ETV Bharat / state

ಗಾಂಜಾ ಇದೆಯೆಂದು ಮನೆ ತಲಾಶ್: ಜಿಂಕೆ ಮಾಂಸ, ಬಂದೂಕು, ಜಿಂಕೆ ಉಗುರುಗಳು ಪತ್ತೆ

ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಅಣ್ಣೂರುಕೇರಿ ಗ್ರಾಮದ ಶಿವನಾಗಶೆಟ್ಟಿ ಎಂಬುವವರ ಮನೆ ಮೇಲೆ ಅರಣ್ಯ ಇಲಾಖೆ ಅಧಿಕಾರಿಗಳು ದಾಳಿ ಮಾಡಿ, 6 ಗಾಂಜಾ ಗಿಡ ಜೊತೆಗೆ 05 ಕೆಜಿಯಷ್ಟು ಜಿಂಕೆ ಮಾಂಸ ವಶಕ್ಕೆ ಪಡೆದಿದ್ದಾರೆ.

ಜಿಂಕೆ ಮಾಂಸ, ಬಂದೂಕು, ಉಗುರುಗಳು ಪತ್ತೆ
ಜಿಂಕೆ ಮಾಂಸ, ಬಂದೂಕು, ಉಗುರುಗಳು ಪತ್ತೆ
author img

By

Published : Dec 16, 2022, 8:55 PM IST

ಚಾಮರಾಜನಗರ: ಗಾಂಜಾ ಸಂಗ್ರಹದ ಖಚಿತ ಮಾಹಿತಿ ಮೇರೆಗೆ ಸೆನ್ ಹಾಗೂ ಬಂಡೀಪುರ ಅರಣ್ಯ ಇಲಾಖೆ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿದ ವೇಳೆ ಮಾಂಸ, ಪ್ರಾಣಿ ಉಗುರುಗಳು ಪತ್ತೆಯಾಗಿರುವ ಘಟನೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಅಣ್ಣೂರುಕೇರಿ ಗ್ರಾಮದಲ್ಲಿ ನಡೆದಿದೆ.

ಶಿವನಾಗಶೆಟ್ಟಿ (34) ಬಂಧಿತ ಆರೋಪಿ‌. ಈತನ ಮನೆಯಲ್ಲಿ ಗಾಂಜಾ ಇದೆ ಎಂಬ ಶಂಕೆ ಮೇಲೆ ದಾಳಿ ಮಾಡಲಾಗಿತ್ತು. ಆದ್ರೆ 6 ಗಾಂಜಾ ಗಿಡದ ಜೊತೆಗೆ 05 ಕೆಜಿಯಷ್ಟು ಜಿಂಕೆ ಮಾಂಸ ಕೂಡ ಪತ್ತೆಯಾಗಿದೆ.

ಬೇಟೆಗಾಗಿ ಬಳಸಿದ್ದ ನಾಡ ಬಂದೂಕು, ಕರಡಿಯ ಉಗುರುಗಳು, ಕಾಡುಬೆಕ್ಕಿನ ಉಗುರುಗಳು, ಸಿಡಿಮದ್ದು ಕೂಡ ಪತ್ತೆಯಾಗಿದೆ.‌ ಘಟನೆ ಸಂಬಂಧ ಇಬ್ಬರು ಪರಾರಿಯಾಗಿದ್ದು, ಶಿವನಾಗನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಓದಿ: ನಾಗರಹೊಳೆ ಅರಣ್ಯದಲ್ಲಿ ಕಾಡುಕೋಣ ಬೇಟೆ: ಇಬ್ಬರ ಬಂಧನ, ಏಳು ಜನ ಪರಾರಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.