ಚಾಮರಾಜನಗರ: ಗುಂಡ್ಲುಪೇಟೆ ತಾಲೂಕಿನ ಕುಂದಕೆರೆ ಗ್ರಾ. ಪಂ. ಚುನಾವಣೆಯಲ್ಲಿ ಪತಿ-ಪತ್ನಿ ಕಣಕ್ಕಿಳಿದು ಗ್ರಾಮಸ್ಥರ ಮತಗೆಲ್ಲಲು ಮುಂದಾಗಿದ್ದಾರೆ.
ರೈತ ಹೋರಾಟಗಾರರಾದ ಕುಂದಕೆರೆ ಸಂಪತ್ ಮತ್ತು ಅವರ ಪತ್ನಿ ಮಂಗಳಮ್ಮ ನಾಮಪತ್ರ ಸಲ್ಲಿಸಿದ್ದಾರೆ. ಗ್ರಾಮದ 1 ನೇ ವಾರ್ಡ್ನ ಸಾಮಾನ್ಯ ಮಹಿಳಾ ಮೀಸಲು ಕ್ಷೇತ್ರದಲ್ಲಿ ಪತ್ನಿ ಮಂಗಳಮ್ಮ ಕಣಕ್ಕಿಳಿದರೆ, ಗ್ರಾಮದ 2 ನೇ ವಾರ್ಡ್ನ ಸಾಮಾನ್ಯ ಕ್ಷೇತ್ರದಲ್ಲಿ ಸಂಪತ್ ಮತಬೇಟೆಗೆ ಇಳಿದಿದ್ದಾರೆ.
ಓದಿ: ಡಾರ್ಕ್ ವೆಬ್ ಮೂಲಕ ಡ್ರಗ್ ಖರೀದಿ: ಆರೋಪಿಗಳಿಗೆ ಕೋರ್ಟ್ ಜಾಮೀನು
ಈ ದಂಪತಿ ರೈತಸಂಘದ ಬೆಂಬಲಿತ ಅಭ್ಯರ್ಥಿಗಳಾಗಿ ಕಣಕ್ಕಿಳಿದಿದ್ದಾರೆ. ಇದರೊಟ್ಟಿಗೆ, ಈ ಬಾರಿ ರೈತ ಸಂಘದ ಕಾರ್ಯಕರ್ತರು ಪ್ರೊ.ಎಂಡಿಎನ್ ಆಶಯ ಸಾಕಾರಕ್ಕಾಗಿ ಪಂಚಾಯಿತಿ ಫೈಟ್ ಗೆ ಧುಮುಕಿ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ.