ETV Bharat / state

ಮಕ್ಕಳು ತಿನ್ನುವ ಐಸ್ ಕ್ರೀಂಗೂ ಡ್ರಗ್ ಸವರುತ್ತಿರುವ ಗುಮಾನಿಯಿದೆ: ಸಚಿವ ಸುರೇಶ್ ಕುಮಾರ್ - ಡ್ರಗ್ಸ್ ಮಾಫಿಯ ಬಗ್ಗೆ ಸಚಿವ ಸುರೇಶ್​ ಕುಮಾರ್​ ಪ್ರತಿಕ್ರಿಯೆ

ಪ್ರತಿಷ್ಠಿತ ಶಾಲೆಗಳಲ್ಲಿ ಮಕ್ಕಳು ತಿನ್ನುವ ಐಸ್ ಕ್ರೀಂ ಮತ್ತು ಹಣ್ಣು ಹಂಪಲುಗಳ ಮೇಲೆ ಡ್ರಗ್ಸ್​ ಸವರುತ್ತಿರುವ ಗುಮಾನಿಯಿದೆ ಎಂದು ಸಚಿವ ಸುರೇಶ್​ ಕುಮಾರ್​ ಹೇಳಿದ್ದಾರೆ.

Education Minister Statement on Drug case
ಸಚಿವ ಸುರೇಶ್ ಕುಮಾರ್
author img

By

Published : Sep 7, 2020, 12:58 PM IST

ಚಾಮರಾಜನಗರ: ಶ್ರೀಮಂತ ಮಕ್ಕಳು ಓದುವ ಶಾಲೆಗಳಲ್ಲಿ ತಿನ್ನುವ ಐಸ್ ಕ್ರೀಂ ಮತ್ತು ಹಣ್ಣುಗಳಿಗೆ ಡ್ರಗ್ ಸವರುತ್ತಿರುವ ಗುಮಾನಿ ಇದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಶಿಕ್ಷಣ ಸಚಿವ ಎಸ್​.ಸುರೇಶ್​ ಕುಮಾರ್​ ಸ್ಫೋಟಕ ಮಾಹಿತಿಯನ್ನು ಹೊರಗೆಡವಿದ್ದಾರೆ.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಯುವ ಜನತೆಯನ್ನ ಹಾಳು ಮಾಡುವ ಜನರನ್ನು ಹಿಡಿದು ಜೈಲಿಗೆ ಕಳುಹಿಸುತ್ತೇವೆ. ಡ್ರಗ್ಸ್ ವಿಚಾರದಲ್ಲಿ ರಾಜ್ಯ ಸರ್ಕಾರ ಕಠಿಣ ನಿರ್ಧಾರ ಕೈಗೊಂಡಿದೆ. ಈ ವಿಚಾರದಲ್ಲಿ ರಾಜಿಯಾಗುವ ಪ್ರಶ್ನೆಯೇ ಇಲ್ಲ. ಡ್ರಗ್ಸ್ ಸಮಾಜ ಹಾಗೂ ಯುವ ಜನಾಂಗವನ್ನ ದುರ್ಬಲ ಮಾಡುವ ಪ್ರಯತ್ನ. ಇದನ್ನ ಬೇರು ಸಮೇತವಾಗಿ ಕಿತ್ತು ಹಾಕಬೇಕು ಎಂದರು.

ಸ್ಫೋಟಕ ಮಾಹಿತಿ ನೀಡಿದ ಸಚಿವ ಸುರೇಶ್​ ಕುಮಾರ್​

ಯುವ ಜನತೆ ಡ್ರಗ್ಸ್​ಗೆ ಬಲಿಯಾಗುವುದನ್ನ ಸಮಾಜ ಸಹಿಸುವುದಿಲ್ಲ. ಮೂರು ವರ್ಷದ ಹಿಂದೆಯೇ ಈ ಬಗ್ಗೆ ಬಿಜೆಪಿ ಧ್ವನಿ ಎತ್ತಿದೆ. ನಮ್ಮ ಜಿಲ್ಲೆಯಲ್ಲೂ ಕೂಡ ಡ್ರಗ್ಸ್​ ಪಿಡುಗಿನ ಮೂಲ ಹುಡುಕಿ ಕೊನೆಗಾಣಿಸುತ್ತೇವೆ ಎಂದು ಸಚಿವ ಸುರೇಶ್​ಕುಮಾರ್​ ಹೇಳಿದ್ರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.