ಚಾಮರಾಜನಗರ: ಎರಡು ದಿನಗಳ ಜಿಲ್ಲಾ ಪ್ರವಾಸದಲ್ಲಿರುವ ಶಿಕ್ಷಣ ಸಚಿವ ಸುರೇಶ್ ಕುಮಾರ್ ಇಂದು ಬೆಳಗ್ಗೆ ಚಾಮರಾಜನಗರ ತಾಲೂಕಿನ ವಿವಿಧ ಶಾಲೆಗಳಿಗೆ ಭೇಟಿ ನೀಡಿ ಮಕ್ಕಳ ಯೋಗಕ್ಷೇಮ ವಿಚಾರಿಸಿದರು.
ಮೊದಲಿಗೆ ನಲ್ಲೂರು ಹಿರಿಯ ಪ್ರಾಥಮಿಕ ಶಾಲೆಗೆ ತೆರಳಿದ ಸಚಿವರು ಮತ್ತು ಅಧಿಕಾರಿಗಳಿಗೆ ಮಕ್ಕಳು, ಶಿಕ್ಷಕರು ಪುಷ್ಪಗುಚ್ಛ ನೀಡಿ ಸ್ವಾಗತಿಸಿದರು. ಇದೇ ವೇಳೆ, ಕೊರೊನಾಗೆ ಭಯಪಡದೇ ಎಚ್ಚರಿಕೆ ವಹಿಸಿ, ಮಾಸ್ಕ್ ಧರಿಸಿ, ಸ್ಯಾನಿಟೈಸರ್ ಬಳಸಿಕೊಂಡು ಸಾಮಾಜಿಕ ಅಂತರ ಕಾಪಾಡಿಕೊಳ್ಳುವಂತೆ ಧೈರ್ಯ ತುಂಬಿದರು.
ಇದನ್ನೂ ಓದಿ:ಬಸ್ ನಿಲ್ಲಿಸದೆ ವಿದ್ಯಾರ್ಥಿಗಳಿಗೆ ಸಮಸ್ಯೆ: ಸಾರಿಗೆ ಸಚಿವರಿಗೆ ಪತ್ರ ಬರೆದ ಶಿಕ್ಷಣ ಸಚಿವ
ಇದಾದ ಬಳಿಕ, ವಿದ್ಯಾರ್ಥಿಗಳಿಂದ 7 ನೇ ಮಗ್ಗಿ ಹೇಳಿಸಿ 6 ನೇ ಮಗ್ಗಿಯನ್ನು ಉಲ್ಟಾ ಹೇಳುವಂತೆ ಉತ್ತೇಜಿಸಿದರು. ಮಕ್ಕಳು ಸಹ ಸಚಿವರ ಟಾಸ್ಕ್ ಅನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದರು. ಶಾಲೆಗೆ ಎಂದಿನಿಂದ ಬರುತ್ತೀದ್ದೀರಿ, ಆರೋಗ್ಯ ಹೇಗಿದೆ ಎಂದು ಪ್ರಶ್ನೆಗಳನ್ನು ಕೇಳಿ ಮಕ್ಕಳ ಅಭಿಪ್ರಾಯ ಸಂಗ್ರಹಿಸಿದರು.