ETV Bharat / state

ಕೋವಿಡ್​ ಸೋಂಕಿತ ಮಹಿಳೆ ಸಾವು: ಗುಂಡ್ಲುಪೇಟೆಯಲ್ಲಿ ಸಂಬಂಧಿಕರ ದಾಂಧಲೆ - ಕೋವಿಡ್ ಕೇರ್ ಸೆಂಟರ್​​

ಗುಂಡ್ಲುಪೇಟೆಯ 52 ವರ್ಷದ ಮಹಿಳೆಯೊಬ್ಬರು ಕೊರೊನಾದಿಂದ ಬುಧವಾರ ತಡ ರಾತ್ರಿ ಮೃತರಾದರು. ಈ ಹಿನ್ನೆಲೆ ಸಂಬಂಧಿಕರು ಸರಿಯಾದ ಚಿಕಿತ್ಸೆ ನೀಡಿಲ್ಲ, ಆಕ್ಸಿಜನ್ ವ್ಯವಸ್ಥೆ ಮಾಡಿಲ್ಲ ಎಂದು ಆಸ್ಪತ್ರೆ ಸಿಬ್ಬಂದಿ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ.

corona-infected-protest-in-chamarajanagar-news
ಸೋಂಕಿತರ ಪ್ರತಿಭಟನೆ
author img

By

Published : May 13, 2021, 10:43 PM IST

ಚಾಮರಾಜನಗರ: ಕೋವಿಡ್ ಸೋಂಕಿತ ಮಹಿಳೆಯೋರ್ವಳು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಹಿನ್ನೆಲೆ, ಆಕೆಯ ಸಂಬಂಧಿಕರು ಆಸ್ಪತ್ರೆಗೆ ಆಗಮಿಸಿ ದಾಂಧಲೆ ನಡೆಸಿರುವ ಘಟನೆ ಗುಂಡ್ಲುಪೇಟೆ ಸಾರ್ವಜನಿಕ ಆಸ್ಪತ್ರೆಯಲ್ಲಿ ನಡೆದಿದೆ.‌

ಸೋಂಕಿತರ ಪ್ರತಿಭಟನೆ

ಓದಿ: ಕೋವಿಡ್ ಪರಿಹಾರ ನಿಧಿಗೆ ಸಚಿವರ ಒಂದು ವರ್ಷದ ವೇತನ: ಆದೇಶ ಹೊರಡಿಸಿದ ಸರ್ಕಾರ

ಗುಂಡ್ಲುಪೇಟೆಯ 52 ವರ್ಷದ ಮಹಿಳೆಯೊಬ್ಬರು ಕೊರೊನಾದಿಂದ ಬುಧವಾರ ತಡರಾತ್ರಿ ಮೃತರಾದರು. ಈ ಹಿನ್ನೆಲೆ ಸರಿಯಾದ ಚಿಕಿತ್ಸೆ ನೀಡಿಲ್ಲ, ಆಕ್ಸಿಜನ್ ವ್ಯವಸ್ಥೆ ಮಾಡಿಲ್ಲ ಎಂದು ಸಂಬಂಧಿಕರು ಆಸ್ಪತ್ರೆ ಸಿಬ್ಬಂದಿ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ. ಈ ವೇಳೆ ಗಿರೀಶ್ ಎಂಬಾತ ಆಕ್ಸಿಜನ್ ಸಿಲಿಂಡರ್​​ನಿಂದ ಹಲ್ಲೆಗೆ ಯತ್ನಿಸಿ ಆಸ್ಪತ್ರೆಯ ಕಿಟಕಿಯ ಗಾಜನ್ನು ಒಡೆದು ಗಲಾಟೆ ಮಾಡಿದ್ದಾನೆ. ಕಿಟಕಿಗೆ ಹೊಡೆದ ರಭಸಕ್ಕೆ ಗಿರೀಶ್‍ ಕೈಗೆ ಗಾಜು ಚುಚ್ಚಿ ತೀವ್ರ ರಕ್ತಸ್ರಾವವಾಗಿದ್ದು, ಅವರನ್ನು ಹೆಚ್ಚಿನ ಚಿಕಿತ್ಸೆಗೆ ಚಾಮರಾಜನಗರಕ್ಕೆ ಕರೆತರಲಾಗಿದೆ.

ಘಟನೆಯಿಂದ ವೈದ್ಯರು, ಆಸ್ಪತ್ರೆಯ ಸಿಬ್ಬಂದಿ ಆತಂಕಗೊಂಡು ಕರ್ತವ್ಯ ನಿರ್ವಹಿಸುವುದಿಲ್ಲ, ನಾವು ಅವರನ್ನು ಆದಷ್ಟು ಉಳಿಸಿಕೊಳ್ಳುವ ಯತ್ನ ಮಾಡಿದ್ದೇವೆ. ಆದರೆ ಇದನ್ನು ತಿಳಿಯದೆ ನಮ್ಮ ಮೇಲೆ ಹಲ್ಲೆ ಮಾಡಲು ಮುಂದಾದರೆ ಹೇಗೆ, ನಮಗೆ ರಕ್ಷಣೆ ಇಲ್ಲದ ಮೇಲೆ ಏಕೆ ಕರ್ತವ್ಯ ನಿರ್ವಹಿಸಬೇಕು ಎಂದು ಆಸ್ಪತ್ರೆಯಿಂದ ಹೊರ ನಡೆದು ಬೇಸರ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ತಹಶೀಲ್ದಾರ್ ರವಿಶಂಕರ್, ಪೊಲೀಸ್ ಇನ್ಸ್​​ಪೆಕ್ಟರ್ ಮಹದೇವಸ್ವಾಮಿ, ಸಬ್ ಇನ್ಸ್​ಪೆಕ್ಟರ್ ರಾಜೇಂದ್ರ ಮಧ್ಯ ಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿ ಆಸ್ಪತ್ರೆಯ ಸಿಬ್ಬಂದಿ ಸಮಾಧಾನಪಡಿಸಿದರು. ಕರ್ತವ್ಯಕ್ಕೆ ಹಾಜರಾಗುವಂತೆ ಮನವಿ ಮಾಡಿದ ಹಿನ್ನೆಲೆ ವೈದ್ಯರು ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಇನ್ನು ಕೋವಿಡ್ ಕೇರ್ ಸೆಂಟರ್​​ನಲ್ಲಿ ತಮಗೆ ಸರಿಯಾಗಿ ಊಟ, ಚಿಕಿತ್ಸೆ ನೀಡುತ್ತಿಲ್ಲವೆಂದು ಆರೋಪಿಸಿ ಚಾಮರಾಜನಗರ ಮೆಡಿಕಲ್ ಕಾಲೇಜಿನಲ್ಲಿ ಸೋಂಕಿತರು ಪ್ರತಿಭಟನೆ ನಡೆಸಿದ್ದಾರೆ. ಸರಿಯಾಗಿ ಊಟ ತಿಂಡಿ ಮತ್ತು ಮಾತ್ರೆಗಳನ್ನು ನೀಡುತ್ತಿಲ್ಲವೆಂದು ಸೋಂಕಿತರು ಆರೋಪಿಸಿದ್ದು, ಕೆಲಕಾಲ ವೈದ್ಯರು ಹಾಗೂ ಸೋಂಕಿತರ ನಡುವೆ ವಾಗ್ವಾದ ನಡೆದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.