ETV Bharat / state

ಬಸ್​ ಓಡಿಸುವಾಗಲೇ ಮೂರ್ಛೆ ಹೋದ ಚಾಲಕ, ಜಮೀನಿಗಿಳಿದ ಬಸ್​... ಮುಂದೇನಾಯ್ತು?

ಯಳಂದೂರು ತಾಲೂಕಿನ ಯರಿಯೂರು ಹಾಗೂ ಮದ್ದೂರು ರಸ್ತೆ ನಡುವೆ ಈ ಅನಾಹುತ ಸಂಭವಿಸಿದೆ.ಘಟನೆಯಲ್ಲಿ ಪ್ರಯಾಣಿಕರಿಗೆ ಯಾವುದೇ ಸಾವು-ನೋವು ಉಂಟಾಗಿಲ್ಲ.

Epilepsy disease to Driver while driving,
ಚಾಲಕನಿಗೆ ಪಿಡ್ಸ್ ಬಂದು ಜಮೀನಿಗಿಳಿದ ಬಸ್
author img

By

Published : Sep 24, 2020, 5:49 PM IST

ಚಾಮರಾಜನಗರ :ಬಸ್​ ಸಂಚಾರ ಮಾಡುತ್ತಿದ್ದ ವೇಳೆ ಚಾಲಕ ಮೂರ್ಛೆ ಹೋದ ಪರಿಣಾಮ ನಿಯಂತ್ರಣ ತಪ್ಪಿದ ಬಸ್ ಜಮೀನಿಗಿಳಿದಿದೆ. ಅದೃಷ್ಟವಶಾತ್​ ಯಾವುದೇ ಅನಾಹುತ ಸಂಭವಿಸಿಲ್ಲ.

ಬಸ್​ ಓಡಿಸುತ್ತಿದ್ದ ಚಾಲಕನಿಗೆ ಮೂರ್ಛೆ
ಬಸ್​ ಓಡಿಸುತ್ತಿದ್ದ ಚಾಲಕನಿಗೆ ಮೂರ್ಛೆ

ಯಳಂದೂರು ತಾಲೂಕಿನ ಯರಿಯೂರು ಹಾಗೂ ಮದ್ದೂರು ರಸ್ತೆ ನಡುವೆ ಈ ಅನಾಹುತ ಸಂಭವಿಸಿದೆ. ಕೊಳ್ಳೇಗಾಲದಿಂದ ಚಾಮರಾಜನಗರಕ್ಕೆ ಈ ಸಾರಿಗೆ ಬಸ್​ ಬರುತ್ತಿತ್ತು. ಈ ವೇಳೆ ಬಸ್​ನ ಚಾಲಕ ಎಂ.ಎನ್‌.ಯಾಲಕ್ಕಿ ಎಂಬವರಿಗೆ ಮೂರ್ಛೆ ಬಂದಿದೆ. ನಂತರ ನಿಯಂತ್ರಣ ಕಳೆದುಕೊಂಡ ಬಸ್, ಜಮೀನಿಗೆ ನುಗ್ಗಿದೆ. 10 ಅಡಿ ಆಳಕ್ಕೆ ಇಳಿದರೂ ಬಸ್ ಪಲ್ಟಿಯಾಗದಿದ್ದರಿಂದ ದೊಡ್ಡ ದುರಂತ ತಪ್ಪಿದಂತಾಗಿದೆ.

ಚಾಲಕನಿಗೆ ಪಿಡ್ಸ್ ಬಂದು ಜಮೀನಿಗಿಳಿದ ಬಸ್

ಬಸ್​ನಲ್ಲಿ 28 ಪ್ರಯಾಣಿಕರು ಇದ್ದರೆಂದು ತಿಳಿದುಬಂದಿದ್ದು, ಓರ್ವ ಮಹಿಳೆಗೆ ಮಾತ್ರ ಸಣ್ಣ ಪುಟ್ಟ ಗಾಯವಾಗಿವೆ. ಚಾಲಕನನ್ನು ಚಾಮರಾಜನಗರ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಯಳಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.