ಚಾಮರಾಜನಗರ: ಕಬ್ಬು ತುಂಬಿದ ಲಾರಿಯೊಂದಕ್ಕೆ ಒಂಟಿ ಸಲಗವೊಂದು ಅಡ್ಡ ಹಾಕಿ ಕಬ್ಬು ತಿಂದಿರುವ ಘಟನೆ ಬೆಂಗಳೂರು-ದಿಂಬಂ ರಸ್ತೆಯ ಸತ್ಯಮಂಗಲ ಅರಣ್ಯಪ್ರದೇಶಕ್ಕೆ ಒಳಪಡುವ ಆಸನೂರು ಬಳಿ ನಡೆದಿದೆ.
ರಾಜ್ಯದ ಗಡಿಭಾಗವಾದ ತಾಳವಾಡಿಯಿಂದ ಕಬ್ಬು ಹೊತ್ತೊಯ್ಯುತ್ತಿದ್ದ ಲಾರಿಗೆ ರಸ್ತೆಬದಿ ನಿಂತಿದ್ದ ಒಂಟಿ ಸಲಗ ಅಡ್ಡಹಾಕಿತ್ತು. ಕಬ್ಬಿಗಾಗಿ ಆನೆ ಅಡ್ಡ ಹಾಕಿದೆ ಎಂದರಿತ ಲಾರಿ ಚಾಲಕ ಕ್ಷಣಕಾಲ ಸುಮ್ಮನಾಗಿದ್ದ.
ಲಾರಿಯನ್ನೆಲ್ಲಾ ಸುತ್ತು ಹಾಕಿ ಒಂದೊಂದೇ ಕಬ್ಬಿನ ಜಲ್ಲೆಯನ್ನು ಗಜರಾಜ ಅರ್ಧ ತಾಸಿಗೂ ಹೆಚ್ಚು ಕಾಲ ತಿಂದಿದ್ದಾನೆ. ಬಳಿಕ ಲಾರಿ ಚಾಲಕ ನಿಧಾನವಾಗಿ ಲಾರಿ ಚಾಲನೆ ಮಾಡುತ್ತಾ ಕಾಲ್ಕಿತ್ತಿದ್ದಾನೆ. ಸೊಂಡಿಲನ್ನು ಚಾಚಿ ಕಬ್ಬಿನ ಜಲ್ಲೆ ತಿನ್ನುತ್ತಿದ್ದ ಗಜರಾಜನನ್ನು ವಾಹನ ಸವಾರರು, ಸ್ಥಳೀಯರು ಮೊಬೈಲ್ಗಳಲ್ಲಿ ಸೆರೆಹಿಡಿದಿದ್ದಾರೆ.