ಚಾಮರಾಜನಗರ: ಈ ಗ್ರಾಮಕ್ಕೆ ಗುಳೆ ಹೋದವರು ಬರಬೇಕೆಂದರೆ ಕೋವಿಡ್ ನೆಗೆಟಿವ್ ರಿಪೋರ್ಟ್ ಕಡ್ಡಾಯ. ಗ್ರಾಮದಲ್ಲಿ ತಿರುಗಾಡುವವರು ಮಾಸ್ಕ್ ಧರಿಸಿರಲೇಬೇಕು. ತಪ್ಪಿದಲ್ಲಿ 500 ರೂ. ದಂಡ ಕಟ್ಟಬೇಕು, ಅಪ್ಪಿತಪ್ಪಿ ಹೊರಗಿನವರು ಎಂಟ್ರಿ ಕೊಟ್ರೆ 1000 ರೂ. ದಂಡ ವಿಧಿಸದೇ ಬಿಡುವುದಿಲ್ಲ...
ಹೌದು.. ಚಾಮರಾಜನಗರ ತಾಲೂಕಿನ ಕೋಡಿಮೋಳೆ ಗ್ರಾಮದಲ್ಲಿ ಗ್ರಾಮದ ಎಲ್ಲಾ ಕೋಮಿನ ಮುಖಂಡರು ಕೊರೊನಾ ಕಟ್ಟಾಜ್ಞೆ ಹೊರಡಿಸಿದ್ದು, ಈಗಾಗಲೇ ಟಾಂಟಾಂ ಮಾಡಿಸಿದ್ದಾರೆ. ಅದರಂತೆ, ಗ್ರಾಮದಲ್ಲಷ್ಟೇ ಕೂಲಿ ಕೆಲಸಕ್ಕೆ ಹೋಗಬೇಕಿದ್ದು ಪರ ಊರಿಗೆ ಕೂಲಿಗೆ ಹೋಗುವಂತಿಲ್ಲ. ಮಾಸ್ಕ್ ಧರಿಸದೇ ಓಡಾಡಿದರೆ 500 ರೂ. ದಂಡ, ಮೈಕ್ರೋ ಫೈನಾನ್ಸನವರು, ಬೇರೆ ಊರಿನ ತರಕಾರಿ-ಹಣ್ಣು ಮಾರಾಟಗಾರರು ಗ್ರಾಮಕ್ಕೆ ಪ್ರವೇಶಿಸಿದರೆ 1000 ರೂ. ದಂಡ ತೆರಬೇಕಾಗಿದೆ.
ಇನ್ನು, ಗುಳೆ ಹೋದವರು ಗ್ರಾಮಕ್ಕೆ ವಾಪಸ್ ಬರಬೇಕೆಂದರೆ ಕೋವಿಡ್ ನೆಗೆಟಿವ್ ರಿಪೋರ್ಟ್ ಕಡ್ಡಾಯವಾಗಿದ್ದು, ತಪ್ಪಿದ್ದಲ್ಲಿ ದಂಡ ಕಟ್ಟಿ ಕೊರೊನಾ ಟೆಸ್ಟ್ಗೆ ಒಳಗಾಗಬೇಕಿದೆ. ಗ್ರಾಮದಲ್ಲಿ ಸೋಂಕಿನ ಪ್ರಕರಣಗಳು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಈ ಎಚ್ಚರಿಕೆ ಕೈಗೊಳ್ಳಲಾಗಿದ್ದು, ಗ್ರಾಮಸ್ಥರು ಉತ್ತಮ ಪ್ರತಿಕ್ರಿಯೆ ತೋರಿದ್ದಾರೆ.
ಬೇರೆ ಗ್ರಾಮದವರು ಎಂಟ್ರಿ ಕೊಟ್ರೆ 1000 ರೂ. ಫೈನ್.. ಮಾಸ್ಕ್ ಧರಿಸದಿದ್ದರೆ 500 ರೂ. ದಂಡ
ಗುಳೆ ಹೋದವರು ಗ್ರಾಮಕ್ಕೆ ವಾಪಸ್ ಬರಬೇಕೆಂದರೆ ಕೋವಿಡ್ ನೆಗೆಟಿವ್ ರಿಪೋರ್ಟ್ ಕಡ್ಡಾಯವಾಗಿದ್ದು, ತಪ್ಪಿದ್ದಲ್ಲಿ ದಂಡ ಕಟ್ಟಿ ಕೊರೊನಾ ಟೆಸ್ಟ್ಗೆ ಒಳಗಾಗಬೇಕಿದೆ. ಗ್ರಾಮದಲ್ಲಿ ಸೋಂಕಿನ ಪ್ರಕರಣಗಳು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಈ ಎಚ್ಚರಿಕೆ ಕೈಗೊಳ್ಳಲಾಗಿದ್ದು, ಗ್ರಾಮಸ್ಥರು ಉತ್ತಮ ಪ್ರತಿಕ್ರಿಯೆ ತೋರಿದ್ದಾರೆ.