ETV Bharat / state

ಶವ ಸಂಸ್ಕಾರಕ್ಕೆ ನಾಲೆ ನೀರಲ್ಲೇ ಹೋಗಬೇಕು: ಸೇತುವೆ ನಿರ್ಮಾಣಕ್ಕೆ ಅಧಿಕಾರಿಗಳಿಂದ ವಿಳಂಬ - Kollegal bridge construction News

ಶವ ಸಂಸ್ಕಾರಕ್ಕೆ ನಾಲೆ ನೀರು ಹಾಯ್ದು ಹೋಗುವ ಪರಿಸ್ಥಿತಿ ಕಾಮಗಾರೆ ಗ್ರಾಮದ ಜನರಿಗೆ ಎದುರಾಗಿದೆ. 16 ಲಕ್ಷ ಅನುದಾನ ಬಿಡುಗಡೆಯಾಗಿ 3 ತಿಂಗಳ ಹಿಂದೆಯೇ ಟೆಂಡರ್ ಪ್ರಕ್ರಿಯೆ ಮುಗಿದಿದ್ದರೂ ದಲಿತರ ಸ್ಮಶಾನ ಸಂಪರ್ಕ ಸೇತುವೆ ಕಾಮಗಾರಿಗೆ ಚಾಲನೆ ದೊರೆತಿಲ್ಲ.

ಸೇತುವೆ ನಿರ್ಮಾಣಕ್ಕೆ ಹಣ ವಿದ್ದರೂ ಅಧಿಕಾರಿಗಳಿಂದ ವಿಳಂಬ

author img

By

Published : Aug 20, 2020, 1:13 PM IST

ಕೊಳ್ಳೇಗಾಲ: ತಾಲೂಕಿನ ಕಾಮಗಾರೆ ಗ್ರಾಮದಲ್ಲಿ ದಲಿತರ ಸ್ಮಶಾನಕ್ಕೆ ತೆರಳಲು ಕಬಿನಿ ನಾಲೆಯ ಮೇಲೆ ಅಡ್ಡಲಾಗಿ ಕಿರು ಸೇತುವೆ ನಿರ್ಮಿಸುವ ಕಾರ್ಯಕ್ಕೆ ಇಲಾಖೆಯಿಂದ 16 ಲಕ್ಷ ಅನುದಾನ ಬಿಡುಗಡೆಯಾಗಿದೆ. 3 ತಿಂಗಳ ಹಿಂದೆಯೇ ಟೆಂಡರ್ ಪ್ರಕ್ರಿಯೆ ಮುಗಿದಿದ್ದು, ಕಾಮಗಾರಿ ಪ್ರಾರಂಭವಾಗಿಲ್ಲವೆಂದು ತಾಪಂ ಸದಸ್ಯ ರಾಜು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸೇತುವೆ ನಿರ್ಮಾಣಕ್ಕೆ ಹಣವಿದ್ದರೂ ಅಧಿಕಾರಿಗಳಿಂದ ವಿಳಂಬ

ತಾಪಂ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ರಾಜು, ಕಾಮಗೆರೆ ಗ್ರಾಮದ ದಲಿತ ಸಮುದಾಯದ ಜನಗಿರುವ ಕಷ್ಟ ಹೇಳತೀರದ್ದು. ಗ್ರಾಮದ ಪುನ್​ಕಟ್ಟೆ ಬಳಿ ದಲಿತ ಜನಾಂಗದ ಸ್ಮಶಾನವಿದ್ದು, ಇದರ ಅಡ್ಡಲಾಗಿ ಕಬಿನಿ ನಾಲೆ ಹಾದು ಹೋಗಿದೆ. ಸ್ಮಶಾನಕ್ಕೆ ಸಮರ್ಪಕ ದಾರಿ ಇಲ್ಲ. ನಾಲೆಗೆ ಕಿರು ಸೇತುವೆ ನಿರ್ಮಿಸಿ ಸ್ಮಶಾನ ಸಂಪರ್ಕ ಕಲ್ಪಿಸಲು ಸರ್ಕಾರದಿಂದ 16 ಲಕ್ಷ ಹಣ ಬಿಡುಗಡೆಯಾದರೂ ಕಾಮಗಾರಿಯಲ್ಲಿ ವಿಳಂಬ ನೀತಿಯನ್ನು ಟೆಂಡರ್​ದಾರರು ಮತ್ತು ಕಬಿನಿ ಜಲಾನಯನ ಅಧಿಕಾರಿಗಳು ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿದರು.

ಕಾಮಗಾರಿ ದಾಖಲೆಗಳನ್ನು ವೀಕ್ಷಸಿದ ತಾಪಂ ಅಧ್ಯಕ್ಷ ಸುರೇಶ್, ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಈ ಬಗ್ಗೆ ಪ್ರತಿಕ್ರಿಯಿಸಿದ ಕಬಿನಿ ಎಇ ನಟೇಶ್, ಗುತ್ತಿಗೆದಾರ ಪ್ರಭು ತನ್ನ ತಾಯಿಗೆ ಹುಷಾರ್ ಇಲ್ಲ ಎಂದು ಹೇಳಿ ಇನ್ನೂ ಕೆಲಸ ಆರಂಭಿಸಿಲ್ಲ. ಈ ಕೂಡಲೇ ಗುತ್ತಿಗೆದಾರನಿಗೆ ಕೊನೆಯ ನೋಟಿಸ್ ನೀಡಿ ಕಾಮಗಾರಿ ಪ್ರಾರಂಭ ಮಾಡಿಸಲಾಗುವುದು ಎಂದು ಭರವಸೆ ನೀಡಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.