ETV Bharat / state

ಅಂಜನಾದ್ರಿ ದೇಗುಲದ ಪ್ರಧಾನ ಅರ್ಚಕ, ಕೈ ನಾಯಕರ ಮೇಲೆ ಕ್ರಿಮಿನಲ್ ಮೊಕದ್ದಮೆಗೆ ಆಗ್ರಹ - Former MLA demands legal action against fake trust in the name of Anjanadri

ಅರ್ಚಕ ಮಹಾಂತ ವಿದ್ಯಾದಾಸ ಬಾಬಾ ಹಾಗೂ ಕಾಂಗ್ರೆಸ್ ಮುಖಂಡರಾದ ಬಸವರಾಜ ಸ್ವಾಮಿ ಮಳೇಮಠ ಮತ್ತು ರಾಜು ನಾಯಕ್ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಭಕ್ತರು ತಹಶೀಲ್ದಾರ್ ಕಚೇರಿಗೆ ಲಿಖಿತ ದೂರು ಸಲ್ಲಿಸಿದ್ದಾರೆ..

Anjanadri
ಅಂಜನಾದ್ರಿ ದೇಗುಲ
author img

By

Published : May 10, 2022, 1:11 PM IST

Updated : May 10, 2022, 2:03 PM IST

ಗಂಗಾವತಿ : ಅಂಜನಾದ್ರಿ ಬೆಟ್ಟದಲ್ಲಿ 'ವಿಶ್ವ ಸಂತ ಮೇಳ' ಆಯೋಜಿಸುವುದಾಗಿ ರಾಜ್ಯಾದ್ಯಾಂತ ದೇಣಿಗೆ ಸಂಗ್ರಹಿಸುತ್ತಿರುವ ಪ್ರಧಾನ ಅರ್ಚಕ ಮತ್ತು ಇಬ್ಬರು ಕಾಂಗ್ರೆಸ್ ಮುಖಂಡರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ಒತ್ತಾಯಿಸಿ ಭಕ್ತರು ದೂರು ಸಲ್ಲಿಸಿದ್ದಾರೆ.

ದೂರು ಪ್ರತಿ
ದೂರು ಪ್ರತಿ

ರಾಮಚಂದ್ರಪ್ಪ, ಚಂದ್ರು ಸೇರಿದಂತೆ ಒಟ್ಟು ಆರು ಜನ ಭಕ್ತರು, ಇಲ್ಲಿನ ತಹಶೀಲ್ದಾರ್ ಕಚೇರಿಯಲ್ಲಿ ಲಿಖಿತ ದೂರು ಸಲ್ಲಿಸಿದ್ದಾರೆ. ಅರ್ಚಕ ಮಹಾಂತ ವಿದ್ಯಾದಾಸ ಬಾಬಾ ಹಾಗೂ ಕಾಂಗ್ರೆಸ್ ಮುಖಂಡರಾದ ಬಸವರಾಜಸ್ವಾಮಿ ಮಳೇಮಠ ಮತ್ತು ರಾಜು ನಾಯಕ್ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಒತ್ತಾಯಿಸಿದ್ದಾರೆ.

Devotee urge for the criminal case against Congress leaders and Anjanadri temple priest
ಅರ್ಚಕ ಮಹಾಂತ ವಿದ್ಯಾದಾಸ ಬಾಬಾ ಹಾಗೂ ಕಾಂಗ್ರೆಸ್ ಮುಖಂಡರಾದ ಬಸವರಾಜ ಸ್ವಾಮಿ ಮಳೇಮಠ ಮತ್ತು ರಾಜು ನಾಯಕ್

ಮುಜುರಾಯಿ ಆಡಳಿತಕ್ಕೆ ಒಳಪಟ್ಟಿರುವ ಐತಿಹಾಸಿಕ ಅಂಜನಾದ್ರಿ ದೇವಸ್ಥಾನದ ಹೆಸರು ದುರುಪಯೋಗ ಮಾಡಿಕೊಂಡು, ಸಾಧು ಸಮ್ಮೇಳನ ಮಾಡುವುದಾಗಿ ರಾಜ್ಯದಾದ್ಯಂತ ದೇಣಿಗೆ ಸಂಗ್ರಹಕ್ಕೆ ಇವರು ಮುಂದಾಗಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಿ ಸ್ವಯಂ ಪ್ರೇರಿತ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಕಾನೂನು ಕ್ರಮಕ್ಕೆ ಮಾಜಿ ಶಾಸಕ ಆಗ್ರಹ : ತಾಲೂಕಿನ ಪ್ರಮುಖ ಧಾರ್ಮಿಕ ತಾಣ ಅಂಜನಾದ್ರಿ ದೇಗುಲದ ವ್ಯಾಪ್ತಿಯಲ್ಲಿ ನಕಲಿ ಟ್ರಸ್ಟ್​​​ಗಳ ಹಾವಳಿ ಅಧಿಕವಾಗಿದೆ. ಕಾನೂನು ಕ್ರಮಕ್ಕೆ ಮಾಜಿ ಶಾಸಕ ಹೆಚ್ ಆರ್ ಶ್ರೀನಾಥ್ ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.

Former MLA HR Srinath
ಮಾಜಿ ಶಾಸಕ ಹೆಚ್.ಆರ್ ಶ್ರೀನಾಥ್

ಈ ಬಗ್ಗೆ ಮಾತನಾಡಿದ ಅವರು, ಅಂಜನಾದ್ರಿ ದೇಗುಲ ದಿನದಿಂದ ದಿನಕ್ಕೆ ಖ್ಯಾತಿಯಾಗುತ್ತಿದೆ. ರಾಜ್ಯದ ನಾನಾ ಜಿಲ್ಲೆ ಮಾತ್ರವಲ್ಲದೇ, ದೇಶದ ನಾನಾ ರಾಜ್ಯಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬರುತ್ತಿದ್ದಾರೆ. ಮುಖ್ಯವಾಗಿ ಉತ್ತರ ಭಾರತದಿಂದ ಹೆಚ್ಚಿನ ಜನ ಬರುತ್ತಿದ್ದಾರೆ.

ಇಲ್ಲಿಗೆ ಆಗಮಿಸುತ್ತಿರುವ ಜನರಿಗೆ ಪೂಜೆ, ವಸತಿ, ಊಟ, ಅರ್ಚನೆ ನಾನಾ ನೆಪವೊಡ್ಡಿ ಹಣ ಕಸಿಯುತ್ತಿರುವ ಮತ್ತು ನಕಲಿ ಟ್ರಸ್ಟ್​​ಗಳ ಮೂಲಕ ದೇಣಿಗೆ ಸಂಗ್ರಹಿಸಿ ಸರ್ಕಾರಕ್ಕೆ ಮತ್ತು ಭಕ್ತರನ್ನು ವಂಚಿಸುತ್ತಿರುವ ಜಾಲ ವ್ಯವಸ್ಥಿತವಾಗಿ ನಡೆದಿದೆ.

ಕೂಡಲೇ ಜಿಲ್ಲಾಡಳಿತ ಈ ಬಗ್ಗೆ ಕಠಿಣ ಕ್ರಮಕೈಗೊಂಡು ನಕಲಿ ಟ್ರಸ್ಟ್​​ಗಳನ್ನು ನಿಯಂತ್ರಿಸಬೇಕು. ಇಲ್ಲವಾದಲ್ಲಿ ಇನ್ನಷ್ಟು ಟ್ರಸ್ಟ್​​ಗಳು ಹುಟ್ಟಿಕೊಂಡು ಭಕ್ತರಿಂದ ದೇಣಿಗೆ ಸಂಗ್ರಹಿಸಿ ದುರುಪಯೋಗ ಮಾಡಿಕೊಳ್ಳಲು ಸ್ವತಃ ಜಿಲ್ಲಾಡಳಿತ ಅವಕಾಶ ನೀಡಿದಂತಾಗುತ್ತದೆ ಎಂದು ಶ್ರೀನಾಥ್ ಹೇಳಿದ್ದಾರೆ.

ಇದನ್ನೂ ಓದಿ: 'ಅಂಜನಾದ್ರಿ ದೇಗುಲ ಪೂಜಾ ಸಮಯ ನಿಗದಿ ಮಾಡಲು ತಹಶೀಲ್ದಾರ್ ಯಾರು? '

Last Updated : May 10, 2022, 2:03 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.