ಕೊಳ್ಳೇಗಾಲ(ಚಾಮರಾಜನಗರ) : ಅರಣ್ಯ ಇಲಾಖೆಯ ಬಫರ್ ಝೋನ್ ಉಪ್ಪಳ್ಳ ಅರಣ್ಯ ಪ್ರದೇಶದಲ್ಲಿ ಜಿಂಕೆ ಬೇಟೆಯಾಡಿ ಮಾಂಸ ಸಾಗಾಣಿಕೆ ಮಾಡುತ್ತಿದ್ದ ಆರೋಪಿಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ.
ಕಾಂಚಹಳ್ಳಿ ಗ್ರಾಮದ ಮುರುಗೇಗೌಡ( 45) ಎಂಬಾತ ಬಂಧಿತ ಆರೋಪಿ. ಇಲ್ಲಿನ ಬಫರ್ ಝೋನ್ ಉಪ್ಪಳ್ಳ ಅರಣ್ಯ ಪ್ರದೇಶದಲ್ಲಿ ಬೆಳ್ಳಂಬೆಳ್ಳಗೆ 4 ಗಂಟೆ ಸಮಯದಲ್ಲಿ ಅರಣ್ಯ ಸಿಬ್ಬಂದಿ ಗಸ್ತಿನಲ್ಲಿರುವಾಗ ನಾಡ ಬಂದೂಕಿನಿಂದ ಜಿಂಕೆ ಬೇಟೆಯಾಡಿ ಮಾಂಸ ಸಾಗಿಸುತ್ತಿದ್ದ ಆರೋಪಿಯನ್ನು ಬಂಧಿಸಿಲಾಗಿದೆ.
ಬಳಿಕ ಆತನ ಬಳಿ ಇದ್ದ ನಾಡಬಂದೂಕು, ಮದ್ದು ಗುಂಡುಗಳು ಸೇರಿ 20 ಕೆಜಿ ಜಿಂಕೆ ಮಾಂಸವನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಈ ಕೃತ್ಯದಲ್ಲಿ ಪಾಲ್ಗೊಂಡು ಪರಾರಿಯಾಗಿರುವ ಕಾಂಚಳ್ಳಿ ಗ್ರಾಮದ ಪೆರುಮಾಳಶೆಟ್ಟಿ, ಮಾದೇಶ್, ಮುತ್ತೇಗೌಡ ಹಾಗೂ ಗೋವಿಂದೇಗೌಡ ಎಂಬ ಆರೋಪಿಗಳನ್ನ ಬಲೆಗೆ ಕೆಡವಲು ಅರಣ್ಯ ಇಲಾಖೆ ಸಿಬ್ಬಂದಿ ಮುಂದಾಗಿದೆ.