ಚಾಮರಾಜನಗರ: ನಗರದ ಹೊರವಲಯದಲ್ಲಿರುವ ಎಡಬೆಟ್ಟದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಹತ್ತಾರು ಎಕರೆ ಕುರುಚಲು ಕಾಡು ಸುಟ್ಟು ಭಸ್ಮವಾಗಿದೆ.
![fire in chamrajnagar hills](https://etvbharatimages.akamaized.net/etvbharat/prod-images/kn-cnr-05-fire-ka10038_07022021230838_0702f_1612719518_156.jpg)
ಕಳೆದ ವರ್ಷವೂ ಅಗ್ನಿ ನರ್ತನಕ್ಕೆ ಎಡಬೆಟ್ಟದ ಹತ್ತಾರು ಎಕರೆ ಕುರುಚಲು ಕಾಡು ಸುಟ್ಟು ಭಸ್ಮವಾಗಿತ್ತು. ಕೆಲ ದಿನಗಳಿಂದ ಚಿರತೆಯೊಂದು ಎಡಬೆಟ್ಟದಲ್ಲಿ ಓಡಾಡಿಕೊಂಡಿದ್ದು, ಮೆಡಿಕಲ್ ಕಾಲೇಜಿನ ಕಾರಿಡಾರಿನಲ್ಲಿ ಕಾಣಿಸಿಕೊಂಡು ಆತಂಕ ಮೂಡಿಸಿತ್ತು. ಚಿರತೆ ಓಡಾಟದಿಂದ ಕಿಡಿಗೇಡಿಗಳು ಕಾಡಿಗೆ ಬೆಂಕಿ ಹಾಕಿರುವ ಶಂಕೆ ವ್ಯಕ್ತವಾಗಿದೆ.