pvt. Ltd., All Rights Reserved.