ETV Bharat / state

ಲಾರಿ ಕಂಟೇನರ್ ಮನೆ : ನೆಮ್ಮದಿಯಿಂದ ರಾತ್ರಿ ಕಳೆಯುತ್ತಿರುವ ಅರಣ್ಯ ಇಲಾಖೆ ಸಿಬ್ಬಂದಿ

ಬಿಆರ್​ಟಿ ಹುಲಿ‌ ಸಂರಕ್ಷಿತ ಪ್ರದೇಶದ ಪುಣಜನೂರು ವಲಯದಲ್ಲಿ ಎರಡು ಕಂಟೇನರ್ ಹೌಸ್​ಗಳನ್ನು (Container Home) ನಿರ್ಮಿಸಲಾಗಿದೆ. ಅರಣ್ಯ ಇಲಾಖೆ ಸಿಬ್ಬಂದಿ ಯಾವುದೇ ಭಯವಿಲ್ಲದೆ ರಾತ್ರಿ ಕಳೆಯುತ್ತಿದ್ದಾರೆ..

ಲಾರಿ ಕಂಟೇನರ್ ಮನೆ
Forest Department
author img

By

Published : Nov 22, 2021, 2:53 PM IST

ಚಾಮರಾಜನಗರ : ಸದಾ ಪ್ರಾಣಿ ಭಯ, ಜೋರು ಮಳೆಗೆ ಹೈರಾಣಾಗುತ್ತಿದ್ದ ಅರಣ್ಯ ಇಲಾಖೆ ಸಿಬ್ಬಂದಿ ಈಗ ನಿರಾಳರಾಗಿದ್ದಾರೆ. ಕಂಟೇನರ್ ಹೋಮ್​ (Container Home)​ನಲ್ಲಿ ನೆಮ್ಮದಿಯಿಂದ ರಾತ್ರಿ ಕಳೆಯುತ್ತಿದ್ದಾರೆ.

ಬಿಆರ್​ಟಿ ಹುಲಿ‌ ಸಂರಕ್ಷಿತ ಪ್ರದೇಶದ (Biligiri Rangaswamy Temple Wildlife Sanctuary) ಪುಣಜನೂರು ವಲಯದಲ್ಲಿ ಎರಡು ಕಂಟೇನರ್ ಹೌಸ್​ಗಳನ್ನು ನಿರ್ಮಿಸಲಾಗಿದೆ.

ಇವನ್ನು ಅವಶ್ಯಕತೆ ಬಿದ್ದಾಗ ಯಾವಾಗ ಬೇಕಾದರೂ ಸ್ಥಳಾಂತರ ಮಾಡಬಹುದು. ಜೊತೆಗೆ ಮಳೆ, ಚಳಿಗಾಲದಲ್ಲಿ ಬೆಚ್ಚಗೆಯ ವಾತಾವರಣ, ಬೇಸಿಗೆಯಲ್ಲಿ ತಂಪನೆ ವಾತಾವರಣ ನೀಡುವುದು ಈ ಕಂಟೇನರ್​ ಹೋಮ್ಸ್​ ವಿಶೇಷತೆ.

ಅರಣ್ಯ ಇಲಾಖೆ ಸಿಬ್ಬಂದಿಗಾಗಿ ನಿರ್ಮಿಸಿದ ಲಾರಿ ಕಂಟೇನರ್ ಮನೆ..

ಈ ಕುರಿತು ಮಾತನಾಡಿದ ಬಿಆರ್​ಟಿ ಡಿಸಿಎಫ್ ಸಂತೋಷ್ ಕುಮಾರ್, ಮಹಾರಾಷ್ಟ್ರದಿಂದ 3.5 ಲಕ್ಷ ರೂ.ಗೆ ಈ ಮನೆಗಳನ್ನು ಖರೀಸಲಾಗಿದೆ. ಹೆಚ್ಚುವರಿ ಒಂದೂವರೆ ಲಕ್ಷ ರೂ. ವ್ಯಯಿಸಿ ಇಬ್ಬರು ಸಿಬ್ಬಂದಿ ಉಳಿದುಕೊಳ್ಳುವ ವ್ಯವಸ್ಥೆ ಮಾಡಲಾಗಿದೆ.

ಚೆಕ್​ ಪೋಸ್ಟ್​ನಲ್ಲಿ ಒಂದು ಲಾರಿ ಕಂಟೇನರ್ ಮನೆ ಇಡಲಾಗಿದೆ. ಬೂದಿಪಡಗದಲ್ಲಿ ಮತ್ತೊಂದು ಮನೆ ಇಡಲಾಗಿದೆ. ಈ ಕಂಟೇನರ್ ಮನೆಯನ್ನು ಯಾವಾಗ ಬೇಕಾದ್ರೂ ಇಚ್ಛೆ ಬಂದ ಕಡೆ ಸ್ಥಳಾಂತರ ಮಾಡಿಕೊಳ್ಳಬಹುದಾಗಿದೆ ಎಂದರು.

ಏನೇನಿದೆ ಲಾರಿ ಕಂಟೇನರ್ ಮನೆಯಲ್ಲಿ? : ಗಾಳಿ-ಬೆಳಕಿಗಾಗಿ 6 ಕಿಟಕಿಗಳಿವೆ, ನೀರಿನ ಟ್ಯಾಂಕ್‌ ಇದೆ. ಚಿಕ್ಕ ಲಿವಿಂಗ್ ರೂಂ, ಅಡುಗೆ ಕೋಣೆ, ಒಂದು ಬೆಡ್ ರೂಂ, ಶೌಚಾಲಯ, ಸ್ನಾನದ ಗೃಹವಿದೆ. ಸ್ವಚ್ಛ ಮಾಡಲು ಅನುಕೂಲವಾಗುವಂತೆ ಮನೆಯನ್ನು ರೂಪಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.