ETV Bharat / state

ಕೋವಿಡ್ ಭೀತಿ: ಕೊಂಗಳ್ಳಿ ಬೆಟ್ಟಕ್ಕೆ 2 ತಿಂಗಳು, ಮಾದಪ್ಪನ ಬೆಟ್ಟಕ್ಕೆ 3 ದಿನ ನಿರ್ಬಂಧ - Restriction of pilgrims in kongalli hill

ತಮಿಳುನಾಡಿನ ತಾಳವಾಡಿ ತಾಲೂಕಿನ ಕೊಂಗಳ್ಳಿ ಬೆಟ್ಟಕ್ಕೆ ನ. 15 ರಿಂದ 2021ರ ಜ.12ರವರೆಗೆ ಭಕ್ತರ ಪ್ರವೇಶವನ್ನು ಸಂಪೂರ್ಣ ನಿರ್ಬಂಧಿಸಲಾಗಿದೆ. ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ತಮಿಳುನಾಡಿನ ಜಿಲ್ಲಾಡಳಿತ ಈ ಕ್ರಮ ಕೈಗೊಂಡಿದೆ. ಇತ್ತ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ನಡೆಯುವ ದೀಪಾವಳಿ ರಥೋತ್ಸವವನ್ನು ಸಹ ರದ್ದುಗೊಳಿಸಲಾಗಿದೆ.

Chamarajnagar
ಕೋವಿಡ್ ಭೀತಿ: ಕೊಂಗಳ್ಳಿ ಬೆಟ್ಟಕ್ಕೆ 2 ತಿಂಗಳು, ಮಾದಪ್ಪನ ಬೆಟ್ಟಕ್ಕೆ 3 ದಿನ ನಿರ್ಬಂಧ
author img

By

Published : Nov 11, 2020, 10:54 AM IST

ಚಾಮರಾಜನಗರ: ದೀಪಾವಳಿ ವಿಶೇಷ ಪೂಜೆಯಲ್ಲಿ ಜನದಟ್ಟಣೆಯಾಗಿ ಸಾಂಕ್ರಾಮಿಕ ರೋಗ ಕೊರೊನಾ ಹರಡುವ ಭೀತಿ ಹಿನ್ನೆಲೆಯಲ್ಲಿ ಕರ್ನಾಟಕದ ಗಡಿಯಲ್ಲಿರುವ ಕೊಂಗಳ್ಳಿ ಬೆಟ್ಟಕ್ಕೆ ಬರೋಬ್ಬರಿ 2 ತಿಂಗಳು ಹಾಗೂ ಹನೂರು ತಾಲೂಕಿನ‌ ಮಲೆಮಹದೇಶ್ವರ ಬೆಟ್ಟಕ್ಕೆ 3 ದಿನ ಭಕ್ತರ ಪ್ರವೇಶಕ್ಕೆ ನಿರ್ಬಂಧಿಸಲಾಗಿದೆ.‌

ತಮಿಳುನಾಡಿನ ತಾಳವಾಡಿ ತಾಲೂಕಿನ ಕೊಂಗಳ್ಳಿ ಬೆಟ್ಟಕ್ಕೆ ನ.15 ರಿಂದ 2021ರ ಜ.12ರವರೆಗೆ ಭಕ್ತರ ಪ್ರವೇಶವನ್ನು ಸಂಪೂರ್ಣ ನಿರ್ಬಂಧಿಸಲಾಗಿದೆ. ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ತಮಿಳುನಾಡಿನ ಜಿಲ್ಲಾಡಳಿತ ಈ ಕ್ರಮ ಕೈಗೊಂಡಿದೆ ಎಂದು ದೇವಾಸ್ಥಾನದ ಅರ್ಚಕ ಮಲ್ಲಿಕಾರ್ಜುನ 'ಈಟಿವಿ ಭಾರತ'ಕ್ಕೆ ತಿಳಿಸಿದ್ದಾರೆ.

ರಥೋತ್ಸವ ರದ್ದು: ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ನಡೆಯುವ ದೀಪಾವಳಿ ರಥೋತ್ಸವವನ್ನು ರದ್ದುಗೊಳಿಸಲಾಗಿದೆ. ದೀಪಾವಳಿ ವೇಳೆ ಬೆಟ್ಟಕ್ಕೆ 2.5 ರಿಂದ 3 ಲಕ್ಷ ಭಕ್ತಾದಿಗಳು ಹರಿದು ಬರುವುದರಿಂದ ಕೊರೊನಾ ಮುಂಜಾಗ್ರತಾ ಕ್ರಮವಾಗಿ ನ.13ರ ಸಂಜೆ 7 ರಿಂದ 16ರ ಬೆಳಗ್ಗೆ 7ರವರೆಗೆ ಭಕ್ತರಿಗೆ ಪ್ರವೇಶ ನಿರ್ಬಂಧಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ. ಆದರೆ, ಸಾಂಪ್ರದಾಯಿಕವಾಗಿ ಹಾಲರವೆ ಉತ್ಸವ ಮತ್ತು ತೆಪ್ಪೋತ್ಸವವನ್ನು ಧಾರ್ಮಿಕ ವಿಧಿವಿಧಾನಗಳೊಂದಿಗೆ ಆಚರಿಸಲಾಗುತ್ತದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.