ETV Bharat / state

ಕಾರಿನಲ್ಲಿ 15 ಕೆಜಿ‌ ತೂಕದ ಆನೆದಂತ ಸಾಗಾಟ: ಕೊಳ್ಳೇಗಾಲದಲ್ಲಿ ಮೂವರ ಬಂಧನ - elephant ivory illegal shipping 3 were arrested

ಅಕ್ರಮವಾಗಿ ಆನೆ ದಂತ ಸಾಗಿಸುತ್ತಿದ್ದ ಆರೋಪಿಗಳನ್ನು ಕೊಳ್ಳೇಗಾಲ ಅರಣ್ಯ ಸಂಚಾರಿ ದಳದ ಪೊಲೀಸರು ದಾಳಿ ನಡೆಸಿ ಬಂಧಿಸಿದ್ದಾರೆ.

elephant-ivory-illegal-shipping-3-were-arrested
ಕಾರಿನಲ್ಲಿ 15 ಕೆಜಿ‌ ತೂಕದ ಆನೆದಂತ ಸಾಗಾಟ: ಕೊಳ್ಳೇಗಾಲದಲ್ಲಿ ಮೂವರ ಬಂಧನ
author img

By

Published : Jun 13, 2022, 6:37 PM IST

ಚಾಮರಾಜನಗರ: ಅಕ್ರಮವಾಗಿ ಆನೆದಂತ ಸಾಗಿಸುತ್ತಿದ್ದ ಆರೋಪಿಗಳನ್ನು ಬಂಧಿಸಿರುವ ಘಟನೆ ಕೊಳ್ಳೇಗಾಲ ತಾಲೂಕಿನ‌ ಸತ್ತೇಗಾಲ ಹ್ಯಾಂಡ್ ಪೋಸ್ಟ್‌ನಲ್ಲಿ‌ ನಡೆದಿದೆ.‌ ಬಂಧಿತರನ್ನು ಚಿಕ್ಕಮಗಳೂರು ಮೂಲದ ಪ್ರೀತಮ್(31), ಜಗದೀಶ್(21), ಪುನೀತ್(28) ಎಂದು ಗುರುತಿಸಲಾಗಿದ್ದು, ಹೇಮಂತ್(26) ಎಂಬಾತ ಪರಾರಿಯಾಗಿದ್ದಾನೆ. ಆರೋಪಿಗಳು ಕಾರಿನಲ್ಲಿ ಆನೆ ದಂತಗಳನ್ನು ಸಾಗಿಸುತ್ತಿದ್ದ ಖಚಿತ ಮಾಹಿತಿ ಮೇರೆಗೆ ಕೊಳ್ಳೇಗಾಲ ಅರಣ್ಯ ಸಂಚಾರಿ ದಳದ ಪೊಲೀಸರು ದಾಳಿ ನಡೆಸಿದ್ದರು.

ಆರೋಪಿಗಳಿಂದ ಎರಡು ಬೃಹತ್ ಗಾತ್ರ ಆನೆ ದಂತ, ಆಲ್ಟೋ ಕಾರು, ಮೂರು ಮೊಬೈಲ್ ವಶಪಡಿಸಿಕೊಂಡಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ‌. ‌ಕೊಳ್ಳೇಗಾಲ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಇದನ್ನೂ ಓದಿ: ಕೊಪ್ಪಳ: ಮಾರಾಮಾರಿಗೆ ಕಾರಣವಾದ ಯುವಕ-ಯುವತಿಯ ಪ್ರೇಮ ಪ್ರಕರಣ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.