ಚಾಮರಾಜನಗರ: ಪ್ರೀತಿ ಪ್ರೇಮ ಎಂದು ಮಗಳು ಯುವಕನೊಟ್ಟಿಗೆ ಓಡಿ ಹೋಗಿದ್ದರಿಂದ ಮನನೊಂದ ಯುವತಿಯ ತಂದೆ-ತಾಯಿ, ಮನೆಬಿಟ್ಟು ನಾಪತ್ತೆಯಾಗಿರುವ ಪ್ರಕರಣ ಯಳಂದೂರು ತಾಲೂಕಿನಲ್ಲಿ ಬೆಳಕಿಗೆ ಬಂದಿದೆ. ಕಳೆದ 5 ದಿನಗಳ ಹಿಂದೆ ಕಾಲೇಜಿಗೆ ತೆರಳಿದ್ದ ಮಗಳು ಯುವಕನೊಟ್ಟಿಗೆ ಪರಾರಿಯಾದ ಬಳಿಕ ಈ ಘಟನೆ ನಡೆದಿದೆ.
ಇದರಿಂದ ಆಘಾತಕ್ಕೊಳಗಾಗಿದ್ದ ದಂಪತಿ ಮನೆ ಬಿಟ್ಟು ಕಾಣೆಯಾಗಿದ್ದಾರೆ ಎಂದು ತಿಳಿದುಬಂದಿದೆ. ದಂಪತಿ ಮತ್ತು ಅವರ ಮಗಳು ಕಾಣೆಯಾದ ಬಗ್ಗೆ ಸಂಬಂಧಿಕರೊಬ್ಬರು ಕೊಳ್ಳೇಗಾಲ ಗ್ರಾಮಾಂತರ ಠಾಣೆಗೆ ದೂರು ಕೊಟ್ಟಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಇದನ್ನೂ ಓದಿ: ಕೊಲೆ ಯತ್ನ: ಪತಿ ವಿರುದ್ಧ ದೂರು ನೀಡಿದ ಮಹಾನಗರ ಪಾಲಿಕೆ ಸದಸ್ಯೆ!