ETV Bharat / state

ಪಾತಾಳಕ್ಕೆ ಟೊಮೇಟೊ ಬೆಲೆ: ಮಾರುಕಟ್ಟೆಗಳಲ್ಲಿ ಮಣ್ಣು, ದನಗಳ ಪಾಲಾಗುತ್ತಿದೆ ಬೆಳೆ - Tomato prices fall

ಕಳೆದ 2 ತಿಂಗಳ ಹಿಂದೆ ಪ್ರತಿ ಕೆಜಿ 90 ರೂ. ಇದ್ದ ಟೊಮೇಟೊ ಬೆಲೆ ಇದೀಗ 3 ರೂ ಇಳಿದಿದ್ದು, ಟೊಮೇಟೊ ಬೆಳೆದ ರೈತರು ಕಂಗಾಲಾಗಿದ್ದಾರೆ.

decrease-in-the-prices-of-tomato-in-chamarajanagar
ಪಾತಾಳಕ್ಕೆ ಟೊಮೆಟೊ ಬೆಲೆ: ಮಾರುಕಟ್ಟೆಗಳಲ್ಲಿ ಮಣ್ಣು, ದನಗಳ ಪಾಲಾಗುತ್ತಿದೆ ಬೆಳೆ!!
author img

By

Published : Jul 28, 2022, 10:08 PM IST

ಚಾಮರಾಜನಗರ : ಗಗನಕ್ಕೇರಿದ್ದ ಟೊಮೇಟೊ ಬೆಲೆ ಇದೀಗ ಪಾತಾಳಕ್ಕೆ ಕುಸಿದಿದ್ದು, ಸಾಗಾಟ ವೆಚ್ಚವೂ ದೊರೆಯದ ಪರಿಸ್ಥಿತಿಯಲ್ಲಿ ರೈತರು ಕಂಗಾಲಾಗಿದ್ದಾರೆ. ಕೇರಳ ಮತ್ತು ತಮಿಳುನಾಡು ಗಡಿ ಹಂಚಿಕೊಂಡಿರುವ ಗುಂಡ್ಲುಪೇಟೆಯ ಎಪಿಎಂಸಿಯಲ್ಲಿ ಟೊಮೇಟೊ ಬೆಲೆ ಪ್ರತಿ ಕೆಜಿಗೆ 3 ರೂಗೆ ಕುಸಿದಿರುವ ಹಿನ್ನೆಲೆ ಟೊಮೇಟೊ ಬೆಳೆದ ರೈತರು ಮಾರುಕಟ್ಟೆ ಪ್ರಾಂಗಣದಲ್ಲೆ ಸುರಿದು ಹೋಗುತ್ತಿದ್ದಾರೆ.

ಕಳೆದ ಕೆಲವು ದಿನದಿಂದಲೂ ಗುಂಡ್ಲುಪೇಟೆ ತಾಲೂಕಿನಲ್ಲಿ ನಿರಂತರವಾಗಿ ಮಳೆಯಾಗುತ್ತಿರುವ ಕಾರಣ ಹಾಗೂ ಅಧಿಕ ಮಂದಿ ರೈತರು ಒಟ್ಟಿಗೆ ಮಾರುಕಟ್ಟೆಗೆ ಟೊಮೇಟೊ ತಂದ ಹಿನ್ನೆಲೆ, ಕಳೆದ ಎರಡು ದಿನದಿಂದ ಟೊಮೇಟೊ ಬೆಲೆ 3 ರೂ.ಗೆ ಕುಸಿದಿದೆ. ಇದರಿಂದ ರೈತರು ಬೆಳೆಗೆ ಹಾಕಿದ ಬಂಡವಾಳ ಸಿಗದಂತಾಗಿದ್ದು, ಕಷ್ಟಪಟ್ಟು ಟೊಮೇಟೊ ಬೆಳೆದ ರೈತ ಸಾಲದ ಸುಳಿಗೆ ಸಿಲುಕುತ್ತಿದ್ದಾನೆ.

ಪಾತಾಳಕ್ಕೆ ಟೊಮೆಟೊ ಬೆಲೆ: ಮಾರುಕಟ್ಟೆಗಳಲ್ಲಿ ಮಣ್ಣು, ದನಗಳ ಪಾಲಾಗುತ್ತಿದೆ ಬೆಳೆ!!

ಟೊಮೇಟೊ ದರ 3 ರೂ.ಗೆ ಬೆಲೆ ಕುಸಿದ ಹಿನ್ನೆಲೆ ರೈತರು ಟೊಮೇಟೊವನ್ನು ಅಲ್ಲೇ ಸುರಿದು ಹೋಗುತ್ತಿದ್ದಾರೆ. ಇದರಿಂದ ಮಾರುಕಟ್ಟೆ ಪ್ರಾಂಗಣದಲ್ಲಿ ಟನ್‍ಗಟ್ಟಲೆ ಟೊಮೇಟೊ ರಾಶಿ ಬಿದ್ದಿದ್ದು ಬಿಡಾಡಿ ದಿನಗಳು ಟೊಮೇಟೊ ತಿನ್ನುವ ದೃಶ್ಯ ಸಾಮಾನ್ಯವಾಗಿದೆ.‌

ಆಟೋ ಬಾಡಿಗೆಗೂ ದೊರಕದ ಹಣ: ಮಾರುಕಟ್ಟೆಗೆ ದೂರದ ಊರುಗಳಿಂದ ಬರವ ರೈತರು ಆಟೋದಲ್ಲಿ ತಮ್ಮ ಟೊಮೇಟೊವನ್ನು ತಂದರೇ, ಇಲ್ಲಿ ಟೊಮೇಟೊಗೆ ಸಿಗುತ್ತಿರುವ ಬೆಲೆ ಆಟೋ ಬಾಡಿಗೆಗೂ ದಕ್ಕುತ್ತಿಲ್ಲ. ಅನೇಕ ಮಂದಿ ತಮ್ಮ‌ ಜೇಬಿನಿಂದಲೇ ಆಟೋಗೆ ಬಾಡಿಗೆ ತೆತ್ತು ಟೊಮೇಟೊ ಮಾರದೇ ಸುರಿದು ಪೆಚ್ಚುಮೋರೆ ಹಾಕಿಕೊಂಡು ಹೋಗುತ್ತಿದ್ದಾರೆ.‌

ಎರಡು ತಿಂಗಳ ಹಿಂದೆ ಕೆ.ಜಿಗೆ 90 ರೂ ಇದ್ದ ಟೊಮೇಟೊ : ಕಳೆದ ಎರಡು ತಿಂಗಳ ಹಿಂದೆ ಕೆ.ಜಿ ಟೊಮೇಟೊ 90 ರೂ.ಗೆ ಏರಿಕೆ ಕಂಡಿತ್ತು. ಆ ವೇಳೆ ಬೆಳೆ ಬೆಳೆದ ರೈತರು ಅಧಿಕವಾಗಿ ಲಾಭ ಮಾಡಿಕೊಂಡರು. ಇದನ್ನು ಮನಗಂಡು ರೈತರು ನಂತರ ಟೊಮೇಟೊ ಬೆಳೆ ಬೆಳೆದರು. ಈ ಕಾರಣದಿಂದ ಇದೀಗ ಬೆಲೆ ಕುಸಿತಗೊಂಡು ನಷ್ಟ ಅನುಭವಿಸುವಂತಾಗಿದೆ.

ಅಧಿಕ ಮಂದಿ ರೈತರು ಬೆಲೆ ಏರಿಕೆ ಮನದಲ್ಲಿಟ್ಟುಕೊಂಡು ಒಮ್ಮೆಲೆ ಹಲವು ಎಕರೆಗೆ ಟೊಮೇಟೊ ಹಾಕಿದ್ದರು.ಇದರಿಂದ ಮಾರಕಟ್ಟೆಗೆ ನಿಗದಿತ ಪ್ರಮಾಣಕ್ಕಿಂತ ಅಧಿಕವಾಗಿ ಟೊಮೇಟೊ ಬರಲಾಂಭಿಸಿತು. ಜೊತೆಗೆ ಕಳೆದ 20 ದಿನದಿಂದ ನಿರಂತರವಾಗಿ ಮಳೆಯಾದ ಕಾರಣ ಇದೀಗ ಬೆಲೆ ದಿಢೀರ್ ಕುಸಿತ ಕಂಡಿರುವುದಾಗಿ ಎಪಿಎಂಸಿ ಅಧಿಕಾರಿಗಳು ಹೇಳಿದ್ದಾರೆ.

ಓದಿ : ರಂಗ ಕಲಾವಿದರಾಗಲಿರುವ ಕೈದಿಗಳು: ಮನ ಪರಿವರ್ತನೆಗಾಗಿ ಜೈಲಾಧಿಕಾರಿಗಳ ಹೊಸ ಪ್ರಯತ್ನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.