ETV Bharat / state

ರಸ್ತೆ ಮಧ್ಯೆ ಗುಂಡ್ಲುಪೇಟೆಯಲ್ಲಿ ಮುಂದುವರಿದ ಒಕ್ಕಣೆ.. ಮತ್ತೊಂದು ಕಾರಿಗೆ ಬೆಂಕಿ.. - ಚಾಮರಾಜನಗರ ಜಿಲ್ಲೆಯಲ್ಲಿ ಪೊಲೀಸರ ಜಾಣ ಕುರುಡು ಪ್ರದರ್ಶನ

ಚಾಮರಾಜನಗರ ಜಿಲ್ಲೆಯಲ್ಲಿ ಪೊಲೀಸರ ಜಾಣ ಕುರುಡು ಪ್ರದರ್ಶನದಿಂದ ವಾಹನ ಸವಾರರು ರಸ್ತೆಯಲ್ಲಿನ ರೈತರ ಒಕ್ಕಣೆಯಿಂದ ಪ್ರತಿದಿನ ನರಕಯಾತನೆ ಅನುಭವಿಸುತ್ತಿದ್ದಾರೆ.

fire-to-a-car-at-gundlupeta-in-chamarajanagara
ಗುಂಡ್ಲು ಪೇಟೆಯಲ್ಲಿ ಮುಂದುವರೆದ ಒಕ್ಕಣೆ...ಮತ್ತೊಂದು ಕಾರಿಗೆ ಬೆಂಕಿ
author img

By

Published : Jan 5, 2020, 5:59 PM IST

ಚಾಮರಾಜನಗರ: ಹುರುಳಿ ಸೊಪ್ಪಿಗೆ ಬೆಂಕಿ ಹಿಡಿದು ಮಾರುತಿ ವ್ಯಾನೊಂದು ಭಸ್ಮವಾದ ಬಳಿಕ ಇಂದು ಗುಂಡ್ಲುಪೇಟೆ ತಾಲೂಕಿನ ಬೇಗೂರು ಸಮೀಪದ ಸೋಮಹಳ್ಳಿ ಬಳಿ ಕಾರೊಂದಕ್ಕೆ ಬೆಂಕಿ ಹತ್ತಿಕೊಂಡು ಆತಂಕ ಸೃಷ್ಟಿಯಾದ ಘಟನೆ ನಡೆದಿದೆ.

fire to a car at gundlupeta in chamarajanagara
ಗುಂಡ್ಲುಪೇಟೆಯಲ್ಲಿ ರಸ್ತೆ ಮೇಲೆ ಮುಂದುವರಿದ ಒಕ್ಕಣೆ.. ಮತ್ತೊಂದು ಕಾರಿಗೆ ಬೆಂಕಿ

ಸಮೀಪದಲ್ಲೇ ಕಮರಹಳ್ಳಿ ಕೆರೆ ಇದ್ದಿದ್ದರಿಂದ ಸ್ಥಳೀಯರು ಎಚ್ಚೆತ್ತು, ಬೆಂಕಿ ನಂದಿಸಿ ಹೆಚ್ಚಿನ ಹಾನಿ ತಪ್ಪಿಸಿದ್ದಾರೆ. ಕನಕಗಿರಿ ಜೈನ ಪೀಠಕ್ಕೆ ಬೆಂಗಳೂರಿನ ಜೈನ ಕುಟುಂಬವೊಂದು ಭೇಟಿ ನೀಡಲು ತೆರಳುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.

ರಾತ್ರಿ ವೇಳೆ ಕೆಲವರು ರಸ್ತೆಯಲ್ಲಿ ಹುರುಳಿ ಸೊಪ್ಪು ಹರಡುತ್ತಿರುವುದರಿಂದ ಬೈಕ್ ಸವಾರರಿಗೂ ಫಜೀತಿ ಉಂಟು ಮಾಡಿದೆ‌. ಪೊಲೀಸರ ನಿರ್ಲಕ್ಷ್ಯಕ್ಕೆ ವಾಹನ ಸವಾರರು ಫಜೀತಿ ಅನುಭವಿಸುತ್ತಿದ್ದಾರೆ.

Intro:ಪೊಲೀಸರ ಜಾಣ ಕುರುಡು ಪ್ರದರ್ಶನ: ಒಕ್ಕಣೆಯಿಂದ ತಪ್ಪದ ವಾಹನ ಸವಾರರ ಸಂಕಷ್ಟ

ಚಾಮರಾಜನಗರ: ಪೊಲೀಸರ ಜಾಣ ಕುರುಡು ಪ್ರದರ್ಶನದಿಂದ ವಾಹನ ಸವಾರರು ರಸ್ತೆಯಲ್ಲಿನ ರೈತರ ಒಕ್ಕಣೆಯಿಂದ ಪ್ರತಿದಿನ ನರಕಯಾತನೆ ಅನುಭವಿಸುತ್ತಿದ್ದಾರೆ.

Body:ಹುರುಳಿ ಸೊಪ್ಪಿಗೆ ಮಾರುತಿ ವ್ಯಾನೊಂದು ಭಸ್ಮವಾದ ಬಳಿಕ ಇಂದು ಗುಂಡ್ಲುಪೇಟೆ ತಾಲೂಕಿನ ಬೇಗೂರು ಸಮೀಪದ ಸೋಮಹಳ್ಳಿ ಬಳಿ ಕಾರೊಂದಕ್ಕೆ ಬೆಂಕಿ ಹತ್ತಿಕೊಂಡು ಆತಂಕ ಸೃಷ್ಟಿಸಿದ ಘಟನೆ ನಡೆದಿದೆ.

ಸಮೀಪದಲ್ಲೇ ಕಮರಹಳ್ಳಿ ಕೆರೆ ಇದ್ದಿದ್ದರಿಂದ ಸ್ಥಳೀಯರು ಎಚ್ಚೆತ್ತು ಬೆಂಕಿ ನಂದಿಸಿ ಹೆಚ್ಚಿನ ಹಾನಿ ತಪ್ಪಿಸಿದ್ದಾರೆ. ಕನಕಗಿರಿ ಜೈನ ಪೀಠಕ್ಕೆ ಬೆಂಗಳೂರಿನ ಜೈನ ಕುಟುಂಬವೊಂದು ಭೇಟಿ ನೀಡಲು ತೆರಳುತ್ತಿದ್ದರು ಎಂದು ತಿಳಿದುಬಂದಿದೆ.

Conclusion:ರಾತ್ರಿ ವೇಳೆ ಕೆಲವರು ರಸ್ತೆಯಲ್ಲಿ ಹುರುಳಿ ಸೊಪ್ಪು ಹರಡುತ್ತಿರುವುದರಿಂದ ಬೈಕ್ ಸವಾರರಿಗೂ ಫಜೀತಿ ಉಂಟು ಮಾಡಿದೆ‌. ಒಟ್ಟಿನಲ್ಲಿ ಪೊಲೀಸರ ನಿರ್ಲಕ್ಷ್ಯಕ್ಕೆ ವಾಹನ ಸವಾರರು ಫಜೀತಿ ಅನುಭವಿಸುತ್ತಿದ್ದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ರಮ ವಹಿಸುವರೇ ಇಲ್ಲಾ ಸುಮ್ಮನಾಗುವರೇ ಕಾದು ನೋಡಬೇಕಿದೆ.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.