ತಿರುವನಂತಪುರಂ(ಕೇರಳ): ಕೇರಳದಲ್ಲಿ 1,400ಕ್ಕೂ ಹೆಚ್ಚು ಸರ್ಕಾರಿ ನೌಕರರು ಅಕ್ರಮವಾಗಿ ಸಾಮಾಜಿಕ ಕಲ್ಯಾಣ ಪಿಂಚಣಿ ಪಡೆಯುತ್ತಿರುವುದು ಪತ್ತೆಯಾಗಿದೆ. ಹಣಕಾಸು ಇಲಾಖೆ ಆರಂಭಿಸಿರುವ ಮಾಹಿತಿ ಕೇರಳ ಮಿಷನ್‌ನ ತಪಾಸಣೆಯಲ್ಲಿ ರಾಜ್ಯದಲ್ಲಿ 1,458 ಸರ್ಕಾರಿ ನೌಕರರು ಅಕ್ರಮವಾಗಿ ಪಿಂಚಣಿ ಪಡೆಯುತ್ತಿರುವುದು ಬಹಿರಂಗವಾಗಿದೆ.
ಈ ವಂಚನೆಯಲ್ಲಿ ಕಾಲೇಜು ಸಹಾಯಕ ಪ್ರಾಧ್ಯಾಪಕರು ಮತ್ತು ಹೈಯರ್ ಸೆಕೆಂಡರಿ ಶಿಕ್ಷಕರು ಸೇರಿದಂತೆ ಹಲವಾರು ಗೆಜೆಟೆಡ್ ಅಧಿಕಾರಿಗಳು ಭಾಗಿಯಾಗಿದ್ದಾರೆ. ಅವರು ಕಲ್ಯಾಣ ಪಿಂಚಣಿಯಿಂದ ಪ್ರಯೋಜನ ಪಡೆಯುತ್ತಿದ್ದರು.
ತಪಾಸಣೆ ವೇಳೆ ಸಿಕ್ಕಿಬಿದ್ದವರಲ್ಲಿ ಇಬ್ಬರು ಸಹಾಯಕ ಪ್ರಾಧ್ಯಾಪಕರಾಗಿದ್ದಾರೆ. ಒಬ್ಬರು ತಿರುವನಂತಪುರಂ ಜಿಲ್ಲೆಯ ಸರ್ಕಾರಿ ಕಾಲೇಜಿನಲ್ಲಿ ಮತ್ತು ಇನ್ನೊಬ್ಬರು ಪಾಲಕ್ಕಾಡ್ ಜಿಲ್ಲೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಹೆಚ್ಚುವರಿಯಾಗಿ, ಮೂವರು ಹೈಯರ್ ಸೆಕೆಂಡರಿ ಶಾಲಾ ಶಿಕ್ಷಕರನ್ನು ಪಿಂಚಣಿ ಸ್ವೀಕರಿಸುವವರು ಎಂದು ಗುರುತಿಸಲಾಗಿದೆ.
ಕಾನೂನುಬಾಹಿರವಾಗಿ ಪಡೆದಿರುವ ಪಿಂಚಣಿ ಮೊತ್ತವನ್ನು ಅನ್ವಯವಾಗುವ ಬಡ್ಡಿ ಸಮೇತ ವಸೂಲಿ ಮಾಡುವಂತೆ ಹಾಗೂ ಅವರ ವಿರುದ್ಧ ಕಠಿಣ ಶಿಸ್ತು ಕ್ರಮ ಕೈಗೊಳ್ಳುವಂತೆ ಹಣಕಾಸು ಸಚಿವ ಕೆ.ಎನ್. ಬಾಲಗೋಪಾಲ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಆರೋಗ್ಯ ಇಲಾಖೆ ಅತಿ ಹೆಚ್ಚು ವಂಚನೆಯ ಪಿಂಚಣಿ ಸ್ವೀಕರಿಸುವವರನ್ನು ಹೊಂದಿದ್ದು, 373 ವ್ಯಕ್ತಿಗಳು ಭಾಗಿಯಾಗಿದ್ದಾರೆ ಎಂದು ತನಿಖೆಯಿಂದ ಕಂಡು ಬಂದಿದೆ.
ಸಾಮಾನ್ಯ ಶಿಕ್ಷಣ ಇಲಾಖೆಯಲ್ಲಿ 224, ವೈದ್ಯಕೀಯ ಶಿಕ್ಷಣ ಇಲಾಖೆ 124, ಆಯುರ್ವೇದ ಇಲಾಖೆಯಲ್ಲಿ 114 ಜನರು (ಇಂಡಿಯನ್ ಸಿಸ್ಟಮ್ ಆಫ್ ಮೆಡಿಸಿನ್), ಪಶುಸಂಗೋಪನಾ ಇಲಾಖೆಯಲ್ಲಿ 74 ಜನರು, ಲೋಕೋಪಯೋಗಿ ಇಲಾಖೆಯಲ್ಲಿ 47 ಜನರು ಸರ್ಕಾರಿ ನೌಕರರು ಕಲ್ಯಾಣ ಪಿಂಚಣಿ ಪಡೆಯುತ್ತಿದ್ದರು.
ತಾಂತ್ರಿಕ ಶಿಕ್ಷಣ ಇಲಾಖೆಯಲ್ಲಿ 46 ಮಂದಿ, ಹೋಮಿಯೋಪತಿ ವಿಭಾಗದಲ್ಲಿ 41 ಮಂದಿ, ಕೃಷಿ ಮತ್ತು ಕಂದಾಯ ಇಲಾಖೆಗಳಲ್ಲಿ ತಲಾ 35 ಜನರು, ನ್ಯಾಯಾಂಗ ಮತ್ತು ಸಾಮಾಜಿಕ ನ್ಯಾಯ ಇಲಾಖೆಯಲ್ಲಿ 34, ವಿಮಾ ವೈದ್ಯಕೀಯ ಸೇವೆಗಳ ಇಲಾಖೆಯಲ್ಲಿ 31, ಕಾಲೇಜು ಶಿಕ್ಷಣ ಇಲಾಖೆಯಲ್ಲಿ 27 ಮತ್ತು ಹೋಮಿಯೋಪತಿಯಲ್ಲಿ 25 ಜನರು ಕಲ್ಯಾಣ ಪಿಂಚಣಿ ಪಡೆಯುತ್ತಿದ್ದರು.
ಇತರೆ ಇಲಾಖೆಗಳು ಮತ್ತು ಸಂಸ್ಥೆಗಳಲ್ಲಿ ಪಿಂಚಣಿದಾರರ ಸಂಖ್ಯೆ ಈ ಕೆಳಗಿನಂತಿದೆ:
- ಮಾರಾಟ ತೆರಿಗೆ - ತಲಾ 14 ನೌಕರರು.
- ಪರಿಶಿಷ್ಟ ಜಾತಿ ಕಲ್ಯಾಣ - 13 ನೌಕರರು.
- ಗ್ರಾಮೀಣಾಭಿವೃದ್ಧಿ, ಪೊಲೀಸ್, ಪಿಎಸ್‌ಸಿ, ಆಯುರ್ವೇದ ವೈದ್ಯಕೀಯ ಶಿಕ್ಷಣ - ತಲಾ 10 ನೌಕರರು.
- ಸಹಕಾರ ಸಂಸ್ಥೆ - 8 ನೌಕರರು.
- ಶಾಸಕಾಂಗ ಸಚಿವಾಲಯ, ವೃತ್ತಿಪರ ತರಬೇತಿ, ಸಾರ್ವಜನಿಕ ಆಡಳಿತ, ವೊಕೇಷನಲ್ ಹೈಯರ್ ಸೆಕೆಂಡರಿ - ತಲಾ 7 ನೌಕರರು.
- ಅರಣ್ಯ ಮತ್ತು ವನ್ಯಜೀವಿ - 9 ನೌಕರರು.
- ಮಣ್ಣಿನ ಸಮೀಕ್ಷೆ, ಮೀನುಗಾರಿಕೆ - ತಲಾ 6 ನೌಕರರು.
- ಸ್ಥಳೀಯ ಆಡಳಿತ, ರಸ್ತೆ ಸಾರಿಗೆ, ಕೈಗಾರಿಕೆ ಮತ್ತು ವಾಣಿಜ್ಯ, ಅಗ್ನಿಶಾಮಕ ದಳ, ಡೈರಿ ಅಭಿವೃದ್ಧಿ, ಸಾರ್ವಜನಿಕ ವಿತರಣೆ, ಅಡ್ವೊಕೇಟ್ ಜನರಲ್ ಕಚೇರಿ - ತಲಾ ನೌಕರರು 4.
- ಸಮಾಜ ಕಲ್ಯಾಣ, ಅಬಕಾರಿ, ಪುರಾತತ್ವ, ನೋಂದಣಿ, ವಸ್ತುಸಂಗ್ರಹಾಲಯ, ಮುದ್ರಣ, ಆಹಾರ ಸುರಕ್ಷತೆ - 3 ತಲಾ ನೌಕರರು.
ಕಾರ್ಮಿಕ, ವೈದ್ಯಕೀಯ ಪರೀಕ್ಷಾ ಪ್ರಯೋಗಾಲಯ, ಅರ್ಥಶಾಸ್ತ್ರ ಮತ್ತು ಅಂಕಿಅಂಶ, ಕಾನೂನು ಮಾಪನಶಾಸ್ತ್ರ, ಕಾನೂನು ಕಾಲೇಜುಗಳು ತಲಾ-2, ಎನ್‌ಸಿಸಿ, ಲಾಟರಿಗಳು, ಜೈಲು, ಕಾರ್ಮಿಕ ನ್ಯಾಯಾಲಯ, ಹಾರ್ಬರ್ ಎಂಜಿನಿಯರಿಂಗ್, ಎಲೆಕ್ಟ್ರಿಕಲ್ ಇನ್‌ಸ್ಪೆಕ್ಟರೇಟ್, ಡ್ರಗ್ಸ್ ಕಂಟ್ರೋಲ್, ಹಿಂದುಳಿದ ವರ್ಗಗಳ ಅಭಿವೃದ್ಧಿ, ತೆಂಗಿನಕಾಯಿ ಅಭಿವೃದ್ಧಿ- ತಲಾ 1 ಸರ್ಕಾರಿ ನೌಕರರು ಅಕ್ರಮವಾಗಿ ಸಾಮಾಜಿಕ ಭದ್ರತಾ ಪಿಂಚಣಿ ಪಡೆಯುತ್ತಿದ್ದರು.
ಇದನ್ನೂ ಓದಿ: ಬ್ಯಾಲೆಟ್ ಪೇಪರ್ ಮತದಾನಕ್ಕೆ ಆಗ್ರಹಿಸಿ ಸಹಿ ಆಂದೋಲನ: ಮಹಾರಾಷ್ಟ್ರ ಕಾಂಗ್ರೆಸ್ ಘೋಷಣೆ