ETV Bharat / state

ಹನೂರು ಬಳಿ 60 ವರ್ಷದ ಆನೆ ಕಳೇಬರ ಪತ್ತೆ - Elephant found dead in Kollegala,

ಹನೂರು ಪಟ್ಟಣದ ಹೊರವಲಯದಲ್ಲಿರುವ ಬಾಳೆವನವಡ್ಡು ಸಮೀಪ 60 ವರ್ಷದ ಆನೆಯ ಕಳೇಬರ ಪತ್ತೆಯಾಗಿದೆ.

Elephant died body
ಆನೆ ಕಳೇಬರ ಪತ್ತೆ
author img

By

Published : May 29, 2021, 2:13 PM IST

Updated : May 29, 2021, 3:19 PM IST

ಕೊಳ್ಳೇಗಾಲ: ಒಂಟಿ ಸಲಗವೊಂದು ಆಕಸ್ಮಿಕವಾಗಿ ಹನೂರು ಅರಣ್ಯ ವ್ಯಾಪ್ತಿಯ ಬಾಳೆವನವಡ್ಡು ಬೀಟ್​​ನಲ್ಲಿ ಸಾವನ್ನಪ್ಪಿರುವ ಘಟನೆ ನಡೆದಿದೆ.

ಹನೂರು ಪಟ್ಟಣದ ಹೊರವಲಯದಲ್ಲಿರುವ ಬಾಳೆವನವಡ್ಡು ಸಮೀಪ ಗಂಡಾನೆಯೊಂದು ಮೃತಪಟ್ಟಿದೆ ಎಂದು ಸ್ಥಳೀಯ ರೈತರು ಅರಣ್ಯ ಇಲಾಖೆಗೆ ತಿಳಿಸಿದ್ದಾರೆ. ಮಾಹಿತಿ ತಿಳಿದ ಸ್ಥಳಿಯ ಅರಣ್ಯಾಧಿಕಾರಿಗಳು ಸ್ಥಳಕ್ಕೆ ತೆರಳಿ ಮರಣೋತ್ತರ ಪರೀಕ್ಷೆ ನಡೆಸಿದ್ದು,‌ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಈ ಬಗ್ಗೆ ಈಟಿವಿ ಭಾರತದೊಂದಿಗೆ‌ ಮಲೆಮಹದೇಶ್ವರ ವನ್ಯ ಜೀವಿ ವಿಭಾಗದ ಡಿಎಫ್ಒ ಮಾತನಾಡಿ, 60 ವರ್ಷದ ಸಲಗವೊಂದು ಸಾವನ್ನಪ್ಪಿರುವುದು ಕಂಡು ಬಂದಿದೆ. ಮರಣೋತ್ತರ ಪರೀಕ್ಷೆಯಲ್ಲಿ ಸಹಜ ಸಾವಗಿರುವುದು ತಿಳಿದು ಬಂದಿದೆ ಎಂದರು.

Last Updated : May 29, 2021, 3:19 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.