ETV Bharat / entertainment

'ಬಚ್ಚನ್'​​ ಸರ್​ನೇಮ್​ ಕೈಬಿಟ್ಟ ಐಶ್ವರ್ಯಾ ರೈ! ಐಶ್​-ಅಭಿ ಡಿವೋರ್ಸ್​ ರೂಮರ್ಸ್​​ ಉಲ್ಭಣ

ವಿದೇಶದಲ್ಲಿ ನಡೆದ ಪ್ರತಿಷ್ಠಿತ ಕಾರ್ಯಕ್ರಮದಲ್ಲಿ ಮಾಜಿ ವಿಶ್ವಸುಂದರಿ ಐಶ್ವರ್ಯಾ ರೈ ಅವರ ಹೆಸರು 'ಬಚ್ಚನ್'​​ ಸರ್​ನೇಮ್​ ಇಲ್ಲದೇ ಕಾಣಿಸಿಕೊಂಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಚರ್ಚೆಯಾಗುತ್ತಿದೆ.

Aishwarya Rai Bachchan
ನಟಿ ಐಶ್ವರ್ಯಾ ರೈ ಬಚ್ಚನ್​​ (ANI)
author img

By ETV Bharat Entertainment Team

Published : Nov 28, 2024, 2:24 PM IST

ಭಾರತದ ಅತ್ಯಂತ ಜನಪ್ರಿಯ ತಾರಾ ದಂಪತಿ ಐಶ್ವರ್ಯಾ-ಅಭಿಷೇಕ್ ಬೇರ್ಪಡುವ ಬಗೆಗಿನ ವದಂತಿಗಳು ನಿನ್ನೆ ಮೊನ್ನೆಯದ್ದಲ್ಲ. ದಂಪತಿ ವಿಚ್ಛೇದನ ಪಡೆಯಲಿದ್ದಾರೆ ಎಂಬ ಊಹಾಪೋಹ ಬಹಳ ದಿನಗಳಿಂದಲೂ ಇದೆ. ಹಲವು ವದಂತಿಗಳ ನಡುವೆ ದುಬೈನಲ್ಲಿ ನಡೆದ ಹೈ ಪ್ರೊಫೈಲ್​ ಈವೆಂಟ್​​ ಒಂದರಲ್ಲಿ ಬಾಲಿವುಡ್ ಐಕಾನ್ ಐಶ್ವರ್ಯಾ ರೈ ಕಾಣಿಸಿಕೊಂಡಿದ್ದು, ಸ್ಕ್ರೀನ್​ ಮೇಲೆ ಅವರ ಹೆಸರನ್ನು 'ಬಚ್ಚನ್' ಎಂಬ ಸರ್​​​ನೇಮ್​ ಇಲ್ಲದೇ ಪ್ರದರ್ಶಿಸಲಾಯಿತು.

ಗ್ಲೋಬಲ್ ವುಮೆನ್ಸ್ ಫೋರಮ್‌ನಲ್ಲಿ ಭಾಗವಹಿಸಿದ್ದ ನಟಿ, ಪ್ರಭಾವಿ ಮಹಿಳೆಯರ ಸಭೆಯನ್ನುದ್ದೇಶಿಸಿ ಮಾತನಾಡಿದರು. ನಾವೀನ್ಯತೆ, ನಿರ್ಣಯ ಮತ್ತು ಸ್ಥಿತಿಸ್ಥಾಪಕತ್ವದಂತಹ ಪ್ರಮುಖ ವಿಷಯಗಳನ್ನು ಪ್ರೋತ್ಸಾಹಿಸಿದರು. ಆದಾಗ್ಯೂ, ನಟಿ ಕಾಣಿಸಿಕೊಂಡಾಗ ಪರದೆ ಮೇಲೆ ಬಂದ ಅವರ ಹೆಸರು ಸೋಷಿಯಲ್​ ಮೀಡಿಯಾ ಬಳಕೆದಾರರ ಗಮನ ಸೆಳೆಯಿತು. ಸರಳವಾಗಿ 'ಐಶ್ವರ್ಯಾ ರೈ - ಇಂಟರ್ನ್ಯಾಷನಲ್ ಸ್ಟಾರ್' ಎಂದು ಬರೆಯಲಾಗಿತ್ತು. 'ಬಚ್ಚನ್'​​ ಸರ್​ನೇಮ್ ಇಲ್ಲದೇ ಮಾಜಿ ವಿಶ್ವಸುಂದರಿಯ ಹೆಸರು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಐಶ್-ಅಭಿ ಡಿವೋರ್ಸ್​ ರೂಮರ್ಸ್​​ ಉಲ್ಭಣಿಸಿದೆ.

ಈವೆಂಟ್‌ನ ವಿಡಿಯೋಗಳನ್ನು ದುಬೈ ವುಮೆನ್ ಎಸ್ಟಾಬ್ಲಿಷ್‌ಮೆಂಟ್‌ನ ಅಧಿಕೃತ ಇನ್‌ಸ್ಟಾಗ್ರಾಮ್ ಅಕೌಂಡ್​ನಲ್ಲಿ ಹಂಚಿಕೊಳ್ಳಲಾಗಿದೆ. ಅತಿಲೋಕ ಸುಂದರಿ ಬೆರಗುಗೊಳಿಸುವ ನೋಟದಲ್ಲಿ ಕಾಣಿಸಿಕೊಂಡಿದ್ದಾರೆ. ಬ್ಲ್ಯೂ ಬ್ಯೂಟಿಫುಲ್​​ ಔಟ್​ಫಿಟ್​ನಲ್ಲಿದ್ದ ಅವರು​​ ತಮ್ಮ ಮಾತುಗಳಿಂದ ಪ್ರೇಕ್ಷಕರನ್ನು ಆಕರ್ಷಿಸಿದರು.

ವಿಡಿಯೋದಲ್ಲಿ ಚೆಲುವೆಯ ಹೆಸರನ್ನು 'ಐಶ್ವರ್ಯಾ ರೈ - ಅಂತಾರಾಷ್ಟ್ರೀಯ ತಾರೆ' ಎಂದು ತೋರಿಸಲಾಗಿದ್ದು, ಇದೀಗ ಭಾರೀ ಚರ್ಚೆಗೆ ಎಡೆಮಾಡಿಕೊಟ್ಟಿದೆ. 2007ರಲ್ಲಿ ನಟ ಅಭಿಷೇಕ್ ಬಚ್ಚನ್​​ ಜೊತೆ ಹಸೆಮಣೆ ಏರಿದ ಬಳಿಕ ಅವರ ಹೆಸರು 'ಐಶ್ವರ್ಯಾ ರೈ ಬಚ್ಚನ್'​ ಎಂದು ಉಲ್ಲೇಖಿಸಲಾಗುತ್ತಿತ್ತು. ಆದ್ರೀಗ ಕೇವಲ 'ಐಶ್ವರ್ಯಾ ರೈ' ಎಂದಿದ್ದು, ಅವರ ಸಂಬಂಧದ ಸುತ್ತಲಿನ ಊಹಾಪೋಹಗಳು ಮತ್ತಷ್ಟು ಹೆಚ್ಚಾಗಿವೆ.

ಇದನ್ನೂ ಓದಿ: ಧನುಷ್ - ಐಶ್ವರ್ಯಾ ರಜನಿಕಾಂತ್ ಡಿವೋರ್ಸ್: 18 ವರ್ಷಗಳ ದಾಂಪತ್ಯ ಜೀವನಕ್ಕೆ ಫುಲ್​ಸ್ಟಾಪ್​

ಕೇವಲ ಮಗಳು ಆರಾಧ್ಯ ಜೊತೆ ಅಂಬಾನಿ ಕುಟುಂಬದ ಅದ್ದೂರಿ ವಿವಾಹ ಸಮಾರಂಭದಲ್ಲಿ ಕಾಣಿಸಿಕೊಂಡ ನಂತರ ಊಹಾಪೋಹಗಳು ಹೆಚ್ಚಾಗಿ ಹರಡಲು ಪ್ರಾರಂಭಿಸಿತು. ಅಂದು, ಪತಿ ಅಭಿಷೇಕ್ ಅವರು ತಮ್ಮ ತಂದೆ, ಬಾಲಿವುಡ್ ಲೆಜೆಂಡ್​​ ಅಮಿತಾಭ್​​ ಬಚ್ಚನ್ ಸೇರಿದಂತೆ ತಮ್ಮ ಸಂಪೂರ್ಣ ಕುಟುಂಬದೊಂದಿಗೆ ಕಾಣಿಸಿಕೊಂಡಿದ್ದರು. ಐಶ್ವರ್ಯಾ ಆರಾಧ್ಯ ಇಬ್ಬರೂ ಪ್ರತ್ಯೇಕವಾಗಿ ಆಗಮಿಸಿದ ಹಿನ್ನೆಲೆ ಇಲ್ಲಸಲ್ಲದ ಊಹಾಪೋಹಗಳಿಗೆ ಕಾರಣವಾಯಿತು. ಅಷ್ಟೇ ಅಲ್ಲದೇ ಅಭಿಷೇಕ್ ಹೆಸರು ನಟಿ ನಿಮ್ರತ್ ಕೌರ್‌ ಜೊತೆಗೆ ಸಿಲುಕಿಕೊಂಡಿದೆ.

ಇದನ್ನೂ ಓದಿ: 'ಕೃಷ್ಣಂ ಪ್ರಣಯ ಸಖಿ' ಒಟಿಟಿ ಪ್ರವೇಶಕ್ಕೆ ಕ್ಷಣಗಣನೆ: ಇದು ಶತದಿನ ಸಂಭ್ರಮ ಕಂಡ ಗೋಲ್ಡನ್​ ಸ್ಟಾರ್​ ಸಿನಿಮಾ

ಅಮಿತಾಭ್​​ ಬಚ್ಚನ್ ಇತ್ತೀಚೆಗಷ್ಟೇ ವದಂತಿಗಳನ್ನು ಪರಿಹರಿಸುವ ಪ್ರಯತ್ನ ಮಾಡಿದ್ದಾರೆ. ಊಹಾಪೋಹಗಳು ಕುಟುಂಬಗಳ ಮೇಲೆ ಬೀರುವ ಹಾನಿಕಾರಕ ಪರಿಣಾಮದ ಬಗ್ಗೆ ಬರೆದುಕೊಂಡಿದ್ದರು. ಪ್ರಶ್ನಾರ್ಥಕ ಚಿಹ್ನೆಗಳಿಂದ ಕೂಡಿರುವ ಮಾಹಿತಿ (ಪರಿಶೀಲಿಸ್ಪಡದ) ಮತ್ತು ವದಂತಿಗಳು ನಕಾರಾತ್ಮಕ ಪ್ರಭಾವ ಬೀರಬಹುದು. ಎಚ್ಚರಿಕೆ ವಹಿಸಬೇಕೆಂದು ಒತ್ತಿ ಹೇಳಿದ್ದರು. "ಊಹಾಪೋಹಗಳು ಕೇವಲ ಊಹಾಪೋಹಗಳು. ಅಸತ್ಯಗಳು ಅನಗತ್ಯ ನಂಬಿಕೆಯನ್ನು ಸೃಷ್ಟಿಸಬಹುದು" ಎಂದು ಹೇಳಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.