ಚಾಮರಾಜನಗರ : ಹುಲಿಯೊಂದು ಕುಂಟುತ್ತಾ ನಡೆದಾಡಿರುವ ಘಟನೆ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಸಫಾರಿ ಜೋನ್ನಲ್ಲಿ ನಡೆದಿದೆ. ಇದು ಪ್ರಾಣಿ ಪ್ರಿಯರು ಕಳವಳಕ್ಕೂ ಕಾರಣವಾಗಿದೆ.
ಕೆಲ ದಿನಗಳ ಹಿಂದೆ ಮಲಗಿದ್ದ ಹುಲಿಯೊಂದು ಕುಂಟುತ್ತಾ ತೆರಳಿದ್ದನ್ನು ಛಾಯಾಗ್ರಾಹಕರೊಬ್ಬರು ಸೆರೆಹಿಡಿದು ಅರಣ್ಯ ಇಲಾಖೆ ಗಮನಕ್ಕೆ ತಂದಿದ್ದರು. ಒಂದು ವೇಳೆ, ಕಾದಾಟದಲ್ಲಿ ಗಾಯಗೊಂಡು ಬೇಟೆಯಾಡಲಾಗದೇ ನರಹಂತಕನಾಗುವ ಕಳವಳ ವ್ಯಕ್ತಪಡಿಸಿದ್ದರು ಎಂದು ಮೂಲಗಳು ತಿಳಿಸಿವೆ. ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ 16 ಮೈಲಿ ಕಲ್ಲು, ಆನೆಕಟ್ಟೆ ಸೇರಿದಂತೆ ವಿವಿಧೆಡೆ 75 ಕ್ಯಾಮೆರಾಗಳನ್ನು ಅಳವಡಿಸಿ ಹುಲಿಯ ಮೇಲೆ ನಿಗಾ ಇಟ್ಟಿದ್ದ ಅರಣ್ಯ ಇಲಾಖೆ, ಯಾವುದೇ ಆತಂಕಪಡುವ ಅಗತ್ಯವಿಲ್ಲ ಎಂದು ಹೇಳಿದೆ.
2-3 ತಾಸು ಮಲಗಿದ್ದರಿಂದ ಆ ರೀತಿ ಕುಂಟುತ್ತಾ ಸಾಗಿದೆ. ಯಾವುದೇ ಗಾಯಗಳಾಗಿಲ್ಲ. ಮರಿಯಾಗಿದ್ದಾಗಿನಿಂದಲೂ ಅದು ತನ್ನ ಬೌಂಡರಿಯಲ್ಲೇ ಇದೆ ಎಂದು ಸಿಎಫ್ಒ ಸ್ಪಷ್ಟಪಡಿಸಿದ್ದಾರೆ.