ಚಾಮರಾಜನಗರ: ಕೊಡಗಿನಲ್ಲಿ ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಎಸೆತ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾಧಿಕಾರಿಯಾಗಿ ಚಾಮರಾಜನಗರ ಎಎಸ್ಪಿ ಕೆ.ಎಸ್ ಸುಂದರ್ ರಾಜ್ ಅವರನ್ನು ನೇಮಕ ಮಾಡಲಾಗಿದೆ.
ಸಿದ್ದರಾಮಯ್ಯ ಭೇಟಿ ವೇಳೆ ಯಾರಿಂದ ತಪ್ಪಾಗಿದೆ?, ಯಾರಿಂದ ಕರ್ತವ್ಯ ಲೋಪವಾಗಿದೆ ಹಾಗೂ ಅಹಿತಕರ ಘಟನೆ ಹಿಂದೆ ಯಾರಿದ್ದಾರೆ? ಎಂಬ ಸಮಗ್ರ ತನಿಖೆಯನ್ನು ಸುಂದರ್ ರಾಜ್ ನಡೆಸಲಿದ್ದು, ಶೀಘ್ರವೇ ಸಂಪೂರ್ಣ ತನಿಖೆ ನಡೆಸಿ ವರದಿ ಸಲ್ಲಿಸಲಿದ್ದಾರೆ ಎಂದು ತಿಳಿದು ಬಂದಿದೆ.
ವಿಧಾನಸಭಾ ವಿಪಕ್ಷ ನಾಯಕ ಸಿದ್ದರಾಮಯ್ಯ ಕಳೆದ 18 ರಂದು ನೆರೆ ಹಾನಿ ವೀಕ್ಷಣೆಗೆ ತೆರಳಿದ್ದ ವೇಳೆ ಅವರ ಕಾರಿನ ಮೇಲೆ ಮೊಟ್ಟೆ ಎಸೆದು, ಸಾವರ್ಕರ್ ಭಿತ್ತಿಚಿತ್ರಗಳನ್ನು ಪ್ರದರ್ಶಿಸಲಾಗಿತ್ತು.
ಇದನ್ನೂ ಓದಿ: ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಎಸೆದ ಪ್ರಕರಣ: ಸಮಗ್ರ ತನಿಖೆಗೆ ಸಿಎಂ ಸೂಚನೆ