ಚಾಮರಾಜನಗರ: ಮಲೆಮಹದೇಶ್ವರ ಬೆಟ್ಟ ಪೊಲೀಸ್ ಇನ್ಸ್ ಪೆಕ್ಟರ್ ಹಾಗೂ ಅವರ ಚಾಲಕನಿಗೆ ಇಂದು ಕೋವಿಡ್ ತಗುಲಿರುವುದು ದೃಢಪಟ್ಟಿದೆ. ಜೊತೆಗೆ, ಚಾಮರಾಜನಗರ ನಗರಸಭೆಯ ಪರಿಸರ ಎಂಜಿನಿಯರ್ಗೆ ಸಹ ಸೋಂಕು ತಗುಲಿದೆ.
ಕೆಲದಿನಗಳ ಹಿಂದೆಯಷ್ಟೇ ಮಲೆ ಮಹದೇಶ್ವರ ಬೆಟ್ಟ ಠಾಣೆಯ ಓರ್ವ ಕಾನ್ಸ್ಟೇಬಲ್ ಗೆ ಸೋಂಕು ತಗುಲಿ 2 ದಿನ ಠಾಣೆಯನ್ನು ಸೀಲ್ ಡೌನ್ ಮಾಡಲಾಗಿತ್ತು. ಆತನ ಸಂಪರ್ಕದಿಂದ ಪೊಲೀಸ್ ಇನ್ಸ್ ಪೆಕ್ಟರ್ ಗೆ ಸೋಂಕು ತಗುಲಿದೆ ಎನ್ನಲಾಗಿದೆ. ಇನ್ನೂ, ಪರಿಸರ ಎಂಜಿನಿಯರ್ರವರ ಕುಟುಂಬಸ್ಥರೊಬ್ಬರಿಗೆ ಕೊರೊನಾ ಪಾಸಿಟಿವ್ ಬಂದಿದ್ದು, ಕಳೆದ ಒಂದು ವಾರದಿಂದ ಕಂಟೈನ್ಮೆಂಟ್ ವಲಯದಲ್ಲಿದ್ದರು. ಇಂದು ಅವರಿಗೂ ಸಹ ಸೋಂಕು ತಗುಲಿರುವುದು ದೃಢಪಟ್ಟಿದೆ.
ಜಿಲ್ಲಾಡಳಿತ ಈಗಾಗಲೇ ಕೊರೊನಾ ವಾರಿಯರ್ಸ್ಗಳು ಸೋಂಕಿತರಾದರೆ ಪ್ರತ್ಯೇಕ ಹಾಗೂ ವಿಶೇಷ ಆರೈಕೆ ಮಾಡಲು ಮುಂದಾಗಿದೆ. ಇದಕ್ಕಾಗಿ 50 ಹಾಸಿಗೆಗಳನ್ನು ಮೀಸಲಿರಿಸಿದೆ.