ETV Bharat / state

ಬಲವಂತದಿಂದ ಬಾಲಕಿ ಎಳೆದೊಯ್ದು ಮದುವೆ; ತಾಯಿ ಮಗನಿಗೆ 20 ವರ್ಷ ಶಿಕ್ಷೆ ವಿಧಿಸಿದ ಕೋರ್ಟ್​​​​ - ಬಲವಂತಾಗಿ ಎಳೆದೊಯ್ದು ಮದುವೆ

ಬಾಲಕಿ ಕರೆದೊಯ್ದು ಬಲವಂತದಿಂದ ಮದುವೆ ಮಾಡಿಕೊಂಡು, ದೌರ್ಜನ್ಯ ಎಸಗಿದ ಆರೋಪ: ಮಗ - ತಾಯಿಗೆ 20 ವರ್ಷ ಕಠಿಣ ಶಿಕ್ಷೆ ವಿಧಿಸಿ ಚಾಮರಾಜನಗರ ಜಿಲ್ಲಾ ಮಕ್ಕಳ ಸ್ನೇಹಿ ನ್ಯಾಯಾಲಯದ ಆದೇಶ

Mother and son sentenced to 20 years
ತಾಯಿ ಮಗನಿಗೆ 20 ವರ್ಷ ಶಿಕ್ಷೆ
author img

By

Published : Mar 4, 2023, 10:23 PM IST

Updated : Mar 4, 2023, 10:41 PM IST

ಚಾಮರಾಜನಗರ: ಬಾಲಕಿಯನ್ನು ಬಲವಂತದಿಂದ ಮದುವೆ ಮಾಡಿಕೊಂಡಿದ್ದ ಯುವಕ ಹಾಗೂ ಇದಕ್ಕೆ ಸಹಕರಿಸಿದ್ದ ಈತನ ತಾಯಿಗೆ 20 ವರ್ಷ ಕಠಿಣ ಶಿಕ್ಷೆ ವಿಧಿಸಿ ಚಾಮರಾಜನಗರ ಜಿಲ್ಲಾ ಮಕ್ಕಳ ಸ್ನೇಹಿ ನ್ಯಾಯಾಲಯವು ಆದೇಶ ನೀಡಿದೆ. ತಮಿಳುನಾಡಿನ ತಿರಚಂಗೂರು ತಾಲೂಕಿನ ಶರಣ್ ರಾಜ್(25) ಹಾಗೂ ಈತನ ತಾಯಿ ಸೆಲ್ವಿ(40) ಶಿಕ್ಷೆಗೊಳಗಾದ ಅಪರಾಧಿಗಳು. 14 ವರ್ಷದ ಬಾಲಕಿಯನ್ನು ಪುಸಲಾಯಿಸಿ ಬೈಕ್​ ನಲ್ಲಿ ಹತ್ತಿಸಿಕೊಂಡು ಕರೆದೊಯ್ದು ಬಲವಂತದಿಂದ ಶರಣ್ ರಾಜ್ ಮದುವೆಯಾಗಿದ್ದ.

ಅಲ್ಲದೇ ಬಾಲಕಿಗೆ ಬಲವಂತವಾಗಿ ಲೈಂಗಿಕ‌ ದೌರ್ಜನ್ಯ ಎಸಗಲು ತಾಯಿ ಸೆಲ್ವಿ ಸಹಾಯ ಮಾಡಿದ್ದರು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಾಲಯ ವಾದ - ಪ್ರತಿವಾದಗಳನ್ನು ಆಲಿಸಿ, ನ್ಯಾಯಮೂರ್ತಿ ನಿಶಾರಾಣಿ ಅವರು, ತಾಯಿ ಹಾಗೂ ಮಗನಿಗೆ ತಲಾ 20 ವರ್ಷ ಕಠಿಣ ಶಿಕ್ಷೆ ವಿಧಿಸಿ ಆದೇಶಿಸಿದ್ದಾರೆ.

2018 ರಲ್ಲಿ ಬಲವಂತಾಗಿ ಎಳೆದೊಯ್ದು ಮದುವೆ: ಶರಣ್ ರಾಜ್ ಎಲೆಕ್ಟ್ರೆಷಿಯನ್ ಕೆಲಸ ಮಾಡಿಕೊಂಡಿದ್ದ. ತಾಯಿ ಸೆಲ್ವಿ ಪೇಪರ್ ಮಿಲ್ ನಲ್ಲಿ ನೌಕರಿ ಮಾಡುತ್ತಿದ್ದರು. 2018 ರ ಸೆಪ್ಟೆಂಬರ್ 9 ರಂದು ಹನೂರು ತಾಲೂಕಿನ ಗ್ರಾಮವೊಂದರ 14 ವರ್ಷದ ಬಾಲಕಿಯನ್ನು ಶರಣ್ ರಾಜ್ ತನ್ನ ಬೈಕ್​ ನಲ್ಲಿ ಪುಸಲಾಯಿಸಿ ಕರೆದೊಯ್ದಿದ್ದನು. ಬಳಿಕ ಆ ಬಾಲಕಿ ಜೊತೆ ಬಲವಂತದಿಂದ ಮದುವೆ ಮಾಡಿಕೊಂಡು ಆಕೆಗೆ ಲೈಂಗಿಕ ದೌರ್ಜನ್ಯ ಎಸಗಿದ್ದ.

ಕೃತ್ಯಕ್ಕೆ ತಾಯಿ ಸೆಲ್ವಿ ಮತ್ತು‌ ಶಶಿಕುಮಾರ್ ಎಂಬವರು ಸಹಕರಿಸಿದ್ದರು. ಈ ಘಟನೆ ಸಂಬಂಧ ಮಲೆ ಮಹದೇಶ್ವರ ಬೆಟ್ಟ ಪೊಲೀಸ್ ಠಾಣೆಯಲ್ಲಿ ಅಂದಿನ ಇನ್ಸ್​ಪೆಕ್ಟರ್​​​ ಬಿ.ಮಹೇಶ್ ಪ್ರಕರಣ ದಾಖಲಿಸಿ ಇಬ್ಬರು ಆರೋಪಿಗಳನ್ನು ಬಂಧಿಸಿ( ಕೃತ್ಯದ ಶಶಿಕುಮಾರ್ ಎಂಬಾತ ತಲೆ ಮರೆಸಿಕೊಂಡಿದ್ದಾನೆ) ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.

ವಾದ - ಪ್ರತಿವಾದ ನಡೆದು ಆರೋಪಿಗಳ ವಿರುದ್ಧ ಕೃತ್ಯ ಸಾಬೀತಾದ ಹಿನ್ನೆಲೆಯಲ್ಲಿ ತಾಯಿ-ಮಗನಿಗೆ ಚಾಮರಾಜನಗರ ಜಿಲ್ಲಾ ಮಕ್ಕಳ ಸ್ನೇಹಿ ನ್ಯಾಯಾಲಯದ ನ್ಯಾಯಮೂರ್ತಿ ನಿಶಾರಣಿ ಅವರು, ಇಬ್ಬರು ಆರೋಪಿಗಳಿಗೆ ತಲಾ 20 ವರ್ಷ ಕಠಿಣ ಶಿಕ್ಷೆ 10 ಸಾವಿರ ರೂ ದಂಡ‌ ವಿಧಿಸಿ ಆದೇಶಿಸಿದ್ದಾರೆ. ಜೊತೆಗೆ ಕಾನೂನು ಸೇವಾ ಪ್ರಾಧಿಕಾರವು ನೊಂದ ಬಾಲಕಿಗೆ 1 ಲಕ್ಷ ರೂ. ಪರಿಹಾರವನ್ನು 30 ದಿನದೊಳಗೆ ನೀಡಬೇಕೆಂದು ಆದೇಶಿಸಿದ್ದಾರೆ. ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಕೆ.ಯೋಗೇಶ್ ವಾದ ಮಂಡಿಸಿದ್ದರು.

ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ,ಆರೋಪಿಗೆ ಶಿಕ್ಷೆ: ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದ ಆರೋಪಿಗೆ ಮಂಗಳೂರಿನ ಹೆಚ್ಚುವರಿ ಸೆಷನ್ಸ್ ಮತ್ತು ಎಫ್ಟಿಎಸ್ಸಿ-1(ಪೊಕ್ಸೊ) ನ್ಯಾಯಾಲಯವು ಪೋಕ್ಸೊ ಸೇರಿ ವಿವಿಧ ಕಾಯಿದೆಗಳಡಿ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ಆದೇಶ ಹೊರಡಿಸಿದೆ. ನಗರದ ಬಜಪೆ ನಿವಾಸಿ ಅಬ್ದುಲ್ ಹಮೀದ್ (50) ಶಿಕ್ಷೆಗೊಳಗಾದ ಅಪರಾಧಿ.

ಅಪರಾಧಿ ಅಬ್ದುಲ್ ಹಮೀದ್ 2021ರ ಜೂ.3ರಂದು ನೆರೆಮನೆ ಬಾಲಕಿ ಮನೆಯಲ್ಲಿ ಒಬ್ಬರೇ ಇದ್ದ ಸಂದರ್ಭ ಅಕ್ರಮವಾಗಿ ಪ್ರವೇಶಿಸಿ ಲೈಂಗಿಕ ಕಿರುಕುಳ ನೀಡಿದ್ದ. ಲೈಂಗಿಕ ಕಿರುಕುಳ ನೀಡಿದ ಬಳಿಕ ಈತ ಬಾಲಕಿಗೆ ಬೆದರಿಕೆಯೊಡ್ಡಿದ್ದ ಎಂದು ಆರೋಪಿಸಲಾಗಿತ್ತು. ಈ ಬಗ್ಗೆ ಬಜಪೆ ಪೊಲೀಸ್​ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿತ್ತು. ಪ್ರಕರಣದ ಸಂಬಂಧ ತನಿಖೆ ನಡೆಸಿದ ಇನ್ಸ್​ಪೆಕ್ಟರ್​​ ರಾಘವೇಂದ್ರ ನಾಯ್ಕ ಅವರು ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಈ ಬಗ್ಗೆ ವಿಚಾರಣೆ ನಡೆಸಿದ ಮಂಗಳೂರಿನ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ತೀರ್ಪು ಪ್ರಕಟಿಸಿದೆ.

ಇದನ್ನೂಓದಿ:ಹಾಡಹಗಲೇ ಮಚ್ಚಿನಿಂದ ಕೊಚ್ಚಿ ಯುವಕನ ಕೊಲೆ: ಆರೋಪಿ ಬಂಧನ

Last Updated : Mar 4, 2023, 10:41 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.