ಚಾಮರಾಜನಗರ : ರೈತನಾಯಕ, ರೈತ ಸಂಘಟನೆ ಕಟ್ಟಿದ್ದ ಮಹಾನ್ ಹೋರಾಟಗಾರ ಪ್ರೊ. ಎಂ ಡಿ ನಂಜುಂಡಸ್ವಾಮಿ ಅವರ ಪುತ್ಥಳಿಯನ್ನು ಜಿಲ್ಲೆಯಲ್ಲೇ ಮೊದಲ ಬಾರಿಗೆ ಇಂದು ಅನಾವರಣ ಮಾಡಲಾಯಿತು.
ತೆಂಗು ಬೆಳೆಗಾರರ ಸಂಸ್ಕರಣಾ ಹಾಗೂ ಮಾರಾಟ ಸಹಕಾರರ ಸಂಘ ನಿರ್ಮಿಸಿರುವ ತೆಂಗು ಸಂಸ್ಕರಣಾ ಘಟಕದ ಆವರಣದಲ್ಲಿ ಪ್ರೊ. ಎಂಡಿಎನ್ ಅವರ ಕಂಚಿನ ಪ್ರತಿಮೆಯನ್ನು ಇಂದು ಹಿರಿಯ ಸಮಾಜವಾದಿ ಪ.ಮಲ್ಲೇಶ್ ಅನಾವರಣ ಮಾಡಿದರು.
ಚಾಮರಾಜನಗರವು ಎಂಡಿಎನ್ ಅವರ ಕರ್ಮಭೂಮಿಯಾಗಿದ್ದರೂ ಜಿಲ್ಲೆಯಲ್ಲಿ ಅವರ ಪುತ್ಥಳಿ, ಪ್ರತಿಮೆಯಾಗದಿರುವ ಕೊರಗು ರೈತರಲ್ಲಿ ಮನೆ ಮಾಡಿತ್ತು. ರೈತರ ಶ್ರೇಯೋಭಿವೃದ್ಧಿಗೆ ದುಡಿದ ನಾಯಕನ ಪುತ್ಥಳಿ ಇಂದು ಅನಾವರಣಗೊಂಡಿದ್ದರಿಂದ ರೈತರಲ್ಲಿ ಹರ್ಷ ತಂದಿತು. ಕಂಚಿನ ಪುತ್ಥಳಿಗೆ 5 ಲಕ್ಷ ರೂ. ವೆಚ್ಚ ತಗುಲಲಿದೆ. ಎಂಡಿಎನ್ ಅವರ ಶಾಲಿಗೆ ಹಸಿರು ಬಣ್ಣ ಹಚ್ಚಬೇಕೆಂದು ಪ.ಮಲ್ಲೇಶ್ ಸೇರಿದಂತೆ ಹಲವರು ಒತ್ತಾಯಿಸಿದರು.