ಚಾಮರಾಜನಗರ: ಕುಂದಕೆರೆ ವಲಯದಲ್ಲಿನ ಬೆಂಕಿಗೆ ಸಂಬಂಧಿಸಿದಂತೆ ಬಂಧಿತನಾಗಿರುವ ಆರೋಪಿ ಚಂದ್ರು ಬೆಂಕಿ ಹಾಕಲಿಲ್ಲ, ಬೀಡಿ ಸೇದಿ ಎಸೆದೆನಷ್ಟೆ ಎಂದು ಹೇಳಿದ್ದಾನೆ ಎಂದು ತಿಳಿದುಬಂದಿದೆ.
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದಕೆರೆ ವಲಯದಲ್ಲಿ 10 ದಿನದ ಅಂತರದಲ್ಲಿ 3 ಬಾರಿ ಬೆಂಕಿಗೀಡಾಗಿ 200 ಎಕರೆ ಕಾಡು ಭಸ್ಮವಾಗಿದೆ. ಪ್ರಕರಣ ಸಂಬಂಧ ಬಂಧಿತನಾಗಿರುವ ಚೆಲುವರಾಯನಪುರದ ಚಂದ್ರು ತಾನು ಉದ್ದೇಶಪೂರ್ವಕವಾಗಿ ಬೆಂಕಿಯಿಟ್ಟಿಲ್ಲ ಎಂದಿದ್ದಾನೆ. ದಾರಿ ಬದಿಯಲ್ಲಿ ತೆರಳುತ್ತಿರಬೇಕಾದರೆ ಬೀಡಿ ಸೇದಿ ಬಿಸಾಡಿದ್ದೆ ಎಂದು ವಿಚಾರಣೆ ವೇಳೆ ಬಾಯ್ಬಿಟ್ಟಾನೆ ಎನ್ನಲಾಗ್ತಿದೆ.
ಪರಾರಿಯಾಗಿರುವ ಚಿಕ್ಕಮಾದಪ್ಪ ಹಾಗೂ ಮುನಿರಾಜು ಎಂಬುವರ ಪತ್ತೆಗೆ ಕಾರ್ಯತಂತ್ರ ಹೆಣೆಯಲಾಗಿದೆ. ಆರೋಪಿಗಳು ಓಡುವ ಭರದಲ್ಲಿ ಬಿಟ್ಟು ಹೋದ ಮೊಬೈಲ್ನಿಂದ ಬೆಂಕಿಯಿಟ್ಟ ಪ್ರಕರಣದ ಸಂಭಾಷಣೆಗಳ ಸಾಕ್ಷ್ಯ ಸಿಕ್ಕಿದೆ ಎನ್ನಲಾಗ್ತಿದೆ.
ಸದ್ಯ ಆರೋಪಿ ಚಂದ್ರುವನ್ನು ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ.