ಚಾಮರಾಜನಗರ : ರಂಗೋಲಿ ಮತ್ತು ಮನೆಗೆ ನೀರು ಹಾಕುವ ಸಂಬಂಧ ಎರಡು ಕುಟುಂಬಗಳ ನಡುವೆ ಹೊಡೆದಾಟವೇ ಆಗಿರುವ ಘಟನೆ ಕೊಳ್ಳೇಗಾಲ ತಾಲೂಕಿನ ಸುರಪುರ ಗ್ರಾಮದಲ್ಲಿ ನಡೆದಿದೆ.
ಸುರಪುರ ಗ್ರಾಮದ ಸಹೋದರ ಸಂಬಂಧಿಗಳಾದ ಪುಟ್ಟಸ್ವಾಮಿಗೌಡ, ಸ್ವಾಮಿ, ಸತೀಶ್ ಹಾಗೂ ಲಲಿತಾ ಎಂಬುವರು ಗಾಯಗೊಂಡಿದ್ದಾರೆ. ಎರಡೂ ಕುಟಂಬಗಳು ದಾಯಾದಿಗಳಾಗಿದ್ದು, ರಂಗೋಲಿ ಮತ್ತು ಮನೆ ಮುಂದೆ ನೀರು ಹಾಕುವ ವಿಚಾರಕ್ಕೆ ಸಂಬಂಧಿಸಿದಂತೆ ಆರಂಭವಾದ ಮಾತು ಹೊಡೆದಾಟಕ್ಕೆ ತಲುಪಿದೆ.
ಇದನ್ನೂ ಓದಿ: ಕಬ್ಬು ಕಿತ್ತುಕೊಳ್ಳಲು ಹೋಗಿ ಟ್ರ್ಯಾಕ್ಟರ್ ಅಡಿ ಸಿಲುಕಿದ ಬಾಲಕ.. ರಕ್ಷಣೆಗೆ ಬರದೇ ಕೈಗೆ ಮೊಬೈಲ್ ಹಿಡಿದರಲ್ಲ ಜನ!
ಸದ್ಯ, ಗಾಯಾಳುಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಹಿಂತಿರುಗಿದ್ದು, ಸತೀಶ್ ಎಂಬುವರನ್ನು ಮಾಂಬಳ್ಳಿ ಪಿಎಸ್ಐ ಮಹಾದೇವಗೌಡ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಈ ಸಂಬಂಧ ಮಾಂಬಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.