ETV Bharat / state

ಗಡಿಜಿಲ್ಲೆ ಅಭಿಮಾನಿಗೆ ಮಂತ್ರಾಲಯದ ದಾರಿ ತೋರಿದ್ದರು ಅಣ್ಣಾವ್ರು...! - Dr.Rajkumar

ವರನಟ ಡಾ.ರಾಜ್ ಕುಮಾರ್ ಅಭಿಮಾನಿಯೊಬ್ಬರಿಗೆ ಮಂತ್ರಾಲಯದ ಹಾದಿ ತೋರಿದ್ದರು. ಆ ಅಭಿಮಾನಿ ಅಂದಿನಿಂದ ಇದು ವರೆಗೆ 800 ಕ್ಕೂ ಹೆಚ್ಚು ಮಂದಿಗೆ ರಾಯರ ದರ್ಶನ ಮಾಡಿಸಿದ್ದಾರೆ.

Vಗಡಿಜಿಲ್ಲೆ ಅಭಿಮಾನಿಗೆ ಮಂತ್ರಾಲಯದ ದಾರಿ ತೋರಿದ್ದರು ಅಣ್ಣಾವ್ರು...!
ಗಡಿಜಿಲ್ಲೆ ಅಭಿಮಾನಿಗೆ ಮಂತ್ರಾಲಯದ ದಾರಿ ತೋರಿದ್ದರು ಅಣ್ಣಾವ್ರು...!
author img

By

Published : Apr 24, 2020, 11:34 PM IST

ಚಾಮರಾಜನಗರ: ಮಂತ್ರಾಲಯ ಗುರುರಾಯರು ಕಲಿಯುಗದ ಕಾಮಧೇನುವೆಂದೇ ಭಕ್ತರ ನಂಬಿಕೆ. ವರನಟ ಡಾ.ರಾಜ್ ಅವರು ಕೂಡ ರಾಘವೇಂದ್ರ ಶ್ರೀಗಳ ಪಾತ್ರಕ್ಕೆ ಪರಕಾಯ ಪ್ರವೇಶ ಮಾಡಿ ಗಮನ ಸೆಳೆದಿದ್ದರು. ಆದರೆ ಅವರು ಅಭಿಮಾನಿಯೊಬ್ಬರಿಗೆ ಮಂತ್ರಾಲಯದ ಹಾದಿ ತೋರಿದ್ದರು.

1995ರ ಒಂದು ಮಧ್ಯಾಹ್ನ ಚಾಮರಾಜನಗರದ ಹರಳುಕೋಟೆ ಜನಾರ್ಧನ ಸ್ವಾಮಿಯ ಅರ್ಚಕರಾಗಿದ್ದ ಅನಂತಪ್ರಸಾದ್, ಡಾ.ರಾಜ್ ಅವರು ಹುಟ್ಟೂರು ಗಾಜನೂರಿಗೆ ಬಂದ ವಿಚಾರ ತಿಳಿದು ಭೇಟಿ ಮಾಡಲು ತೆರಳುತ್ತಾರೆ. ಭೇಟಿಯೂ ಆಗಿ ಅಣ್ಣಾವ್ರೊಂದಿಗೆ ಮಾತನಾಡುತ್ತಿದ್ದ ವೇಳೆ ರಾಯರ ಸನ್ನಿಧಾನಕ್ಕೆ ಹೋಗಿದ್ದೀರಾ..? ಎಂದು ಕೇಳಿದ್ದಕ್ಕೆ ಅನಂತಪ್ರಸಾದ್ ಇಲ್ಲ. ಅಲ್ಲಿಗೆ ಹೇಗೆ ಹೋಗುವುದು ಎಂದು ಮರುಪ್ರಶ್ನೆ ಕೇಳುತ್ತಾರೆ. ಬಸ್ ನ ಮಾರ್ಗವನ್ನೆಲ್ಲಾ ತಿಳಿಸಿದ ಅಣ್ಣಾವರು ರಾಯರ ದರ್ಶನ ಮಾಡಿ ಎಲ್ಲ ಒಳ್ಳೆಯಾದಗಲಿದೆ ಎಂದು ಉಭಯ ಕುಶಲೋಪರಿ ವಿಚಾರಿಸಿ ಕಳುಹಿಸುತ್ತಾರೆ.

ಹರಳುಕೋಟೆ ಜನಾರ್ದನ ಸ್ವಾಮಿಯ ಅರ್ಚಕರಾಗಿದ್ದ ಅನಂತಪ್ರಸಾದ್

ಅಣ್ಣಾವ್ರ ಕಟ್ಟಾ ಅಭಿಮಾನಿಯಾಗಿದ್ದ ಅನಂತಪ್ರಸಾದ್ ಕೆಲವು ದಿನಗಳ ಬಳಿಕ ರಾಯರ ದರ್ಶನ ಮಾಡಿ ಬರುತ್ತಾರೆ. ಇಲ್ಲಿಯವರೆಗೆ 40ಕ್ಕೂ ಹೆಚ್ಚು ಸಲ ಮಂತ್ರಾಲಯಕ್ಕೆ ಹೋಗಿರುವ ಇವರು ಯಾರಾದರೂ ಮಂತ್ರಾಲಯ ಹೋಗದಿರುವರಿದ್ದರೇ ಅವರನ್ನು ರಾಯರ ದರ್ಶನ ಮಾಡಿಸುವ ಕೆಲಸ ಮಾಡುತ್ತಿದ್ದಾರೆ. ಇದು ವರೆಗೆ 800 ಕ್ಕೂ ಹೆಚ್ಚು ಮಂದಿಗೆ ರಾಯರ ದರ್ಶನ ಮಾಡಿಸಿದ್ದಾರೆ.

ಅಣ್ಣಾವ್ರ ಜನ್ಮದಿನವಾದ ಇಂದು ಅನಂತಪ್ರಸಾದ್ ಮಾತನಾಡಿ, ಅವರು ಮಾಡದಿರದ ಪಾತ್ರವಿರಲಿಲ್ಲ. ಎಷ್ಟೋ ಬ್ರಾಹ್ಮಣ ಮಂದಿಗೆ ಶ್ಲೋಕಗಳು ಬರುವುದಿಲ್ಲ. ಅವರು ಸ್ಪಷ್ಟವಾಗಿ ಮಂತ್ರ ಹೇಳುತ್ತಿದ್ದರು. ರಾಜ್ ಕುಮಾರ್ ಅವರೊಬ್ಬರೇ ವಿಶ್ವಕ್ಕೆ ಕಲಾತಪಸ್ವಿ ಎಂದು ಪ್ರತಿಕ್ರಿಯಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.