ಚಾಮರಾಜನಗರ: ಹೆಣ್ಣಾನೆಯೊಂದು ವಯೋಸಹಜವಾಗಿ ಮೃತಪಟ್ಟಿರುವ ಘಟನೆ ಬಿಳಿಗಿರಿರಂಗನಬೆಟ್ಟ ಹುಲಿ ಸಂರಕ್ಷಿತ ಪ್ರದೇಶದ ಪುಣಜನೂರಿನ ಎತ್ತೆಗೌಡನದೊಡ್ಡಿಯಲ್ಲಿ ನಡೆದಿದೆ.
ಆನೆಗೆ 55 ವರ್ಷವಾಗಿರಬಹುದು ಎಂದು ಅಂದಾಜಿಸಲಾಗಿದ್ದು, ಸ್ವಾಭಾವಿಕವಾಗಿ ಮೃತಪಟ್ಟಿದೆ. ಆನೆಗೆ ಯಾವುದೇ ರೀತಿಯ ಗಾಯಗಳಿರಲಿಲ್ಲ. ಮರಣೋತ್ತರ ಪರೀಕ್ಷೆ ಬಳಿಕ ಅಂತ್ಯ ಸಂಸ್ಕಾರ ನೆರವೇರಿಸಿದ್ದೇವೆ ಎಂದು ಪುಣಜನೂರು ಆರ್ಎಫ್ಒ ಕಾಂತರಾಜು ಈಟಿವಿ ಭಾರತಕ್ಕೆ ತಿಳಿಸಿದ್ದಾರೆ.
ಗುರುವಾರ ಕೂಡ ಹನೂರು ತಾಲೂಕಿನಲ್ಲಿ ಸಲಗವೊಂದು ಅಕ್ರಮ ವಿದ್ಯುತ್ ತಂತಿ ಸ್ಪರ್ಶಿಸಿ ಬಲಿಯಾದ ಘಟನೆ ಹಸಿರಾಗಿರುವುಗಾಲೇ ಮತ್ತೊಂದು ಆನೆ ಅಸುನೀಗಿರುವುದು ಪರಿಸರ ಪ್ರೇಮಿಗಳ ಆತಂಕಕ್ಕೆ ಕಾರಣವಾಗಿದೆ.