ಚಾಮರಾಜನಗರ: ದೇಶದ್ರೋಹಿ ಘೋಷಣೆ ಕೂಗಿದ ಕಾಶ್ಮೀರಿ ವಿದ್ಯಾರ್ಥಿಗಳು, ಅಮೂಲ್ಯ ಹಾಗೂ ಆದ್ರಾಳ ವಿರುದ್ಧ ನಗರದಲ್ಲಿ ಕನ್ನಡಪರ ಸಂಘಟನೆ ಕಾರ್ಯಕರ್ತರು ಪ್ರತಿಭಟಿಸಿ ಆಕ್ರೋಶ ಹೊರಹಾಕಿದರು.
ಭುವನೇಶ್ವರಿ ವೃತ್ತದಲ್ಲಿ ಜಮಾಯಿಸಿದ ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ಹೆದ್ದಾರಿ ತಡೆ ನಡೆಸಿದರು. ಅಲ್ಲದೇ ಮೂರು ಮಡಿಕೆಗಳಿಗೆ ಅಮೂಲ್ಯ ಲಿಯೋನ್, ಆರ್ದಾ ಮತ್ತು ಕಾಶ್ಮೀರಿ ವಿದ್ಯಾರ್ಥಿಗಳ ಭಾವ ಚಿತ್ರವನ್ನ ಅಂಟಿಸಿ, ಕುಂಕುಮ ಅರಿಶಿನ, ಪುರಿ ಚೆಲ್ಲಿ ಹೆದ್ದಾರಿಯಲ್ಲೇ ಚಿತಾಭಸ್ಮ ವಿಸರ್ಜನೆಯ ಅಣಕು ಪ್ರದರ್ಶನ ಮಾಡಿ ವಿನೂತನವಾಗಿ ಪ್ರತಿಭಟಿಸಿದರು.
ಶತ್ರು ದೇಶದ ಪರ ಘೋಷಣೆ ಕೂಗಿ ದೇಶ ವಿರೋಧಿ ನಿಲುವು ಪ್ರದರ್ಶನ ಮಾಡಿದವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕು ಹಾಗೂ ಅವರನ್ನು ದೇಶದಿಂದ ಗಡಿಪಾರು ಮಾಡಬೇಕೆಂದು ಒತ್ತಾಯಿಸಿದರು.