ETV Bharat / state

ಚಾಮರಾಜನಗರ; 70 ಮಂದಿಗೆ ಸೋಂಕು.. 38 ಜನ ಡಿಸ್ಚಾರ್ಜ್​

author img

By

Published : Aug 10, 2020, 10:44 PM IST

Updated : Aug 10, 2020, 10:50 PM IST

ಚಾಮರಾಜನಗರ ಜಿಲ್ಲೆಯಲ್ಲಿಂದು 70 ಮಂದಿಗೆ ಕೊರೊನಾ ದೃಢಪಟ್ಟಿದ್ದು, 38 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

Corona Positive to 70 in Chamarajanagar District
ಚಾಮರಾಜನಗರದಲ್ಲಿಂದು 70 ಮಂದಿಗೆ ಸೋಂಕು..38 ಜನರು ಡಿಶ್ಚಾರ್ಜ್

ಚಾಮರಾಜನಗರ: ಜಿಲ್ಲೆಯಲ್ಲಿಂದು 70 ಮಂದಿಗೆ ಕೊರೊನಾ ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 1,221ಕ್ಕೆ ಏರಿಕೆಯಾಗಿದೆ.

ಇಂದು ನಾಲ್ಕು ಮಕ್ಕಳು, 82 ವರ್ಷದ ಓರ್ವ ವೃದ್ಧ ಸೇರಿ 38 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದು, 388 ಸಕ್ರಿಯ ಪ್ರಕರಣಗಳಿವೆ. ಇದರಲ್ಲಿ 13 ಮಂದಿ ಐಸಿಯುಗೆ ದಾಖಲಾಗಿದ್ದಾರೆ. 356 ಮಂದಿ ಪ್ರಾಥಮಿಕ, ದ್ವಿತೀಯ ಸಂಪರ್ಕಿತರ ಮೇಲೆ ಆರೋಗ್ಯ ಇಲಾಖೆ ನಿಗಾ ಇಟ್ಟಿದೆ‌. ಕಳೆದ 29ರಂದು ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದ ಚಾಮರಾಜನಗರದ 68 ವರ್ಷದ ವ್ಯಕ್ತಿಯೋರ್ವ ಮೂತ್ರಪಿಂಡ ವೈಫಲ್ಯದಿಂದ ಭಾನುವಾರ ರಾತ್ರಿ ಮೃತಪಟ್ಟಿದ್ದು, ಮೃತರ ಸಂಖ್ಯೆ 24ಕ್ಕೆ ಏರಿಕೆಯಾಗಿದೆ.

ಜಿಲ್ಲಾವಾರು ವರದಿ: ಚಾಮರಾಜನಗರ ತಾಲೂಕಿನಲ್ಲಿ 25, ಕೊಳ್ಳೇಗಾಲ 28, ಗುಂಡ್ಲುಪೇಟೆ 06, ಯಳಂದೂರು 10 ಹಾಗೂ ಹನೂರು ತಾಲೂಕಿನಲ್ಲಿ ಓರ್ವ ಸೋಂಕಿತ ಪತ್ತೆಯಾಗಿದ್ದಾರೆ‌.

Last Updated : Aug 10, 2020, 10:50 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.