ಗುಂಡ್ಲುಪೇಟೆ: ನೀಲಗಿರಿ ಜಿಲ್ಲೆಯ ಮುದುಮಲೈ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಎರಡು ಹುಲಿಗಳ ಕಳೇಬರ ಕೊಳೆತ ಸ್ಥಿತಿಯಲ್ಲಿ ಸೋಮವಾರ ಸಂಜೆ ಪತ್ತೆಯಾಗಿದೆ.
ಮಸಿನಗೂಡಿ ಅರಣ್ಯ ಭಾಗದ ಹೊಳೆಯ ಬಾಗದ ಅವರಳ್ಳ ಪ್ರದೇಶದಲ್ಲಿ ಹುಲಿಗಳ ಮೃತದೇಹ ಪತ್ತೆಯಾಗಿದೆ. ಬೀಟ್ ಗಾರ್ಡ್ಗಳು ನೋಡಿ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ಬಳಿಕ ಪ್ರಾಣಿ ವೈದ್ಯರು ಮರಣೋತ್ತರ ಪರೀಕ್ಷೆ ನಡೆಸಿ ಹುಲಿಯ ವಿವಿಧ ಅಂಗಾಂಗಗಳನ್ನು ಪರೀಕ್ಷೆ ಕಳುಹಿಸಿದ್ದಾರೆ. ಹುಲಿಯ ವಯಸ್ಸು ಮತ್ತು ಲಿಂಗ ಗುರುತಿಸಲು ಸಾದ್ಯವಾಗಿಲ್ಲ ಅಷ್ಟರ ಮಟ್ಟಿಗೆ ಹುಲಿಯ ದೇಹ ಕೊಳೆತಿದೆ. ಬಳಿಕ ಸಿಬ್ಬಂದಿ ಕೊಳೆತ ಹುಲಿಯ ದೇಹವನ್ನು ಸುಟ್ಟುಹಾಕಿದ್ದಾರೆ.