ಚಾಮರಾಜನಗರ: 2020ನೇ ಸಾಲಿನ ಜಾನಪದ ಅಕಾಡೆಮಿ ಪ್ರಶಸ್ತಿ ಪ್ರದಾನ ಸಮಾರಂಭ ಇಂದು ನಗರದ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ನಡೆಯುತ್ತಿದ್ದು, ಇದಕ್ಕೂ ಮುನ್ನ ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತರನ್ನು ಅಲಂಕೃತ ಎತ್ತಿನ ಗಾಡಿಯಲ್ಲಿ ಮೆರವಣಿಗೆ ಮಾಡಲಾಯಿತು.
ಜಿಲ್ಲಾಡಳಿತ ಭವನದ ಆವರಣದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಪ್ರತಿಮೆಗೆ ಪುಷ್ಪಾರ್ಚನೆ ಹಾಗೂ ಸಿದ್ದಪ್ಪಾಜಿ- ಮಂಟೇಸ್ವಾಮಿ ಕಂಡಾಯಕ್ಕೆ ನಮಿಸಿ ಮೆರವಣಿಗೆಗೆ ಶಾಸಕ ಪುಟ್ಟರಂಗಶೆಟ್ಟಿ ಚಾಲನೆ ನೀಡಿದರು. ಪೂರ್ಣಕುಂಭ ಸೇರಿದಂತೆ ಡೊಳ್ಳು, ನಗಾರಿ, ತಮಟೆ, ಗೊರವರ ಕುಣಿತ, ಕಂಸಾಳೆ, ಗೊರುಕನ ನೃತ್ಯ, ವೀರಗಾಸೆಯಂತ ಹತ್ತಾರು ಕಲಾತಂಡಗಳು ಮೆರವಣಿಗೆಗೆ ಮೆರುಗು ನೀಡಿದವು.
ಜಿಲ್ಲಾಡಳಿತ ಭವನದಿಂದ ಹೊರಟ ಮೆರವಣಿಗೆ ಚಾಮರಾಜೇಶ್ವರ ದೇಗುಲ, ಭುವನೇಶ್ವರಿ ವೃತ್ತ, ಜೋಡಿ ರಸ್ತೆ, ಕೋರ್ಟ್ ರಸ್ತೆ ಮೂಲಕ ಹಾದು ಸಮಾರಂಭದ ಸ್ಥಳ ಅಂಬೇಡ್ಕರ್ ಭವನಕ್ಕೆ ಹೋಗಿ ತಲುಪಿತು. 30 ಜಾನಪದ ಅಕಾಡೆಮಿ ಪುರಸ್ಕೃತರಿಗೆ ಈ ಎತ್ತಿನಗಾಡಿ ಮೆರವಣಿಗೆ ಹೃದಯಸ್ಪರ್ಶಿಯಾಗಿತ್ತು.
ಓದಿ : ರಂಗೋಲಿಗಳ ಚಿತ್ತಾರ: ಸ್ವಚ್ಛ ಸರ್ವೇಕ್ಷಣ್ ಅಭಿಯಾನ-2021ಕ್ಕೆ ಬಿಬಿಎಂಪಿ ಸಿದ್ಧತೆ
ಇನ್ನು, ಇಂದಿನ ಸಮಾರಂಭದಲ್ಲಿ ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಭಾಗವಹಿಸುತ್ತಿರುವುದು ವಿಶೇಷವಾಗಿದೆ.