ETV Bharat / state

ಚಾಮರಾಜನಗರ: 3 ಜಿಂಕೆ ಬೇಟೆಯಾಡಿ ಮಾಂಸ ಹಂಚಿಕೊಳ್ಳುವಾಗ ಐವರ ಬಂಧನ - ಚಾಮರಾಜನಗರ ಲೇಟೆಸ್ಟ್​​ ಕ್ರೈಂ ನ್ಯೂಸ್​​

ಹನೂರು ತಾಲೂಕಿನ‌ ಉದ್ದನೂರು ಗ್ರಾಮದ ತೋಟದ ಮನೆಯಲ್ಲಿ ಜಿಂಕೆ ಮಾಂಸವನ್ನು ಪಾಲು ಮಾಡಿಕೊಳ್ಳುತ್ತಿದ್ದ ಐವರು ಆರೋಪಿಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ.

Five Deer Hunters Arrested
ಜಿಂಕೆ ಬೇಟೆಯಾಡಿದ ಐವರ ಬಂಧನ
author img

By

Published : May 6, 2022, 2:22 PM IST

Updated : May 6, 2022, 7:41 PM IST

ಚಾಮರಾಜನಗರ: ರಾತ್ರಿ ವೇಳೆ 3 ಜಿಂಕೆಗಳನ್ನು ಬೇಟೆಯಾಡಿ ಮಾಂಸವನ್ನು ಪಾಲು ಮಾಡಿಕೊಳ್ಳುತ್ತಿದ್ದ ಐವರು ಬೇಟೆಗಾರರನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ. ಹನೂರು ತಾಲೂಕಿನ‌ ಉದ್ದನೂರು ಗ್ರಾಮದ ತೋಟದ ಮನೆಯಲ್ಲಿ ಈ ಘಟನೆ ನಡೆದಿದೆ. ಲಕ್ಷ್ಮಣ (55), ಮುತ್ತಪ್ಪ(40), ಮುತ್ತುರಾಜ್(35), ಪೆರಿಯಣ್ಣ(23) ಹಾಗೂ ಗೋವಿಂದರಾಜು(27) ಬಂಧಿತ ಆರೋಪಿಗಳು. ಸತೀಶ್ ಎಂಬಾತ ತಲೆ ಮರೆಸಿಕೊಂಡಿದ್ದಾನೆ‌ ಎನ್ನಲಾಗ್ತಿದೆ.

3 ಜಿಂಕೆ ಬೇಟೆಯಾಡಿ ಮಾಂಸ ಹಂಚಿಕೊಳ್ಳುವಾಗ ಐವರ ಬಂಧನ

ಮಲೆಮಹದೇಶ್ವರ ವನ್ಯಜೀವಿಧಾಮದ ಹನೂರು ಗಸ್ತಿನ ಬೆಳ್ಳತ್ತೂರು ಗುಡ್ಡ ಕಾಡಿನಲ್ಲಿ ಈ ಆರು ಮಂದಿ ನಾಡ ಬಂದೂಕಿನಿಂದ 3 ಜಿಂಕೆಗಳನ್ನು ಬೇಟೆಯಾಡಿ ತೋಟದ ಮನೆಗೆ ತಂದು ಪಾಲು ಹಾಕುತ್ತಿದ್ದರು. ಈ ವೇಳೆ ಅರಣ್ಯಾಧಿಕಾರಿಗಳು ದಾಳಿ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಬಂಧಿತರಿಂದ ಜಿಂಕೆ ಮಾಂಸ, ಚರ್ಮ, 2 ಬೈಕ್ ಹಾಗೂ 2 ನಾಡ ಬಂದೂಕುಗಳನ್ನು ವಶಪಡಿಸಿಕೊಂಡಿದ್ದಾರೆ. ಸದ್ಯ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

Five Deer Hunters Arrested
ಜಿಂಕೆ ಬೇಟೆ ಚಾಮರಾಜನಗರದಲ್ಲಿ ಐವರ ಬಂಧನ

Last Updated : May 6, 2022, 7:41 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.