ETV Bharat / state

ಕಳ್ಳತನ ಮಾಡಿದ್ದನ್ನು ಪತ್ತೆ ಹಚ್ಚಿದ್ದಕ್ಕೆ ಕಾಡಿಗೆ ಬೆಂಕಿ ಇಟ್ಟನಂತೆ ಕಳ್ಳ: ಬಂಡೀಪುರದಲ್ಲಿ ಮೂವರ ಬಂಧನ!

ಗುಂಡ್ಲುಪೇಟೆ ತಾಲೂಕಿನ ಲಕ್ಕಿಪುರ ಕಾಲೋನಿಯ ಚೆಲುವ ಅರಣ್ಯ ಇಲಾಖೆಯ ಮೇಲೆ ದ್ವೇಷ ಭಾವನೆ ಹೊಂದಿ ಈ ಕೃತ್ಯ ಮಾಡಿದ್ದಾನೆ ಎನ್ನಲಾಗಿದೆ.

 Forest dept arrest accused who set fire on forest

author img

By

Published : Apr 23, 2021, 9:16 PM IST

Updated : Apr 23, 2021, 9:46 PM IST

ಚಾಮರಾಜನಗರ : ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಮದ್ದೂರು ವಲಯದ ಕರಡಿಕಲ್ಲು ಗುಡ್ಡಕ್ಕೆ ಬೆಂಕಿ ಇಟ್ಟ ಆರೋಪಿಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ.

ಕಳ್ಳತನ ಮಾಡಿದ್ದನ್ನು ಪತ್ತೆ ಹಚ್ಚಿದ್ದಕ್ಕೆ ಕಾಡಿಗೆ ಬೆಂಕಿ ಇಟ್ಟನಂತೆ ಕಳ್ಳ: ಬಂಡೀಪುರದಲ್ಲಿ ಮೂವರ ಬಂಧನ!

ಗುಂಡ್ಲುಪೇಟೆ ತಾಲೂಕಿನ ಲಕ್ಕಿಪುರ ಕಾಲೋನಿಯ ಚೆಲುವ (48), ಮಣಿ, ಮತ್ತು ಕೇರಳದ ಗಣೇಶ(38) ಬಂಧಿತ ಆರೋಪಿಗಳು. ಚೆಲುವ ಎಂಬಾತ ಮದ್ದೂರು ವಲಯದಲ್ಲಿ ದಾಖಲಾಗಿದ್ದ ಶ್ರೀ ಗಂಧ ಕಳ್ಳತನದ ಅರಣ್ಯ ಮೊಕದ್ದಮೆ ಪ್ರಕರಣದಲ್ಲಿ ಪ್ರಮುಖ ಆರೋಪಿ ಆಗಿದ್ದ. ಇವನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ನ್ಯಾಯಾಲಯದ ವಿಚಾರಣೆಗೆ ಹಾಜರಾಗುತ್ತಿದ್ದ, ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯ ಮೇಲೆ ದ್ವೇಷ ಭಾವನೆ ಹೊಂದಿ ಕೃತ್ಯ ಮಾಡಿರುತ್ತಾನೆ ಎನ್ನಲಾಗಿದೆ.

ಮೂಲೆಹೊಳೆ ಮೂಲಕ ಅರಣ್ಯ ಪ್ರದೇಶಕ್ಕೆ ಪ್ರವೇಶಿಸಿ ರಾತ್ರಿ ಅಲ್ಲೇ ವಾಸ್ತವ್ಯ ಹೂಡಿ ನಾಲ್ಕೈದು ಕಡೆ ಬೆಂಕಿ ಇಟ್ಟಿದ್ದಾರೆ ಎಂದು ಬಂಡೀಪುರ ಸಿಎಫ್ಒ ತಿಳಿಸಿದ್ದಾರೆ.

Last Updated : Apr 23, 2021, 9:46 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.