ಚಾಮರಾಜನಗರ: ಅರಣ್ಯದೊಳಗೆ ಗಸ್ತಿನಲ್ಲಿದ್ದ ಫಾರೆಸ್ಟ್ ವಾಚರ್ ಮೇಲೆ ಕಾಡಾನೆಯೊಂದು ದಾಳಿ ಮಾಡಿ ಗಂಭೀರವಾಗಿ ಗಾಯಗೊಳಿಸಿರುವ ಘಟನೆ ಬಿಳಿಗಿರಿರಂಗನ ಬೆಟ್ಟ ದೇವಾಲಯ ಹುಲಿ ಸಂರಕ್ಷಿತ ಪ್ರದೇಶದ ಪುಣಜನೂರು ವಲಯದಲ್ಲಿ ನಡೆದಿದೆ.
ಅರಣ್ಯ ವೀಕ್ಷಕ ಜಡೆಯಾ(58) ಆನೆ ದಾಳಿಗೊಳಗಾದ ವ್ಯಕ್ತಿಯಾಗಿದ್ದು, ಇವರೊಟ್ಟಿಗೆ ಇದ್ದ ಮತ್ತಿಬ್ಬರು ಓಡಿ ಹೋಗಿ ದಾಳಿಯಿಂದ ಪಾರಾಗಿದ್ದಾರೆ. ಪುಣಜನೂರು ಅರಣ್ಯ ವಲಯದ ಕರಿಕಲ್ಲು ಮುಂಟಿ ಎಂಬಲ್ಲಿ ಗಸ್ತು ತಿರುಗುತ್ತಿದ್ದಾಗ ಈ ಘಟನೆ ನಡೆದಿದ್ದು, ಜಡೆಯಾ ಗಂಭೀರವಾಗಿ ಗಾಯಗೊಂಡಿದ್ದಾರೆ. ಚಾಮರಾಜನಗರ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದು ಆಸ್ಪತ್ರೆಗೆ ಅರಣ್ಯಾಧಿಕಾರಿಗಳು ತೆರಳಿದ್ದಾರೆ.
ಇದನ್ನೂ ಓದಿ : ಶಾಲಾ- ಕಾಲೇಜು ಪುನಾರಂಭದ ಬಗ್ಗೆ ಸಿಎಂ ನೇತೃತ್ವದಲ್ಲಿ ಸಭೆ: ಸಚಿವ ನಾಗೇಶ್