ಚಾಮರಾಜನಗರ: 16ರ ಬಾಲೆಯೊಂದಿಗೆ ವಿವಾಹ ಮಾಡಿದ್ದಷ್ಟೇ ಅಲ್ಲದೇ ವಿಚಾರಿಸಲು ತೆರಳಿದ್ದ ಅಧಿಕಾರಿಗಳ ವಿರುದ್ಧ ಅವಾಜ್ ಹಾಕಿದ್ದ ಐವರ ವಿರುದ್ಧ ಗುಂಡ್ಲುಪೇಟೆ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
24ರ ಯುವಕನೊಂದಿಗೆ 16ರ ಬಾಲಕಿಯ ವಿವಾಹ... ವಿಚಾರಿಸಲು ಹೋದ ಅಧಿಕಾರಿಗಳಿಗೆ ಆವಾಜ್!
ಗುಂಡ್ಲುಪೇಟೆ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಚೆಲುವರಾಜ್ ಇಂದು 'ಈಟಿವಿ ಭಾರತ' ವರದಿ ಆಧರಿಸಿ ಗುಂಡ್ಲುಪೇಟೆ ಪೊಲೀಸರಿಗೆ ದೂರು ಸಲ್ಲಿಸಿದ್ದರು. ದೂರು ದಾಖಲಿಸಿಕೊಂಡ ಪೊಲೀಸರು ಮದುವೆ ಮಾಡಿಕೊಂಡಿದ್ದ ಮಾದಪ್ಪ ಹಾಗೂ ಪಾಲಕರಾದ ಜವರಯ್ಯ, ಮಹಾದೇವಮ್ಮ, ದೊಡ್ಡಮ್ಮತಾಯಿ, ಮಹಾದೇವಶೆಟ್ಟಿ ವಿರುದ್ಧ ಬಾಲ್ಯ ವಿವಾಹ ಮಾಡಿರುವ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಕೋಡಹಳ್ಳಿಯ ಪಕ್ಕದ ಊರಾದ ಅಣ್ಣೂರುಕೇರಿಯಲ್ಲಿನ ಶಾಲೆಬಿಟ್ಟು ಮನೆಯಲ್ಲಿದ್ದ ಬಾಲಕಿಗೆ ಕೋಡಹಳ್ಳಿ ಗ್ರಾಮದ ಮಾದಪ್ಪ ಕಳೆದ ಬುಧವಾರ ಮುಂಜಾನೆ 5ರ ಸುಮಾರಿಗೆ ಮದುವೆ ಮಾಡಿಕೊಂಡಿದ್ದ. ಈ ಬಗ್ಗೆ ಖಚಿತ ಮಾಹಿತಿ ಪಡೆದು ತೆರಳಿದ್ದ ಸಿಡಿಪಿಒ ಮತ್ತು ಮಕ್ಕಳ ಸಹಾಯವಾಣಿಯ ಅಧಿಕಾರಿಗಳಿಗೆ ಪಾಲಕರು ಮದುವೆ ಆಗಿಲ್ಲವೆಂದು ಅವಾಜ್ ಹಾಕಿ ಕಳುಹಿಸಿದ್ದರು.