ಕೊಳ್ಳೆಗಾಲ: ಕೊರೊನಾ ವೈರಸ್ ಹಾಗೂ ಮೈಸೂರು ಭಾಗದಲ್ಲಿ ಕಾಣಿಸಿಕೊಂಡಿರುವ ಹಕ್ಕಿ ಜ್ವರದ ಕಾರಣ ಸತ್ತೇಗಾಲ ಗ್ರಾಮದ ಹೂ ಹೊಂಬಾಳೆ ಹಬ್ಬ ಮಾಡದಂತೆ ಸೂಚನೆ ನೀಡಲಾಗಿದೆ.
ಪಟ್ಟಣದ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವೃತ್ತ ನಿರೀಕ್ಷಕ ಶ್ರೀಕಾಂತ್ ಶುಕ್ರವಾರ ಸತ್ತೇಗಾಲ ಗ್ರಾಮದ ಯಜಮಾನರುಗಳ ಸಭೆ ಕರೆದಿದ್ದರು. ಈ ವೇಳೆ, ಗ್ರಾಮದಲ್ಲಿ ನಡೆಯಲಿರುವ ಹೂ-ಹೊಂಬಾಳೆ ಹಬ್ಬವನ್ನು ಮುಂದೂಡುವಂತೆ ಖಡಕ್ ಸೂಚನೆ ನೀಡಿದರು.