ETV Bharat / state

ಬೊಲೆರೊ ವಾಹನವನ್ನು ರಸ್ತೆಬದಿಗೆ ತಳ್ಳಿದ ಗಜರಾಜ: ವಿಡಿಯೋ - ಬೆಂಗಳೂರು-ದಿಂಡಿಗಲ್ ರಾಷ್ಟೀಯ ಹೆದ್ದಾರಿ

ಆನೆಯೊಂದು ಬೊಲೆರೊ ಪಿಕಪ್​ ವಾಹನವನ್ನು ಅಡ್ಡಗಟ್ಟಿ ರಸ್ತೆಬದಿಗೆ ತಳ್ಳಿರುವ ಘಟನೆ ರಾಜ್ಯದ ಗಡಿ ಕಾರೆಪಾಳ್ಯದಲ್ಲಿ ನಡೆದಿದೆ.

ವಾಹನವನ್ನು ರಸ್ತೆಬದಿಗೆ ತಳ್ಳಿದ  ಆನೆ
ವಾಹನವನ್ನು ರಸ್ತೆಬದಿಗೆ ತಳ್ಳಿದ ಆನೆ
author img

By

Published : Oct 8, 2020, 10:31 AM IST

ಚಾಮರಾಜನಗರ: ಕಬ್ಬಿಗಾಗಿ ನಿತ್ಯ ವಾಹನಗಳನ್ನು ಆನೆಗಳು ಅಡ್ಡಗಟ್ಟುವುದು ಬೆಂಗಳೂರು-ದಿಂಡಿಗಲ್ ರಾಷ್ಟೀಯ ಹೆದ್ದಾರಿಯಲ್ಲಿ ಹೆಚ್ಚಾಗುತ್ತಿದ್ದು, ಇದೀಗ ಬೊಲೆರೂ ಪಿಕಪ್ ವಾಹನವನ್ನು ಗಜರಾಜ ರಸ್ತೆಬದಿಗೆ ತಳ್ಳಿರುವ ಘಟನೆ ರಾಜ್ಯದ ಗಡಿ ಕಾರೆಪಾಳ್ಯದಲ್ಲಿ ನಡೆದಿದೆ.

ಕಬ್ಬು ತಿನ್ನಲೆಂದು ಹೆದ್ದಾರಿಯಲ್ಲಿ ಗಜರಾಜ ನಿಂತಿದ್ದ ವೇಳೆ ಮುಂದೆ ಹೋಗುತ್ತಿದ್ದ ಲಾರಿಯನ್ನು ಓವರ್​ಟೇಕ್​ ಮಾಡಲು ಮುಂದಾದ ಸರಕು ತುಂಬಿದ ಬೊಲೆರೋ ಪಿಕಪ್ ವಾಹನವನ್ನು ಆನೆ ತಡೆದು ರಸ್ತೆ ಬದಿಗೆ ತಳ್ಳಿ ಆತಂಕ ಸೃಷ್ಟಿಸಿತು.

ವಾಹನವನ್ನು ರಸ್ತೆಬದಿಗೆ ತಳ್ಳಿದ ಆನೆ

ಕೂಡಲೇ, ಅಪಾಯ ಅರಿತ ಚಾಲಕ ವಾಹನದಿಂದ ಇಳಿದು ಪ್ರಾಣ ಉಳಿಸಿಕೊಂಡಿದ್ದಾನೆ. ವಿಡಿಯೋವನ್ನು ಮತ್ತೋರ್ವ ಚಾಲಕ ಮೊಬೈಲ್​ನಲ್ಲಿ ಸೆರೆಹಿಡಿದಿದ್ದಾನೆ.

ಕಾಡಾನೆ ಹಿಂಡನ್ನು ಕಂಡೊಡನೆ ನಿಧಾನಗತಿಯಲ್ಲಿ ತೆರಳಿದರೆ ಮಾತ್ರ ಅಪಾಯದಿಂದ ಪಾರಾಗಬಹುದು. ರಭಸದಿಂದ ಏನಾದರೂ ಬಂದರೇ ಗಜಪಡೆ ಬ್ರೇಕ್ ಹಾಕಲಿವೆ. ಇನ್ನು ಬಿಆರ್​ಟಿ ಹುಲಿ ಸಂರಕ್ಷಿತ ಪ್ರದೇಶ ಹಾಗೂ ತಮಿಳುನಾಡಿನ ಸತ್ಯಮಂಗಲಂ ಅರಣ್ಯ ಪ್ರದೇಶದ ನಡುವೆ ರಾಷ್ಟ್ರೀಯ ಹೆದ್ದಾರಿ ಹಾದುಹೋಗಿದ್ದು ಆನೆಗಳ ಉಪಟಳಕ್ಕೆ ಅರಣ್ಯ ಇಲಾಖೆ ಯಾವುದೇ ಕ್ರಮ ಕೈಗೊಂಡಿಲ್ಲ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.