ಕೊಳ್ಳೇಗಾಲ: ಮಾಜಿ ಸಂಸದ ದ್ರುವ ನಾರಾಯಣ ಅವರ ಕುರಿತು ಅವಿವೇಕಿ ಹಾಗೂ ಅರೆ ಪ್ರಜ್ಞಾವಂತ, ಕೇಂದ್ರ ಸರ್ಕಾರ ವಿರುದ್ದ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ಹೇಳಿಕೆ ನೀಡಿದ್ದ ಮಾಜಿ ಶಾಸಕ ಜಿ. ಎನ್. ನಂಜುಂಡಸ್ವಾಮಿ ಮಾತಿಗೆ ದ್ರುವ ನಾರಾಯಣ ಟಾಂಗ್ ನೀಡಿದ್ದಾರೆ.
ಕೇಂದ್ರ ಸರ್ಕಾರ, ಮಲ್ಯ, ನೀರವ್ ಮೋದಿ, ಇನ್ನಿತರ ಉದ್ಯಮಿಗಳ 68 ಸಾವಿರ ಕೋಟಿ ಸಾಲದ ಹಣವನ್ನು ವಜಾ ಮಾಡಿದೆ ಎಂಬುದು ತಿಳಿದುಬಂದಿದೆ. ಈ ಬಗ್ಗೆ ನಾನು ಮಾತನಾಡಿದ್ದೇನೆ. ಬಹುಶಃ ನಂಜುಂಡಸ್ವಾಮಿಗೆ ಈ ಬಗ್ಗೆ ಮಾಹಿತಿ ಇಲ್ಲದಂತೆ ಕಾಣುತ್ತಿದೆ ಎಂದು ದ್ರುವ ನಾರಾಯಣ ಹೇಳಿದ್ರು.
ಮಾಜಿ ಶಾಸಕ ಬಾಲರಾಜು, ದ್ರುವ ನಾರಾಯಣ ಅವರ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದು, ಅವರೊಬ್ಬ ದಕ್ಷ ರಾಜಕಾರಣಿ. ಅವರ ಬಗ್ಗೆ ಮಾತನಾಡುವ ನೈತಿಕತೆ ನಂಜುಂಡಸ್ವಾಮಿಗೆ ಇಲ್ಲ. ಕೇಂದ್ರ ಸರ್ಕಾರ ಸಾಲ ಮನ್ನಾ ಮಾಡಿರುವ ವಿಚಾರದಲ್ಲಿ ಪರವಹಿಸಿ ಮಾತನಾಡುವುದು ಒಂದು ದೇಶ ದ್ರೋಹದ ಕೆಲಸ ಎಂದು ಕಿಡಿಕಾರಿದರು.